ಹೊಸದಿಲ್ಲಿ: ದೇಶೀಯ ಕ್ಷಿಪಣಿ ನಿರೋಧಕ ವ್ಯವಸ್ಥೆ “ಆಕಾಶ್’ ಏಕಕಾಲಕ್ಕೆ ನಾಲ್ಕು ಗುರಿಗಳನ್ನು ಹೊಡೆದುರುಳಿಸಿದೆ. ಆಂಧ್ರ ಪ್ರದೇಶದ ಸೂರ್ಯಲಂಕಾ ಏರ್‌ಫೋರ್ಸ್ ಸ್ಟೇಷನ್‌ನಲ್ಲಿ ಡಿ. 12ರಂ ದು ಆಯೋಜಿಸಿದ್ದ “ಅಸ್ತ್ರಶಕ್ತಿ 2023′ ಸಮರಭ್ಯಾಸದಲ್ಲಿ ಭಾರತೀಯ ವಾಯು ಪಡೆಯು ದೇಶೀಯವಾಗಿ ಅಭಿವೃದ್ಧಿ ಪಡಿಸಿದ ಆಕಾಶ್ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಪ್ರದರ್ಶಿಸಲಾಯಿತು. ಈ ವೇಳೆ ಆಕಾಶ್ ಕ್ಷಿಪಣಿಯ ಒಂದೇ ಫೈರಿಂಗ್ ಘಟಕದಿಂದ ಏಕಕಾಲದಲ್ಲಿ ನಾಲ್ಕು ಗುರಿಗಳನ್ನು (ಮಾನವರಹಿತ ವೈಮಾನಿಕ ಗುರಿಗಳು) ಹೊಡೆದು ರುಳಿಸಿತು. ಈ ರೀತಿಯ ಸಾಧನೆಯಲ್ಲಿ ಭಾರತವೇ ಮೊತ್ತಮೊದಲ ದೇಶ ಎಂದು ರಕ್ಷಣ ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ಕು ಗುರಿಗಳು ಒಂದೇ ದಿಕ್ಕಿನಿಂದ ನಿಕಟ ರಚನೆಯಲ್ಲಿ ಬರುತ್ತಿದ್ದವು ಮತ್ತು ಏಕಕಾಲದಲ್ಲಿ ಅನೇಕ ದಿಕ್ಕುಗಳಿಂದ ದಾಳಿ ನಡೆಸಲು ವಿಭಜಿಸಲ್ಪಟ್ಟವು. ಈ ಗುರಿ ಗಳನ್ನು ಪತ್ತೆ ಮಾಡಿ, ಟ್ರ್ಯಾಕ್ ಮಾಡಿದ ಆಕಾಶ್ ಕ್ಷಿಪಣಿಯು, ಏಕಕಾಲಕ್ಕೆ ನಾಲ್ಕು ಗುರಿಗಳನ್ನು ಹೊಡೆದು ಉರುಳಿಸಿತು ಎಂದು ವಿವರಿಸಿದ್ದಾರೆ.
ಆಕಾಶ್ ಫೈರಿಂಗ್ ಘಟಕವನ್ನು ಫೈರಿಂಗ್ ಲೆವೆಲ್ ರಾಡಾರ್ (ಎಫ್ಎಲ್‌ಆರ್), ಫೈರಿಂಗ್ ಕಂಟ್ರೋಲ್ ಸೆಂಟರ್(ಎಫ್ಸಿಸಿ) ಮತ್ತು ಐದು ಸಶಸ್ತ್ರ ಕ್ಷಿಪಣಿಗಳನ್ನು ಹೊಂದಿರುವ ಎರಡು ಆಕಾಶ್ ಏರ್ ಫೋರ್ಸ್ ಲಾಂಚರ್‌ಗಳೊಂದಿಗೆ (ಎಎಎಫ್ಎಲ್) ನಿಯೋ ಜಿಸಲಾಗಿದೆ. ಪರೀಕ್ಷಾರ್ಥವಾಗಿ ನಡೆದ ಪ್ರಯೋಗದಲ್ಲಿ ಕ್ಷಣಾರ್ಧದಲ್ಲಿ ನಾಲ್ಕು ಕ್ಷಿಪಣಿಗಳನ್ನು ಉಡಾಯಿ ಸಲಾಯಿತು. 30 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲ ನಾಲ್ಕು ಕ್ಷಿಪಣಿಗಳನ್ನು ಆಕಾಶ್ ಕ್ಷಿಪಣಿ ನಿರೋಧಕ ವ್ಯವಸ್ಥೆಯು ಏಕಕಾಲಕ್ಕೆ ಧ್ವಂಸಗೊಳಿಸಿತು ಎಂದು ತಿಳಿಸಿದ್ದಾರೆ.
ರಕ್ಷಣ ಸಂಶೋಧನ ಹಾಗೂ ಅಭಿವೃದ್ಧಿ ಸಂಸ್ಥೆಯು(ಡಿಆರ್‌ಡಿಒ) ಈ ಆಕಾಶ್ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಈಗಾಗಲೇ ಭಾರತೀಯ ವಾಯುಪಡೆ ಹಾಗೂ ಭಾರತೀಯ ಭೂಸೇನೆಯಲ್ಲಿ ಇದನ್ನು ನಿಯೋಜಿಸಲಾಗಿದೆ. ಕಾಲ ಕಾಲಕ್ಕೆ ಆಕಾಶ್ ಕ್ಷಿಪಣಿ ನಿರೋಧಕ ವ್ಯವಸ್ಥೆಯ ನ್ನು ಮೇಲ್ದರ್ಜೆಗೇರಿಸುವ ಕಾರ್ಯದಲ್ಲಿ ಡಿಆರ್‌ಡಿಒ ವಿಜ್ಞಾನಿಗಳು ನಿರತರಾ ಗಿದ್ದಾರೆ. ಈಗಿನ ಪರೀಕ್ಷಾರ್ಥ ಪ್ರಯೋ ಗವು ಇದರ ಭಾಗವಾಗಿದೆ. ಆಗ್ನೇಯ ಏಷ್ಯಾ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರ ಗಳಿಂ ದ ಇದಕ್ಕೆ ಬೇಡಿಕೆ ಹೆಚ್ಚಿದೆ ಎಂದು ಡಿಆರ್‌ಡಿಒ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕ್ಷಿಪಣಿಯ ಹೆಗ್ಗಳಿಕೆ ಏನು?
30 ಕಿ.ಮೀ.- ಇಷ್ಟು ದೂರ ವ್ಯಾಪ್ತಿಯಲ್ಲಿ 4 ಕ್ಷಿಪಣಿಗಳ ಛೇದನ
ಫೈರಿಂಗ್ ಲೆವೆಲ್ ರೇಡಾರ್, ಫೈರಿಂಗ್ ಕಂಟ್ರೋಲ್ ಸೆಂಟಕರ್
ಈ ಸಾಧನೆಯಲ್ಲಿ ಭಾರತವೇ ಮೊದಲ ದೇಶ
30 ಸಾವಿರ ಕೋಟಿ ರೂ.- ಇಷ್ಟು ವೆಚ್ಚದಲ್ಲಿ ಭೂಸೇನೆ, ಐಎಎಫ್ ಖರೀದಿ