Advertisement

ಸಂತ್ರಸ್ತರು ಕೇಂದ್ರದ ಆರ್ಥಿಕ ನೆರವು ಪಡೆಯಲು ಆಧಾರ್‌ ಕಡ್ಡಾಯ

10:05 AM Jan 19, 2020 | Hari Prasad |

ಹೊಸದಿಲ್ಲಿ: ಕೋಮುಗಲಭೆ, ನಕ್ಸಲೀಯರ ಹಿಂಸೆಗೆ ಗುರಿಯಾದ, ಭಯೋತ್ಪಾದಕರ ದಾಳಿಗೆ ಬಲಿಯಾದ ನಾಗರಿಕರು ಕೇಂದ್ರ ಸರಕಾರದಿಂದ ಆರ್ಥಿಕ ನೆರವು ಪಡೆಯಬೇಕೆಂದರೆ ಆಧಾರ್‌ ನೀಡುವುದು ಅತ್ಯಗತ್ಯ ಎಂಬ ನಿಯಮ ರೂಪಿಸಲಾಗಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಪ್ರಕಟನೆ ಹೊರಡಿಸಿದೆ.

Advertisement

ನೊಂದವರು ಆಧಾರ್‌ ಕಾರ್ಡ್‌ ಹೊಂದಿರದಿದ್ದಲ್ಲಿ ಅಂಥವರು ಕೂಡಲೇ ಆಧಾರ್‌ಗೆ ಅರ್ಜಿ ಸಲ್ಲಿಸಬೇಕು ಎಂದೂ ಹೇಳಿದೆ. ಗಡಿಯಾಚೆಯಿಂದ ಗುಂಡು ಹಾರಾಟ ಪ್ರಕರಣ, ಸುಧಾರಿತ ಸ್ಫೋಟಕ, ನೆಲಬಾಂಬ್‌ ಸ್ಫೋಟ, ನಕ್ಸಲೀಯರ ಹಿಂಸಾಕೃತ್ಯ, ಕೋಮು ಗಲಭೆ ಪ್ರಕರಣಗಳಲ್ಲಿ ನೊಂದ ನಾಗರಿಕರಿಗೆ ವಿತ್ತೀಯ ನೆರವು ಪಡೆಯಲು ಆಧಾರ್‌ ಅಗತ್ಯವಾಗಿದೆ. ರಾಜ್ಯ ಸರಕಾರಗಳ ಮೂಲಕ ಈ ನೆರವು ನೀಡಲಾಗುತ್ತದೆ. ಅದಕ್ಕಾಗಿ ವಾರ್ಷಿಕವಾಗಿ 6ರಿಂದ 7 ಕೋಟಿ ರೂ. ನಿಗದಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next