ನವದೆಹಲಿ: ದೆಹಲಿ ವಕ್ಫ್ ಬೋರ್ಡ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ದೆಹಲಿ ಎಸಿಬಿ ಶುಕ್ರವಾರ ಸಂಜೆ ಬಂಧಿಸಿದೆ.
ಇಂದು ನಡೆಸಲಾದ ಶೋಧನೆಯಲ್ಲಿ ಅಮಾನತುಲ್ಲಾ ಖಾನ್ ವಿರುದ್ಧ ದೋಷಾರೋಪಣೆಯ ವಸ್ತು ಮತ್ತು ಸಾಕ್ಷ್ಯಗಳನ್ನು ವಶಪಡಿಸಿಕೊಂಡ ಬಳಿಕ ಬಂಧಿಸಲಾಗಿದೆ.
ದೆಹಲಿ ವಕ್ಫ್ ಮಂಡಳಿಯ ವ್ಯವಹಾರಗಳ ನಿರ್ವಹಣೆಯಲ್ಲಿ, ಭ್ರಷ್ಟಾಚಾರ ತಡೆಗಟ್ಟುವಿಕೆ ಕಾಯ್ದೆಯ ಸೆಕ್ಷನ್ 7 ರ ಅಡಿಯಲ್ಲಿ 2020 ರ ಎಫ್‌ಐಆರ್ ನ ಅಡಿ ಅಮಾನತುಲ್ಲಾ ಖಾನ್ ಅವರನ್ನು ಎಸಿಬಿ ಕಚೇರಿಯಲ್ಲಿ ಪ್ರಶ್ನಿಸಲಾಗಿತ್ತು.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ- ರಷ್ಯಾ ಅಧ್ಯಕ್ಷ ಪುಟಿನ್ ಮಹತ್ವದ ಮಾತುಕತೆ
”ನನ್ನ ಕುಟುಂಬ ಸದಸ್ಯರಿಗೆ ಹಿಂದಿನಿಂದ ಕಿರುಕುಳ ನೀಡಲು ನನ್ನನ್ನು ಎಸಿಬಿ ಕಚೇರಿಗೆ ವಿಚಾರಣೆಗಾಗಿ ಕರೆಸಲಾಯಿತು ಮತ್ತು ದೆಹಲಿ ಪೊಲೀಸರಿಗೆ ಕಳುಹಿಸಲಾಯಿತು. ಲೆಫ್ಟಿನೆಂಟ್ ಗವರ್ನರ್ ದೆಹಲಿ ಸರ್, ಸತ್ಯ ಎಂದಿಗೂ ನೋಯಿಸುವುದಿಲ್ಲ, ಅದನ್ನು ನೆನಪಿಡಿ.ಈ ದೇಶದ ಸಂವಿಧಾನ ಮತ್ತು ನ್ಯಾಯಾಂಗದ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ” ಎಂದು ಅಮಾನತುಲ್ಲಾ ಖಾನ್ ಟ್ವೀಟ್ ಮಾಡಿದ್ದರು.
ಖಾನ್ ಅವರ ಆಪ್ತರಿಂದ ಎಸಿಬಿ ನಡೆಸಿದ ದಾಳಿಯಲ್ಲಿ ಎರಡು ಶಸ್ತ್ರಾಸ್ತ್ರಗಳು ಮತ್ತು 24 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಖಾನ್ ಮತ್ತು ಅವರ ವ್ಯಾಪಾರ ಪಾಲುದಾರ ಹಮೀದ್ ಅಲಿ ಖಾನ್, ಮಸೂದ್ ಉಸ್ಮಾನ್ ಅವರಿಗೆ ಸೇರಿದ ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿತು. ದಾಳಿಯ ವೇಳೆ ಅಧಿಕಾರಿಗಳು ಒಂದು ಬೆರೆಟ್ಟಾ ಆಯುಧ ಮತ್ತು ಕೆಲವು ಕಾಟ್ರಿಡ್ಜ್‌ಗಳು ಮತ್ತು ನಗದು ವಶಪಡಿಸಿಕೊಂಡಿದ್ದಾರೆ.