Advertisement

Sai Pallavi: ಆಮಿರ್ ಪುತ್ರ ಜುನೈದ್‌ ಖಾನ್ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿ?

12:31 PM Sep 14, 2023 | Team Udayavani |

ಮುಂಬಯಿ: ಸ್ಟಾರ್‌ ನಟ – ನಟಿಯರ ಮಕ್ಕಳುಸಿನಿಮಾರಂಗಕ್ಕೆ ಬರುವುದು ಹೊಸತಲ್ಲ. ತಂದೆಯಂತೆ ಬಣ್ಣದ ಲೋಕದಲ್ಲಿ ಮಿಂಚಲು ಆಮಿರ್‌ ಖಾನ್‌ ಅವರ ಪುತ್ರ ಜುನೈದ್‌ ಖಾನ್‌ ಕಾಯುತ್ತಿದ್ದಾರೆ. ಅವರ ಮೊದಲ ಸಿನಿಮಾ ತಯಾರಿ ಹಂತದಲ್ಲಿ ಇರುವಾಗಲೇ, ಇದೀಗ ಎರಡನೇ ಸಿನಿಮಾದ ಬಗ್ಗೆಯೂ ಚರ್ಚೆಗಳು ಆರಂಭವಾಗಿದೆ.

Advertisement

ಆಮಿರ್‌ ಖಾನ್‌ ಅವರ ಪುತ್ರ ಜುನೈದ್‌ ಖಾನ್‌ ಬಿಟೌನ್‌ ಎಂಟ್ರಿ ಆಗುತ್ತಿರುವ ವಿಚಾರದ ಹೊಸದೇನಲ್ಲ. ಅವರ ಸಿನಿಮಾವನ್ನು ಯಶ್‌ ರಾಜ್‌ ಫಿಲ್ಮ್ಸ್‌ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಅವರು ಸಿನಿಮಾಕ್ಕಾಗಿ ಸಾಕಷ್ಟು ತಯಾರಿ ನಡೆಸಿಕೊಂಡಿದ್ದಾರೆ. ನಟನೆಯ ವಿಚಾರವಾಗಿ ಅವರು ಇನ್ನು ಕೂಡ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ.

ಮೊದಲ ಸಿನಿಮಾದ ಬಗ್ಗೆ ಮಾತುಗಳು ನಡೆಯುತ್ತಿರುವಾಗಲೇ ಅವರ ಎರಡನೇ ಸಿನಿಮಾದ ಬಗೆಗಿನ ಕೆಲ ವಿಚಾರಗಳು ರಿವೀಲ್‌ ಆಗಿದೆ. ವರದಿಯ ಪ್ರಕಾರ ಜುನೈದ್‌ ಖಾನ್‌ ಅವರು ತಮ್ಮ ಎರಡನೇ ಸಿನಿಮಾದಲ್ಲಿ ಲವರ್‌ ಬಾಯ್‌ ಆಗಿ ಕಾಣಿಸಿಕೊಳ್ಳಲಿದ್ದು, ಈ ಸಿನಿಮಾವನ್ನು ಸುನೀಲ್ ಪಾಂಡೆ ನಿರ್ದೇಶಿಸಲಿದ್ದಾರೆ. ಇನ್ನೊಂದು ಬಹುಮುಖ್ಯ ವಿಚಾರವೆಂದರೆ ಈ ಸಿನಿಮಾದಲ್ಲಿ ನಾಯಕಿಯಾಗಿ ಮಾಲಿವುಡ್‌ ನ ಮೋಹಕ ನಟಿ ಸಾಯಿ ಪಲ್ಲವಿ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಎಲ್ಲಾ ಮಾತುಕತೆಗಳು ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: Bollywood: ನಸೀರುದ್ದೀನ್ ಶಾ ಭಯೋತ್ಪಾದಕರನ್ನು ಇಷ್ಟಪಡುವವರು.. ವಿವೇಕ್‌ ಅಗ್ನಿಹೋತ್ರಿ

ಈ ಸುದ್ದಿ ಬಿಟೌನ್‌ ವಲಯದಲ್ಲಿ ವೈರಲ್‌ ಆಗಿದೆ. ಆದರೆ ಈ ಬಗ್ಗೆ ಇನ್ನಷ್ಟೇ ಅಧಿಕೃತವಾಗಿ ಮಾಹಿತಿ ಹೊರಬೀಳಬೇಕಿದೆ.

Advertisement

ನಟನೆಯ ವಿಚಾರವಾಗಿ ಬಂದರೆ ಆಮಿರ್‌ ಖಾನ್‌ ಪುತ್ರ ಜುನೈದ್‌ ಖಾನ್‌ ಅವರು ಈಗಾಗಲೇ ರಂಗಭೂಮಿಯಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ. ಲಾಸ್ ಏಂಜಲೀಸ್‌ನಲ್ಲಿರುವ ಅಮೇರಿಕನ್ ಅಕಾಡೆಮಿ ಆಫ್ ಡ್ರಾಮಾಟಿಕ್ ಆರ್ಟ್ಸ್ ನಲ್ಲಿ ಕ್ವೇಸರ್ ಠಾಕೋರ್ ಪದಮ್ಸೀ ನಿರ್ದೇಶನದ “ಮದರ್ ಕರೇಜ್ ಅಂಡ್ ಹರ್ ಚಿಲ್ಡ್ರನ್” ನಾಟಕದಲ್ಲಿ ನಟಿಸಿದ್ದಾರೆ. ಜುನೈದ್ ಎರಡು ವರ್ಷಗಳ ಕಾಲ ರಂಗಭೂಮಿಯನ್ನು ಅಧ್ಯಯನ ಮಾಡಿದ್ದಾರೆ.. ಪಿಕೆಯಲ್ಲಿ ಜುನೈದ್ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಸಲ್ಲಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next