ಪುಣೆ : 32 ವಯಸ್ಸಿನ ಆಕಾಂಕ್ಷಾ ಸಾಡೆಕರ್ ಹೆಸರಿನ ಯುವತಿ ಎಲೆಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಸಂಕಷ್ಟದಲ್ಲಿ ಹಸಿದ ಹೊಟ್ಟೆಗಳಿಗೆ ಅನ್ನ ನೀಡಿ ಸಾಕ್ಷಾ
ತ್
ಅನ್ನಪೂರ್ಣೆಶ್ವರಿಯಂತಾಗಿದ್ದಾರೆ.
ಕಳೆದ ತಿಂಗಳು ಕೋವಿಡ್ ಸೋಂಕು ಕೈ ಮೀರಿದ ಹಿನ್ನೆಲೆ ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಯಿತು. ಸೋಂಕಿಗೆ ಕಡಿವಾಣ ಹಾಕಲು ಈ ಕ್ರಮ ಅನಿವಾರ್ಯವಾಯಿತು. ಲಾಕ್ ಡೌನ್ ವೇಳೆ ಸಾಕಷ್ಟು ಜನರು ಸಂಕಷ್ಟಕ್ಕೀಡಾದರು. ಸರಿಯಾಗಿ ಊಟ ಸಿಗದೆ ಪರಿತಪಿಸಿದರು. ಇಂತಹ ಸಂದರ್ಭದಲ್ಲಿ ಹಸಿದ ಹೊಟ್ಟೆಗಳಿಗೆ ಅನ್ನ ನೀಡಲು ಅಕಾಂಕ್ಷಾ ಸಾಡೆಕರ್ ಪಣ ತೊಟ್ಟರು.
ಕೋವಿಡ್ ಕಾರ್ಯದಲ್ಲಿ ನಿರತರಾಗಿರುವ ವೈದ್ಯರು ಹಾಗೂ ಪೊಲೀಸರು, ವೈದ್ಯಕೀಯ ವಿದ್ಯಾರ್ಥಿಗಳಿಗೆ ನಿತ್ಯ ಆಹಾರ ತಲುಪಿಸುತ್ತಿದ್ದಾರೆ ಅಕಾಂಕ್ಷಾ. ಕುಟುಂಬದಿಂದ ದೂರ ಇರುವ ವೈದ್ಯಕೀಯ ವಿದ್ಯಾರ್ಥಿಗಳಿಗೂ ಇವರ ಅನ್ನ ದಾಸೋಹದ ಸೇವೆ ತಲುಪುತ್ತಿದೆ.
ವೇಶ್ಯೆಯರ ಮನೆ ಬಾಗಿಲಿಗೆ ಊಟ :
ಆಕಾಂಕ್ಷಾ ಅವರು ಕೇವಲ ಪೊಲೀಸ್ ಸಿಬ್ಬಂದಿ ಹಾಗೂ ವೈದ್ಯರಿಗೆ ಮಾತ್ರ ಆಹಾರ ನೀಡುತ್ತಿಲ್ಲ, ಬದಲಾಗಿ ವೇಶ್ಯೆಯರ ಹಸಿವನ್ನು ನೀಗಿಸುತ್ತಿದ್ದಾರೆ. ಅವರ ಮನೆ ಬಾಗಿಲಿಗೆ ತೆರಳಿ ಆಹಾರದ ಪೊಟ್ಟಣಗಳನ್ನು ತಲುಪಿಸುತ್ತಿದ್ದಾರೆ.
ಪ್ರತಿ ದಿನ ಮುಂಜಾನೆ ತಾವೇ ಅಡುಗೆ ಸಿದ್ಧಪಡಿಸಿ, ಪೊಟ್ಟಣಗಳಲ್ಲಿ ತುಂಬಿಕೊಂಡು ತಮ್ಮ ಸ್ಕೂಟರ್ ಮೂಲಕ ಹೊರಡುವ ಆಕಾಂಕ್ಷಾ, ಇಡೀ ಪಟ್ಟಣ ತಿರುಗಾಡಿ ಆಹಾರ ತಲುಪಿಸಿ ಬರುತ್ತಿದ್ದಾರೆ. ಇದುವರೆಗೆ ಸುಮಾರು 7000 ಜನರ ಹಸಿವು ನೀಗಿಸಿದ್ದಾರೆ.