Advertisement
ದೇಶದಲ್ಲಿ ಬೇನಾಮಿ ಆಸ್ತಿಗಳನ್ನು ಪತ್ತೆಹಚ್ಚುವ ಕಾರಣಕ್ಕಾಗಿ ಈ ಯೋಜನೆ ರೂಪಿಸಲಾಗುತ್ತಿದೆ. ಆಸ್ತಿ ಗಳಿಗೆ ನೀಡಲಾಗುವ ಈ ಸಂಖ್ಯೆ ಜಿಯೋಗ್ರಾಫಿಕ್ ಇನ್ಫರ್ಮೇಶನ್ ಸಿಸ್ಟಂ (ಜಿಐಎಸ್) ಜತೆಗೆ ನಂಟು ಹೊಂದಿರ ಲಿದ್ದು, ಆಧಾರ್ ಸಂಖ್ಯೆಗೆ ಹಾಗೂ ಕಂದಾಯ ನ್ಯಾಯಾ ಲಯದ ದಾಖಲೆಗಳೊಂದಿಗೆ ಸೇರಿಸುವುದು ಕಡ್ಡಾಯಗೊಳಿಸಲಾಗು ತ್ತದೆ. ಆ ಮೂಲಕ ಸ್ಥಿರಾಸ್ತಿ ವ್ಯವಹಾರಗಳಲ್ಲಿ ಅಕ್ರಮ ಹಣ ಹೂಡಿಕೆಯ ಪತ್ತೆ ಸಹಿತ ಅನೇಕ ಉಪಯೋಗಗಳು ಲಭ್ಯವಾಗಲಿವೆ ಎಂದು ಹೆಸರು ಹೇಳಲು ಇಚ್ಛಿಸದ ಕೇಂದ್ರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉದಾಹರಣೆಗೆ, ವಾಹನಗಳ ನೋಂದಣಿ ಸಂಖ್ಯೆಯಲ್ಲಿ ಆ ವಾಹನ ನೋಂದಣಿಗೊಂಡ ರಾಜ್ಯ, ಜಿಲ್ಲೆಯ ವಿವರಗಳು ಹೇಗೆ ಅಡಕವಾಗಿರುತ್ತದೆಯೋ ಅದೇ ರೀತಿ ಪ್ರತಿ ಸ್ಥಿರಾಸ್ತಿಗೆ ನೀಡಲಾಗುವ ವಿಶಿಷ್ಟ ಗುರುತಿನ ಸಂಖ್ಯೆಯಲ್ಲಿ ಆ ಆಸ್ತಿ ಇರುವ ರಾಜ್ಯ, ಜಿಲ್ಲೆ, ನಗರ- ಪಟ್ಟಣ-ಗ್ರಾಮದ ವ್ಯಾಪ್ತಿ, ಬಡಾವಣೆ… ಅಷ್ಟೇ ಏಕೆ ಆ ಆಸ್ತಿ ಇರುವ ಬೀದಿಯ ಮಾಹಿತಿಯನ್ನೂ ನೀಡುತ್ತದೆ. ಒಂದು ಸಂಖ್ಯೆ, ಹಲವು ಮಾಹಿತಿ
– ಸರಕಾರಿ ದಾಖಲೆಗಳಲ್ಲಿ ಪ್ರತಿ ಬಡಾವಣೆಗೂ ಒಂದು ನಿರ್ದಿಷ್ಟ ಗುರುತು.
– ರಿಯಲ್ ಎಸ್ಟೇಟ್ ವ್ಯವಹಾರ ಮತ್ತಷ್ಟು ಪಾರದರ್ಶಕ.
– ಆಸ್ತಿ ತೆರಿಗೆ ಪಾವತಿ ಹಿಂದೆಂದಿಗಿಂತಲೂ ಹೆಚ್ಚು ಸುಲಭ.
– ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ಯಾವ ಜಿಲ್ಲೆಯ, ಯಾವ ಭಾಗದ ಬಡಾವಣೆಗಳು ಸಮಸ್ಯೆ ಎದುರಿಸುತ್ತಿವೆ ಎಂಬುದನ್ನು ಕೇವಲ ಒಂದು ಸಂಖ್ಯೆಯಿಂದ ಪತ್ತೆ ಹಚ್ಚಲು ಸಾಧ್ಯ.
– ಪ್ರತಿ ಬಡಾವಣೆ, ಅದರಲ್ಲಿ ಖಾಲಿ ಸೈಟು, ಮನೆಗಳ ಹಿಂದಿನ ವ್ಯವಹಾರಗಳ ಕ್ರೋಡೀಕರಣ. ಇದರಿಂದ ಖರೀದಿದಾರರಿಗೆ ತಾವು ಖರೀದಿಸಲು ಬಯಸುವ ಆಸ್ತಿಯ ವಿವರಗಳನ್ನು ಬೇಗ ಪಡೆಯಲು ಸಾಧ್ಯ.
– ಆಸ್ತಿಯ ಕಾನೂನಾತ್ಮಕ ಹಕ್ಕುದಾರರು, ಸಂಬಂಧಪಟ್ಟ ದಾಖಲೆಗಳು, ಆ ಆಸ್ತಿಗಳ ಹೆಸರಲ್ಲಿ ಇರುವ ಕಾನೂನು ವ್ಯಾಜ್ಯಗಳ ಸಂಪೂರ್ಣ ಮಾಹಿತಿ ಪಡೆಯಲು ಸಾಧ್ಯ.
– ಯಾವುದೇ ಭೂಮಿಯ ಮೇಲೆ ಆ ಭೂ ಮಾಲಕರಾಗಲಿ, ಅದು ಕೃಷಿ ಭೂಮಿಯಾಗಿದ್ದಲ್ಲಿ ಅದನ್ನು ಉಳುಮೆ ಮಾಡುತ್ತಿರುವ ರೈತರಾಗಲಿ ಬ್ಯಾಂಕುಗಳಿಂದ, ವಿತ್ತೀಯ ಸಂಸ್ಥೆಗಳಿಂದ ಪಡೆದ ಸಾಲಗಳ ಬಗ್ಗೆ ಮಾಹಿತಿಯೂ ಲಭ್ಯ.