Advertisement
ಇದು ಮೊದಲಲ್ಲ ದೇಶದಲ್ಲಿ ಇಂಥದ್ದೇ ಮಾದರಿಯಲ್ಲಿ ನಡೆದ ಭೀಕರ ಘಟನೆಗಳ ಒಂದು ಹಿನ್ನೋಟ ಇಲ್ಲಿದೆ.
Related Articles
Advertisement
ನೈನಾ ಹಾಗೂ ಮತ್ಲೂಬ್ ಕರೀಂ ಶಾಲಾ ದಿನದಿಂದ ಸ್ನೇಹಿತರಾಗಿದ್ದರು. ಇಬ್ಬರು ಆತ್ಮೀಯ ಜೊತೆಯಲ್ಲಿ ಸ್ನೇಹಿತರಾಗಿದ್ದರು. ಇದು ನೈನಾ ಅವರ ಪತಿ ಸುಶೀಲ್ ಅವರಿಗೆ ಸಹಿಸಲು ಆಗುತ್ತಿರಲಿಲ್ಲ. ಒಂದು ದಿನ ನೈನಾ ಹಾಗೂ ಕರೀಂ ಫೋನಿನಲ್ಲಿ ಮಾತನಾಡುವುದನ್ನು ನೋಡಿದ ಸುಶೀಲ್ ಸಿಟ್ಟಿನಲ್ಲಿ ನೈನಾಳನ್ನು ಗುಂಡಿಟ್ಟು ಹತ್ಯೆಗೈಯುತ್ತಾರೆ.
ಮೃತ ದೇಹವನ್ನು ರೆಸ್ಟೋರೆಂಟ್ ಗೆ ತೆಗೆದುಕೊಂಡು ಹೋಗಿ ಅಲ್ಲಿ ರೆಸ್ಟೋರೆಂಟ್ ಮ್ಯಾನೇಜರ್ ನ ಸಹಾಯದಿಂದ ನೈನಾಳ ಮೃತದೇಹವನ್ನು ತಂದೂರ್ ನಲ್ಲಿಟ್ಟು ಬೂದಿಯಾಗಿಸಲು ಯತ್ನಿಸುತ್ತಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ರೆಸ್ಟೋರೆಂಟ್ ಮ್ಯಾನೇಜರ್ ನ್ನು ಪೊಲೀಸರು ಬಂಧಿಸುತ್ತಾರೆ ಆದರೆ ಸುಶೀಲ್ ಶರ್ಮಾ ಪರಾರಿ ಆಗಿದ್ದರು. ಇದಾದ ಬಳಿಕ ಜುಲೈ 10, 1995 ರಂದು ಡಿಎನ್ ಎ ಆಧಾರದ ಮೇಲೆ ಮೃತ ದೇಹದ ಗುರುತನ್ನು ಪತ್ತೆ ಹಚ್ಚಲಾಗುತ್ತದೆ.
ಸುಶೀಲ್ ಶರ್ಮಾ ಅವರು ಪ್ರಕರಣದ ಅಪರಾಧಿಯೆಂದು ಘೋಷಿಸಲಾಗುತ್ತದೆ. ಡಿಸೆಂಬರ್ 8, 2020 ರಂದು ಸುಶೀಲ್ ಶರ್ಮಾ ಅವರು ನಿರ್ದೋಷಿ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿತ್ತು.
ಬೆಲರಾಣಿ ದತ್ತಾ ಕೇಸ್ (BELARANI DUTTA Case) : 1954 ಜನವರಿ 31, ಕೋಲ್ಕತ್ತಾದ ಕಿಯೋರಾಟಾಲಾ ಸ್ಮಶಾನದ ಶೌಚಾಲಯದ ಹೊರಗೆ ಸ್ವಚ್ಛತೆ ಮಾಡುವ ವ್ಯಕ್ತಿಯೊಬ್ಬನಿಗೆ ಸುತ್ತಿದ ಮೂರು ಪೇಪರ್ ಬಂಡಲ್ ಗಳು ಕಣ್ಣಿಗೆ ಬೀಳುತ್ತದೆ. ಅದರಲ್ಲಿ ರಕ್ತದ ಕಲೆಗಳು ಹಾಗೂ ಮಾನವನ ಬೆರಳುಗಳು ಹೊರ ಬಂದಿರುವುದನ್ನು ನೋಡುತ್ತಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದಾಗ ಭೀಕರ ಹತ್ಯೆಯ ವಿಚಾರ ಬೆಳಕಿಗೆ ಬರುತ್ತದೆ
ಬಿರೆನ್ ಎಂಬ ಯುವಕನೊಬ್ಬ ಬೆಲರಾಣಿ ಹಾಗೂ ಮೀರಾ ಇಬ್ಬರನ್ನು ಪ್ರೀತಿಸಯತ್ತಿದ್ದ. ಕೆಲವೊಮ್ಮೆ ಇಬ್ಬರಿಗೂ ಸರಿಯಾದ ಸಮಯವನ್ನು ನೀಡಲು ಸಾಧ್ಯವಾಗದೇ ಇದ್ದಾಗ. ಇಬ್ಬರೂ ಬಿರೆನ್ ನನ್ನು ಪ್ರಶ್ನಿಸುತ್ತಿದ್ದರು. ಅದೊಂದು ದಿನ ಬೆಲರಾಣಿ ತಾನೂ ಗರ್ಭಿಣಿಯಾಗಿದ್ದೇನೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಬಿರೆನ್ ಬೆಲರಾಣಿಯನ್ನು ಹತ್ಯೆಗೈಯುತ್ತಾನೆ. ಮೃತ ದೇಹದೊಂದಿಗೆ ಎರಡು ದಿನ ಇದ್ದು, ಆ ಬಳಿಕ ಅವಳ ದೇಹವನ್ನು ಕತ್ತರಿಸಿ ಮುಖದ ಚರ್ಮವನ್ನು ತೆಗೆದು, ವಿರೂಪಗೊಳಿಸುತ್ತಾನೆ. ದೇಹದ ಭಾಗವನ್ನು ವಿವಿಧ ಕಡೆ ಎಸೆಯುತ್ತಾನೆ.
ಈ ಪ್ರಕರಣದಲ್ಲಿ ಬಿರೆನ್ ಗೆ ಗಲ್ಲು ಶಿಕ್ಷೆಯಾಗುತ್ತದೆ.
ಆರುಷಿ ತಲ್ವಾರ್ ಹತ್ಯಾ ಪ್ರಕರಣ :
ಮೇ. 15,2008 ರಂದು ನೋಯ್ಡಾದ ಮನೆಯ ಕೋಣೆಯೊಂದರಲ್ಲಿ 13 ವರ್ಷದ ಬಾಲಕಿ ಆರುಷಿ ತಲ್ವಾರ್ ಕತ್ತು ಸೀಳಿ ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗುತ್ತಾಳೆ. ಪೊಲೀಸರು ತನಿಖೆಯಲ್ಲಿ ಆರುಷಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ 45 ವರ್ಷದ ಹೇಮ್ ರಾಜ್ ಈ ಕೃತ್ಯವನ್ನು ಎಸಗಿರಬಹುದು ಎಂದು ಶಂಕಿಸುತ್ತಾರೆ. ಆದರೆ ಎರಡು ದಿನದ ಬಳಿಕ ಹೇಮ್ ರಾಜ್ ಅವರು ಹತ್ಯೆಯಾದ ಸ್ಥಿತಿಯಲ್ಲಿ ಮನೆಯ ಮಹಡಿಯ ಮೇಲೆ ಪತ್ತೆಯಾಗುತ್ತಾರೆ.
ಸಿಬಿಐ ಪ್ರಕರಣ ವರ್ಗವಾಗುತ್ತದೆ. ಸಿಬಿಐ ತನಿಖೆ ಕೈಗೊಂಡು, ಆರುಷಿ ಅವರ ಪೋಷಕರಾದ ರಾಜೇಶ್ ತಲ್ವಾರ್ ಹಾಗೂ ನೂಪುರ್ ತಲ್ವಾರ್ ಅವರನ್ನು ವಿಚಾರಣೆ ನಡೆಸುತ್ತದೆ. ವಿಚಾರಣೆಯ ಬಳಿಕ ಆರುಷಿ-ಹೇಮರಾಜ್ ನಡುವಿನ ಸಂಬಂಧದಿಂದ ಬೇಸತ್ತು ರಾಜೇಶ್-ನೂಪುರ್ ಹತ್ಯೆ ಮಾಡಿದ್ದರೆಂದು ಸಿಬಿಐ ವರದಿ ಸಲ್ಲಿಸುತ್ತದೆ.
ಇದಾದ ಬಳಿಕ ಸಿಬಿಐ ವಿಶೇಷ ಕೋರ್ಟ್ ನವೆಂಬರ್ 2013 ರಂದು ರಾಜೇಶ್ ತಲ್ವಾರ್ ದಂಪತಿಗೆ ಜೀವಾವಧಿ ಶಿಕ್ಷೆ ವಿಧಿಸಿಸತ್ತು. ತೀರ್ಪನ್ನು ಪ್ರಶ್ನಿಸಿ ಆಲಹಬಾದ್ ಕೋರ್ಟ್ ಗೆ ರಾಜೇಶ್ ದಂಪತಿ ಮೊರೆ ಹೋಗಿದ್ದರು. 2017 ರಲ್ಲಿ ಕೋರ್ಟ್ ರಾಜೇಶ್ ದಂಪತಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶ ನೀಡಿತ್ತು.