Advertisement

AAP: ಲೋಕಸಭೆ ಚುನಾವಣೆ – ಗೋವಾದಲ್ಲಿ ನೂತನ ಕಾರ್ಯಕಾರಿ ಸಮಿತಿ ಪ್ರಕಟಿಸಿದ ಆಪ್‌

06:08 PM Sep 27, 2023 | Team Udayavani |

ಪಣಜಿ: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ) ಗೋವಾದಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ಪ್ರಕಟಿಸಿದೆ. ಅಮಿತ್ ಪಾಲೇಕರ್ ಅವರನ್ನು ಪಕ್ಷದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಲಾಗಿದೆ. ಹಾಗಾಗಿ ಇತರೆ 27 ಸದಸ್ಯರ ಯಾದಿಯನ್ನು ಪ್ರಕಟಿಸಲಾಗಿದೆ. ಏತನ್ಮಧ್ಯೆ, ಪದಾಧಿಕಾರಿಗಳ ಪೈಕಿ ಒಬ್ಬರು ನೇಮಕಕ್ಕೆ ಒಂದು ದಿನ ಮುಂಚಿತವಾಗಿ ಸ್ಥಾನ ಮತ್ತು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.

Advertisement

ಎಎಪಿ ಮಂಗಳವಾರ ತನ್ನ 27 ಸದಸ್ಯರ ಪಟ್ಟಿಯನ್ನು ಪ್ರಕಟಿಸಿದೆ. ಪ್ರಾದೇಶಿಕ ಉಪಾಧ್ಯಕ್ಷರಾಗಿ ಪ್ರತಿಮಾ ಕುಟಿನ್ಹೊ, ಸಂದೇಶ್ ಟೆಲೇಕರ್ ದೇಸಾಯಿ, ಸಿದ್ಧೇಶ್ ಭಗತ್, ಸುನಿಲ್ ಸಿಗ್ನಾಪುರ್ಕರ್ ಮತ್ತು ರಾಕ್ ಮಸ್ಕರೇನ್ಹಸ್ ಅವರನ್ನು ನೇಮಕ ಮಾಡಲಾಗಿದೆ.

ಆದರೆ ಪ್ರತಿಮಾ ಕುತಿನ್ಹೊ ರಾಜ್ಯ ಉಪಾಧ್ಯಕ್ಷ ಸ್ಥಾನ ಮತ್ತು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ನೇಮಕದ ಎರಡನೇ ದಿನದಲ್ಲಿ ರಾಜೀನಾಮೆ ನೀಡಿರುವುದು ಪಕ್ಷಕ್ಕೆ ದೊಡ್ಡ ಹೊಡೆತ ಎಂದು ಪರಿಗಣಿಸಲಾಗಿದೆ. ಕುತಿನ್ಹೋ ರಾಜ್ಯದ ವಿವಿಧ ಸಮಸ್ಯೆಗಳ ಬಗ್ಗೆ ಆಕ್ರಮಣಕಾರಿ ನಿಲುವು ತಳೆಯುವುದಕ್ಕೆ ಹೆಸರುವಾಸಿಯಾಗಿದ್ದರು.

ಸುರೆಲ್ ಟಿಲ್ವೆ ಅವರನ್ನು ಪ್ರಾದೇಶಿಕ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ ಮತ್ತು ಫ್ರಾನ್ಸಿಸ್ ಕೊಯೆಲ್ಹೋ ಅವರನ್ನು ಪ್ರಾದೇಶಿಕ ಪ್ರಧಾನ ಕಾರ್ಯದರ್ಶಿಯಾಗಿ (ಪ್ರಚಾರ ಮತ್ತು ಸಂವಹನ) ನೇಮಿಸಲಾಗಿದೆ. ಸಿದ್ಧೇಶ್ ಭಗತ್ ಮುಖ್ಯ ವಕ್ತಾರರು.

ಪದಾಧಿಕಾರಿಗಳು: ಅನಿಲ್ ಗಾಂವ್ಕರ್ (ಎಸ್‍ಸಿ ಅಧ್ಯಕ್ಷ), ಉಪೇಂದ್ರ ಗಾಂವ್ಕರ್ (ಒಬಿಸಿ ಅಧ್ಯಕ್ಷ), ಹಂಝಲ್ ಫೆನಾರ್ಂಡಿಸ್ (ಅಲ್ಪಸಂಖ್ಯಾತ ಅಧ್ಯಕ್ಷ), ರೋಹನ್ ನಾಯಕ್ (ಯುವ ಅಧ್ಯಕ್ಷ), ಸುಷ್ಮಾ ಗಾವ್ಡೆ (ಮಹಿಳಾ ಉತ್ತರ ಅಧ್ಯಕ್ಷೆ) ಮತ್ತು ಪೆಟ್ರೀಷಿಯಾ ಫೆನಾರ್ಂಡಿಸ್ (ಮಹಿಳಾ ದಕ್ಷಿಣ ಅಧ್ಯಕ್ಷರು) ರನ್ನಾಗಿ ನೇಮಕ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next