Advertisement

ಟೆಸ್ಟ್‌ ಕ್ರಿಕೆಟಿಗೆ ಆಮಿರ್‌ ಗುಡ್‌ಬೈ

11:06 PM Jul 26, 2019 | Sriram |

ಕರಾಚಿ: ಪಾಕಿಸ್ಥಾನದ ಎಡಗೈ ವೇಗಿ ಮೊಹಮ್ಮದ್‌ ಆಮಿರ್‌ ಟೆಸ್ಟ್‌ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ. ಆದರೆ ಸೀಮಿತ ಓವರ್‌ಗಳ ಪಂದ್ಯದಲ್ಲಿ ಮುಂದುವರಿಯಲಿದ್ದಾರೆ.

Advertisement

ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಸಿಲುಕಿ 5 ವರ್ಷಗಳ ನಿಷೇಧಕ್ಕೊಳಗಾಗಿದ್ದ ಆಮಿರ್‌ 36 ಟೆಸ್ಟ್‌ ಪಂದ್ಯಗಳಿಂದ 119 ವಿಕೆಟ್‌ ಉರುಳಿಸಿದ್ದಾರೆ. ಅವರು 2009ರಲ್ಲಿ ಶ್ರೀಲಂಕಾ ವಿರುದ್ಧ ಗಾಲೆ ಯಲ್ಲಿ ಟೆಸ್ಟ್‌ ಪದಾರ್ಪಣೆ ಮಾಡಿದ್ದರು.

“ಸಾಂಪ್ರದಾಯಿಕ ಕ್ರಿಕೆಟ್‌ನಲ್ಲಿ ಪಾಕಿಸ್ಥಾನವನ್ನು ಪ್ರತಿನಿಧಿಸುವ ಅವಕಾಶ ಲಭಿಸಿದ್ದು ನನ್ನ ಪಾಲಿನ ಗೌರವ. ಇದು ನನ್ನ ಮಹದಾಸೆಯೂ ಆಗಿತ್ತು. ಆದರೆ ನಿವೃತ್ತಿ ನಿರ್ಧಾರ ಸುಲಭದ್ದಾಗಿರಲಿಲ್ಲ. ಸದ್ಯದಲ್ಲೇ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಆರಂಭವಾಗಲಿದೆ. ಪಾಕಿಸ್ಥಾನದಲ್ಲಿ ಪ್ರತಿಭಾನ್ವಿತ ವೇಗಿಗಳ ದಂಡೇ ಇದೆ. ಹೀಗಾಗಿ ಟೆಸ್ಟ್‌ ನಿವೃತ್ತಿಗೆ ಇದೇ ಸೂಕ್ತ ಸಮಯವೆಂದು ನಿರ್ಧರಿಸಿದೆ’ ಎಂಬುದಾಗಿ ಆಮಿರ್‌ ಹೇಳಿದರು.


Advertisement

Udayavani is now on Telegram. Click here to join our channel and stay updated with the latest news.

Next