ಕಲಬುರಗಿ: ಚಂಡೀಗಢ ನಗರಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಹಿನ್ನೆಲೆಯಲ್ಲಿ ನಗರದ ಸರ್ದಾರ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಬುಧವಾರ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ನಗರಸಭೆಯ ಹಿಂದಿನ ಚುನಾ ವಣೆಯಲ್ಲಿ ಬಿಜೆಪಿ 20 ಸ್ಥಾನ ಗೆದ್ದು ಅಧಿಕಾರದಲ್ಲಿತ್ತು. ಈ ಸಲ ನಡೆದ ಚುನಾವಣೆ ಫಲಿತಾಂಶದಲ್ಲಿ ಆಮ್ ಆದ್ಮಿ 14 ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಬಂದಿದೆ. ಅಧಿಕಾರದಲ್ಲಿದ್ದ ಬಿಜೆಪಿ 12 ಸ್ಥಾನ ಪಡೆದು ಎರಡನೇ ಸ್ಥಾನಕ್ಕೆ ಮತ್ತು ಕಾಂಗ್ರೆಸ್ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇದಕ್ಕೆ ಆಮ್ ಆದ್ಮಿ ಪಕ್ಷದ ಜನರ ನಿಲುವುಗಳೇ ಕಾರಣ ಎಂದು ಮುಖಂಡರು ಹರ್ಷ ವ್ಯಕ್ತಪಡಿಸಿದರು.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶಿಕ್ಷಣ, ಆರೋಗ್ಯ ಕ್ಷೇತ್ರ ಮತ್ತು ಆಡಳಿತದಲ್ಲಿ ಸಾಕಷ್ಟು ಸುಧಾರಣೆ ತಂದಿದ್ದಾರೆ. ಉಚಿತವಾಗಿ ವಿದ್ಯುತ್ ಕೊಡುವ ನೀತಿಗೆ ಜನರು ಮೆಚ್ಚಿ ಚಂಡೀಗಢ್‌ನಲ್ಲಿ ಪಕ್ಷಕ್ಕೆ ಮತ ನೀಡಿದ್ದಾರೆ ಎಂದು ಮುಖಂಡರು ಸಾರ್ವಜನಿಕರಿಗೆ ಸಿಹಿ ಹಂಚಿದರು.
ಪಕ್ಷದ ಮುಖಂಡರಾದ ಕಿರಣ ರಾಠೊಡ, ಮೋಹಸಿನ್ ಅಲಿ, ಡಾ| ಇಮ್ರಾನ್ ಅಹ್ಮದ್, ಗುಲಾಂ ರಸೂಲ್, ಸುಲೇಮಾನ ಅಲಿ, ಶರಣಬಸಪ್ಪ, ರಾಘವೇಂದ್ರ ಚಿಂಚನಸೂರ, ಮೇಘರಾಜ, ಮುಕ್ತದೀರ ಖಾನ್, ಶಾಹೀದ್, ಆಸೀಫ್ ಖಾನ್, ಗುಲಾಂ ನಬಿ, ಸೈಯದ್ ಅಶ್ಫಾ ಕ್ ಅಲಿ, ಶμ, ಚಂದ್ರಲೀಲಾ, ತೇಜಸ್ವಿನಿ, ಸಂಗೀತಾ, ವಸಂತ, ವೇದಮೋಹನ, ತಾಹಿರಾ ಪಾಶಾ ಈ ಸಂದರ್ಭದಲ್ಲಿದ್ದರು.