Advertisement

ಪಿಎಫ್ ಗೆ ಆಧಾರ್‌ ಕಡ್ಡಾಯ: ಮಾ. 31ಕ್ಕೆ ಗಡುವು ವಿಸ್ತರಣೆ

03:45 AM Feb 18, 2017 | |

ನವದೆಹಲಿ: ಪಿಂಚಣಿದಾರರು ಮತ್ತು ಇಪಿಎಫ್ ಫ‌ಲಾನುಭವಿಗಳು ಆಧಾರ್‌ ಮಾಹಿತಿ ನೀಡಲು ಫೆ. 28ರ ವರೆಗೆ ಇದ್ದ ಅವಧಿ ಮಿತಿಯನ್ನು ಮಾ.31ರ ವರೆಗೆ ವಿಸ್ತರಿಸಲಾಗಿದೆ. 50 ಲಕ್ಷ ಮಂದಿ ಪಿಂಚಣಿದಾರರು ಮತ್ತು 4 ಕೋಟಿ ಹೆಚ್ಚು ಮಂದಿ ಎಪಿಎಫ್ ಸೌಲಭ್ಯ ಪಡೆಯುತ್ತಿದ್ದಾರೆ.

Advertisement

ಇದರಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಕಡ್ಡಾಯವಾಗಿ ಮಾ. 31ರೊಳಗೆ ತಮ್ಮ ಆಧಾರ ಮಾಹಿತಿ ನೀಡುವಂತೆ ಕೇಂದ್ರ ಭವಿಷ್ಯ ನಿಧಿ ಆಯುಕ್ತ ವಿ.ಪಿ. ಜಾಯ್‌ ಮನವಿ ಮಾಡಿದ್ದಾರೆ. ಕಳೆದ ಜನವರಿಯಲ್ಲಿ ಕಾರ್ಮಿಕ ಸಚಿವಾಲಯ ಪಿಂಚಣಿದಾರರಿಗೆ ಮತ್ತು ಪಿಎಫ್ ಫ‌ಲಾನುಭವಿಗಳಿಗೆ ಆಧಾರ್‌ ಕಡ್ಡಾಯಗೊಳಿಸಿ ಅಧಿಸೂಚನೆ ಹೊರಡಿಸಿತ್ತು.
 

Advertisement

Udayavani is now on Telegram. Click here to join our channel and stay updated with the latest news.

Next