ನವದೆಹಲಿ: ಕಳೆದ ತಿಂಗಳು ನಡೆದ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಕುಲದೀಪ್ ಕುಮಾರ್ ಅವರನ್ನು ವಿಜಯಿ ಎಂದು ಘೋಷಿಸುವ ಮೂಲಕ ಸುಪ್ರೀಂ ಕೋರ್ಟ್ ಮಂಗಳವಾರ ಐತಿಹಾಸಿಕ ತೀರ್ಪು ನೀಡಿದೆ. ಇದರೊಂದಿಗೆ ಆಮ್ ಆದ್ಮಿ ಪಕ್ಷಕ್ಕೆ ದೊಡ್ಡ ಜಯ ಸಿಕ್ಕಿದಂತಾಗಿದೆ.
ಮತಯಂತ್ರಗಳಲ್ಲಿ ತಪ್ಪು ಫಲಿತಾಂಶ ನೀಡಿದ ಆರೋಪದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಈ ವೇಳೆ ನ್ಯಾಯಾಲಯ ಮಹತ್ವದ ನಿರ್ಧಾರ ಕೈಗೊಂಡು ಚುನಾವಣಾಧಿಕಾರಿಯ ವರ್ತನೆಯನ್ನು ಅಪರಾಧ ಎಂದು ಬಣ್ಣಿಸಿದೆ. ಚುನಾವಣಾಧಿಕಾರಿ ಅನಿಲ್ ಮಸಿಹ್ ಅಪರಾಧ ಎಸಗಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ನ್ಯಾಯಾಲಯ ಹೇಳಿದೆ. ಇದರೊಂದಿಗೆ ಚುನಾವಣಾಧಿಕಾರಿ ಅನಿಲ್ ಮಸಿಹ್ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದ್ದು, ಉತ್ತರ ಕೇಳಿದೆ.
ಈ ಮೂಲಕ ಸ್ವತಃ ಸುಪ್ರೀಂ ಕೋರ್ಟ್ ಚಂಡೀಗಢದ ಮೇಯರ್ ಎಂದು ಘೋಷಿಸಿದೆ. ಅಮಾನ್ಯವಾಗಿರುವ ಮತಪತ್ರಗಳು ಸರಿಯಾಗಿವೆ ಎಂದು ನ್ಯಾಯಾಲಯ ಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ ಮರು ಚುನಾವಣೆ ನಡೆಸುವ ಅಥವಾ ಮತ ಎಣಿಕೆ ಮಾಡುವ ಅಗತ್ಯವಿಲ್ಲ. ಅಸಿಂಧು ಎಂದು ಘೋಷಿಸಿದ ಮತಗಳೂ ಸೇರಿದರೆ, ಆಮ್ ಆದ್ಮಿ ಪಕ್ಷ ಒಟ್ಟು 20 ಮತಗಳನ್ನು ಪಡೆದಿದ್ದು, ಅದರ ಅಭ್ಯರ್ಥಿ ಕುಲದೀಪ್ ಕುಮಾರ್ ವಿಜಯಿ ಎಂದು ಘೋಷಿಸಲಾಗಿದೆ. ಈ ಮೂಲಕ ಮೇಯರ್ ಚುನಾವಣೆಯಲ್ಲಿ ಅವ್ಯವಹಾರ ನಡೆದಿದೆ, ಪಡೆದ ಮತಗಳನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ ಎಂದು ನಿರಂತರವಾಗಿ ಆರೋಪಿಸುತ್ತಿದ್ದ ಆಮ್ ಆದ್ಮಿ ಪಕ್ಷಕ್ಕೆ ಕೊನೆಗೂ ಜಯ ಸಿಕ್ಕಿದೆ.
ಈ ಪ್ರಕರಣದಲ್ಲಿ ಚುನಾವಣಾಧಿಕಾರಿಗಳು ತಪ್ಪಿತಸ್ಥರು ಎಂದು ನ್ಯಾಯಾಲಯ ಹೇಳಿದೆ. ಚುನಾವಣೆಯಲ್ಲಿ ಅಕ್ರಮವೆಸಗಿದ್ದ ಅವರು ನ್ಯಾಯಾಲಯದಲ್ಲೂ ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು. ಸುಪ್ರೀಂ ಕೋರ್ಟ್ ಆದೇಶ ಬಂದ ತಕ್ಷಣ ಆಮ್ ಆದ್ಮಿ ಪಕ್ಷ ಇದನ್ನು ಪ್ರಜಾಪ್ರಭುತ್ವದ ವಿಜಯ ಎಂದು ಕರೆದಿದೆ.
ಇದನ್ನೂ ಓದಿ: PM ಮೋದಿಗೆ ಹೆದರಿ ಕಾಂಗ್ರೆಸ್ ಬಿಡುತ್ತಿರುವ ನಾಯಕರು: ಮಲ್ಲಿಕಾರ್ಜುನ ಖರ್ಗೆ