Advertisement

ಅಕ್ರಮ ಕಟ್ಟಡ ತೆರವಿಗೆ ಗ್ರಾಮಸ್ಥರ ಪಟ್ಟು

10:28 AM Jul 01, 2019 | Naveen |

ಆಳಂದ: ತಾಲೂಕಿನ ನಿಂಬರಗಾ ಗ್ರಾಮದಲ್ಲಿ ನನೆಗುದಿಗೆ ಬಿದ್ದಿರುವ ಮುಖ್ಯ ರಸ್ತೆಯನ್ನು ಶೀಘ್ರವೇ ಅಕ್ರಮ ಕಟ್ಟಡ ತೆರವುಗೊಳಿಸುವ ಮೂಲಕ ಅಗಲೀಕರಣಗೊಳಿಸಿ ರಸ್ತೆ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿ ಕಳೆದ ಎಂಟು ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹ ರವಿವಾರವೂ ಮುಂದುವರಿದಿದೆ.

Advertisement

ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದರಿಂದ ಹಾಗೆ ಮುಂದುವರಿದಿದೆ.

ಗ್ರಾಮದ ಡಾ| ಅಂಬೇಡ್ಕರ್‌ ಚೌಕ್‌ದಿಂದ ಕಂಬಾರ ಅಂಗಡಿ ವರೆಗೆ ಮುಖ್ಯ ರಸ್ತೆಯಾಗಿದ್ದು, ಈ ರಸ್ತೆ ಬದಿಯಲ್ಲಿ ಕೆಲವರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಇದನ್ನು ತೆರವುಗೊಳಿಸಿ ರಸ್ತೆ ನಿರ್ಮಿಸಬೇಕು ಎಂದು ಒತ್ತಾಯಿಸಲಾಗಿದೆ. ಕಳೆದ ಎರಡು ದಿನಗಳಿಂದ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರರು ಮಂಗಳವಾರದಿಂದ ರಸ್ತೆ ಅಗಲೀಕರಣ ಕಾರ್ಯ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಅವರ ಭರವಸೆಯಂತೆ ಅಗಲೀಕರಣ ಕಾಮಗಾರಿಗಳು ನಡೆಯದೇ ಇರುವುದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತ ಪಡಿಸಿದರು.

ರಸ್ತೆ ಅಗಲೀಕರಣ ಮಾಡುವವರೆಗೂ ಧರಣಿ ಸತ್ಯಾಗ್ರಹ ಹಿಂದಕ್ಕೆ ಪಡೆಯುವುದಿಲ್ಲ ಎಂದು ಮುಖಂಡ ವಿಠ್ಠಲ ಕೋಣೆಕರ್‌ ತಿಳಿಸಿದರು.

ಪ್ರತಿಭಟನೆಯಲ್ಲಿ ಭೀಮಾಶಂಕರ ಹಳಿಮನಿ, ಪರಮೇಶ್ವರ ಶಿವಗೊಂಡ, ರವಿ ಯಳಸಂಗಿ, ರಾಚಣ್ಣ ವಾಗ್ದರಿ, ನಾಗಪ್ಪ ಟೆಕರಿ, ಮಲ್ಲಿಕಾರ್ಜುನ ನಿರ್ಮಲಕರ್‌, ಅಂಬಾರಾಯ ಮುದ್ದೇಬಿಹಾಳ, ಸಂತೋಷ ಶರಣ, ಸೂರ್ಯಕಾಂತ ಕಂಟೇಕೂರ ಇತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next