Advertisement
ಪಕ್ಷದ ಸಂಸ್ಥಾಪಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಅನುಪಸ್ಥಿತಿಯಲ್ಲಿ ಪತ್ನಿ ಪ್ರಚಾರ ಆರಂಭಿಸಿ ಪಂಚ ಗ್ಯಾರಂಟಿಗಳನ್ನು ಪಕ್ಷದ ಪ್ರಮುಖ ನಾಯಕರೊಂದಿಗೆ ಘೋಷಣೆ ಮಾಡಿ ಆಡಳಿತಾರೂಢ ಬಿಜೆಪಿಗೆ 1 ಸ್ಥಾನವೂ ಬರಬಾರದು ಎಂದು ಗುಡುಗಿದ್ದಾರೆ. ಆಪ್ ಇಂಡಿಯಾ ಮೈತ್ರಿಕೂಟದಲ್ಲಿದ್ದರೂ ಹರಿಯಾಣದಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ ಎಲ್ಲ 90 ಸ್ಥಾನಗಳಲ್ಲಿ ಸ್ಪರ್ಧಿಸಲು ಮುಂದಾಗಿದೆ.
Related Articles
Advertisement
ಪಂಜಾಬ್ ಸಿಎಂ ಭಗವಂತ್ ಮಾನ್ ಮಾತನಾಡಿ ‘ನಾವು ರಾಜಕೀಯವನ್ನು ವ್ಯಾಪಾರ ಎಂದು ಪರಿಗಣಿಸುವುದಿಲ್ಲ.ಇದು ಕೇವಲ ವೃತ್ತಿಯಲ್ಲ ಆದರೆ ನಮಗೆ ಉತ್ಸಾಹವಾಗಿದೆ. ಪ್ರತಿಪಕ್ಷಗಳು ಒಳ್ಳೆಯವರಾಗಿದ್ದರೆ, ನಾವು ಪಕ್ಷವನ್ನು ರಚಿಸಬೇಕಾಗಿರಲ್ಲ. ಅವರು ನಮಗೆ ಸವಾಲೆಸೆದರು.ಹರಿಯಾಣದ ಜನರು ಪ್ರತಿ ಪಕ್ಷಕ್ಕೂ ಸಮಯ ಮತ್ತು ಅವಕಾಶವನ್ನು ನೀಡಿದರು, ಆದರೆ ಯಾವುದೂ ಒಳ್ಳೆಯದನ್ನು ಮಾಡಿಲ್ಲ ಎಂದರು.
2019 ರಲ್ಲಿ 40 ಸ್ಥಾನ ಗೆದ್ದ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತಾದರೂ ಸ್ಪಷ್ಟ ಬಹುಮತ ಪಡೆದಿರಲಿಲ್ಲ. ಜನನಾಯಕ ಜನತಾ ಪಕ್ಷ ಮತ್ತು ಏಳು ಸ್ವತಂತ್ರ ಶಾಸಕರೊಂದಿಗೆ ಚುನಾವಣೋತ್ತರ ಮೈತ್ರಿ ಮಾಡಿ ಸರ್ಕಾರವನ್ನು ರಚಿಸಿತ್ತು. ಕಾಂಗ್ರೆಸ್ 31 ಸ್ಥಾನಗಳನ್ನು ಗೆದ್ದಿಕೊಂಡಿತ್ತು. ಆಪ್ 2019 ರ ವಿಧಾನಸಭಾ ಚುನಾವಣೆಯಲ್ಲಿ 46 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ರಾಜ್ಯದೆಲ್ಲೆಡೆ ಒಟ್ಟು 59,839 ಮತಗಳನ್ನು ಮಾತ್ರ ಪಡೆದಿತ್ತು. ಈಗ ಸಂಘಟನೆಯನ್ನು ಬಲಪಡಿಸಿಕೊಂಡಿದೆ.