Advertisement

ಪಂಜಾಬ್‌: ಲೋಕಸಭೆಗೆ ಸ್ಫರ್ಧಿಸುವ 5 ಆಪ್‌ ಅಭ್ಯರ್ಥಿಗಳ ಹೆಸರು ಪ್ರಕಟ

04:39 PM Oct 30, 2018 | Team Udayavani |

ಹೊಸದಿಲ್ಲಿ : 2019ರ ಲೋಕಸಭಾ ಚುನಾವಣೆಯಲ್ಲಿ ಪಂಜಾಬ್‌ನಿಂದ ಸ್ಪರ್ಧಿಸುವ ತನ್ನ  ಐವರು ಅಭ್ಯರ್ಥಿಗಳ ಹೆಸರನ್ನು ಆಮ್‌ ಆದ್ಮಿ ಪಕ್ಷ ಇಂದು ಪ್ರಕಟಿಸಿತು. 

Advertisement

ಹಾಲಿ ಸಂಸದ ಭಗವಂತ್‌ ಮಾನ್‌ ಮತ್ತು ಸಾಧು ಸಿಂಗ್‌ ಅವರು ತಮ್ಮ ಅನುಕ್ರಮ ಕ್ಷೇತ್ರಗಳಾದ ಸಂಗ್ರೂರ್‌ ಮತ್ತು ಫ‌ರೀದ್‌ಕೋಟ್‌ ನಿಂದ ಸ್ಫರ್ಧಿಸುತ್ತಾರೆ. 

2017ರ ಅಸೆಂಬ್ಲಿ ಚುನಾವಣೆಯಲ್ಲಿ  ಶಾಮ್‌ ಚೌರಾಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ರವಜ್ಯೋತ್‌ ಸಿಂಗ್‌ ಅವರು ಹೋಶಿಯಾರ್‌ಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ. 

ಕುಲದೀಪ್‌ ಸಿಂಗ್‌ ಧಲೀವಾಲ್‌ ಅವರು ಅಮೃತ್‌ಸರ ಸಾಹೀಬ್‌ ಕ್ಷೇತ್ರದಿಂದಲೂ ನರೀಂದರ್‌ ಸಿಂಗ್‌ ಶೇರ್‌ಗಿಲ್‌ ಅವರು ಆನಂದಪುರ ಸಾಹಿಬ್‌ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಾರೆ ಎಂದು ಆಮ್‌ ಆದ್ಮಿ ಪ್ರಕಟನೆ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next