Advertisement

AAP ನಾಯಕ ಸಂಜಯ್ ಸಿಂಗ್ ಅ.10ರವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ

09:53 PM Oct 05, 2023 | Team Udayavani |

ಹೊಸದಿಲ್ಲಿ: ದೆಹಲಿ ಮದ್ಯ ನೀತಿ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ( ED) ಬುಧವಾರ ಬಂಧಿಸಿರುವ ಆಮ್ ಆದ್ಮಿ ಪಕ್ಷದ ನಾಯಕ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನು ಅಕ್ಟೋಬರ್ 10 ರವರೆಗೆ ಕೇಂದ್ರ ಏಜೆನ್ಸಿಯ ಕಸ್ಟಡಿಗೆ ಕಳುಹಿಸಲಾಗಿದೆ.

Advertisement

ಇಡಿ ಕಸ್ಟಡಿಗೆ ದೆಹಲಿ ನ್ಯಾಯಾಲಯ ಗುರುವಾರ ಒಪ್ಪಿಸಿದ್ದು, ವಿಶೇಷ ನ್ಯಾಯಾಧೀಶ ಎಂ.ಕೆ.ನಾಗ್ಪಾಲ್ ಈ ಆದೇಶ ನೀಡಿದರು.ಇಡಿ ಪರ ವಾದ ಮಂಡಿಸಿದ ವಕೀಲರು, ಸಿಂಗ್ ಅವರ ನಿವಾಸದಲ್ಲಿ ಸುಮಾರು 2 ಕೋಟಿ ರೂ. ವಿನಿಮಯವಾಗಿದೆ ಎಂದು ವಾದಿಸಿದರು.

ಹಿರಿಯ ಎಎಪಿ ನಾಯಕ ದೆಹಲಿಯ ಆಡಳಿತ ಪಕ್ಷದಿಂದ ಒಂದು ವರ್ಷದಲ್ಲಿ ಏಜೆನ್ಸಿಯಿಂದ ಬಂಧಿಸಲ್ಪಟ್ಟ ಮೂರನೇ ವ್ಯಕ್ತಿಯಾಗಿದ್ದಾರೆ. ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಈಗಾಗಲೇ ಪ್ರತ್ಯೇಕ ಪ್ರಕರಣಗಳಲ್ಲಿ ಜೈಲಿನಲ್ಲಿದ್ದಾರೆ. ಸಿಂಗ್ ವಿರುದ್ಧ ಹೊಸ ಪುರಾವೆಗಳ ನಂತರ, ಇಡಿ ಈ ವಿಷಯದ ಬಗ್ಗೆ ಸಿಬಿಐಗೆ ಪತ್ರ ಬರೆದಿದೆ.

ಬುಧವಾರ ಅವರ ನಿವಾಸದಲ್ಲಿ 10 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ ಬಳಿಕ ಸಿಂಗ್ ಅವರನ್ನು ಬಂಧಿಸಲಾಗಿತ್ತು. ನಿವಾಸ ಮಾತ್ರವಲ್ಲದೆ ಸಂಜಯ್ ಸಿಂಗ್ ಅವರಿಗೆ ಸಂಬಂಧಿಸಿದ ಹಲವು ಆವರಣಗಳಲ್ಲಿಯೂ ಶೋಧ ನಡೆಸಿತ್ತು. ಬಂಧನಕ್ಕೆ ಮುನ್ನ, ಸಿಂಗ್ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿ, ”ನಾನು ಸಾಯಲು ಸಿದ್ಧ ಆದರೆ ಭಯಪಡುವುದಿಲ್ಲ. ನಾನು ಪ್ರಧಾನಿ ನರೇಂದ್ರ ಮೋದಿ, ಗೌತಮ್ ಅದಾನಿ ಮತ್ತು ಅವರ ಭ್ರಷ್ಟಾಚಾರದ ಬಗ್ಗೆ ನಿರಂತರವಾಗಿ ಮಾತನಾಡುತ್ತೇನೆ” ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next