Advertisement

ವೋಟರ್‌ ಐಡಿಗೆ ಆಧಾರ್‌ ಲಿಂಕ್‌: ಇದು ಕಡ್ಡಾಯ ಅಲ್ಲ; ಮತದಾರರಿಗೆ ಇಚ್ಛೆ ಇದ್ದರೆ ಮಾತ್ರ

12:09 AM Jul 30, 2022 | Team Udayavani |

ಹೊಸದಿಲ್ಲಿ: ಮತದಾರರ ಗುರುತಿನ ಚೀಟಿ ಜತೆಗೆ ಆಧಾರ್‌ ಲಿಂಕ್‌ ಮಾಡುವ ವ್ಯವಸ್ಥೆ ಆ. 1ರಿಂದ ಜಾರಿಗೆ ಬರಲಿದೆ. ಆದರೆ ಇದು ಕಡ್ಡಾಯವೇನಲ್ಲ. ಮತದಾರರು ಇಚ್ಛೆಪಟ್ಟರೆ ಮಾತ್ರ ಈ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರ ಜತೆಯಲ್ಲೇ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ ಕೊಳ್ಳುವವರಿಗೆ ಫಾರ್ಮ್ 6 ಬಿ ನೀಡಲಾಗುತ್ತದೆ. ಈಗಾಗಲೇ ಹೆಸರು ನೋಂದಾಯಿಸಿಕೊಂಡವರೂ ಫಾರ್ಮ್ 6 ಬಿ ಭರ್ತಿ ಮಾಡಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಲು ಅವಕಾಶ ಇದೆ.

Advertisement

ಒಬ್ಬನೇ ವ್ಯಕ್ತಿ, ಎರಡು ಕಡೆ ಮತದಾರರ ಚೀಟಿ ಹೊಂದಿರು ವುದನ್ನು ಪತ್ತೆ ಹಚ್ಚಲು ಈ ಕ್ರಮ. ಆಧಾರ್‌ ಜತೆ ಸಂಪರ್ಕವಾದಲ್ಲಿ ಒಬ್ಬ 1 ಕಡೆ ಮಾತ್ರ ಹೆಸರು ನೋಂದಾಯಿಸಬಹುದು.

ವೆಬ್‌ಸೈಟ್‌ನಲ್ಲಿ ನೋಂದಣಿ ಹೇಗೆ?
1. https://voterportal.eci.gov.in/ವೆಬ್‌ಸೈಟ್‌ಗೆ ಭೇಟಿ ನೀಡಿ
2. ಮೊಬೈಲ್‌ ಸಂಖ್ಯೆ, ಇ-ಮೈಲ್‌, ವೋಟರ್‌ ಐಡಿ ಮೂಲಕ ಲಾಗ್‌ಇನ್‌ ಆಗಬೇಕು ಮತ್ತು ಪಾಸ್‌ವರ್ಡ್‌ ರೂಪಿಸಬೇಕು.
3. ನಿಮ್ಮ ಹೆಸರು, ಹುಟ್ಟಿದ ದಿನಾಂಕ, ತಂದೆಯ ಹೆಸರು, ಜಿಲ್ಲೆ, ರಾಜ್ಯ ಮತ್ತಿತರ ವೈಯಕ್ತಿಕ ಮಾಹಿತಿ ನಮೂದಿಸಬೇಕು.
4. ವಿವರ ತಾಳೆಯಾಗದಿದ್ದರೆ ಶೋಧ ಬಟನ್‌ ಕ್ಲಿಕ್‌ ಮಾಡಿ
5. ಎಡಭಾಗದಲ್ಲಿ ಆಧಾರ್‌ ನಮೂದಿಸುವ ಸ್ಥಳ ಆಯ್ಕೆ ಮಾಡಿ
6. ಆಧಾರ್‌, ವೋಟರ್‌ ಐಡಿ, ಮೊಬೈಲ್‌ ಸಂಖ್ಯೆ ನಮೂದಿಸಿ
7. ನಮೂದಿಸಿ ಪರಿಶೀಲಿಸಿದ ಬಳಿಕ ಸಬ್‌ಮಿಟ್‌ ಬಟನ್‌ ಒತ್ತಿ.
8. ಯಶಸ್ವಿಯಾಗಿದೆ ಎಂಬ ಸಂದೇಶ ಬರುತ್ತದೆ.

ಎಸ್‌ಎಂಎಸ್‌ ಮೂಲಕ ಹೇಗೆ?
ಮೊದಲ ಹಂತ- ಎಸ್‌ಎಂಎಸ್‌ ಪೇಜ್‌ ತೆರೆಯಬೇಕು
ಎರಡನೇ ಹಂತ- 166 ಅಥವಾ 51969ಕ್ಕೆ ಮೆಸೇಜ್‌ ಕಳುಹಿಸಿ
ಹಂತ ಮೂರು-ECILINK ಸ್ಪೇಸ್‌ ವೋಟರ್‌ ಐಡಿ ಸಂಖ್ಯೆ ಸ್ಪೇಸ್‌ ಆಧಾರ್‌ ಸಂಖ್ಯೆ

ECILINK< SPACE>

Advertisement

ನಾಲ್ಕು ಬಾರಿ ನೋಂದಣಿಗೆ ಅವಕಾಶ
ಹೊಸ ವ್ಯವಸ್ಥೆಯಲ್ಲಿ ಜ. 1, ಎ. 1, ಜು. 1, ಅ. 1- ಹೀಗೆ ನಾಲ್ಕು ಬಾರಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾ ಯಿಸಲು ಅವಕಾಶ ಕಲ್ಪಿಸಲಾಗಿದೆ. ಇಷ್ಟು ಮಾತ್ರವಲ್ಲದೆ 17 ವರ್ಷ ಪೂರ್ತಿಗೊಂಡವರು ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಕೆ ಮಾಡಿ, ದಾಖಲೆ ಪರಿಶೀಲಿಸಿ 18 ವರ್ಷ ಪೂರ್ತಿಗೊಂಡ ಬಳಿಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವ ಅವಕಾಶವನ್ನು ಗುರುವಾರ ಕಲ್ಪಿಸಲಾಗಿದೆ.

ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್‌ ಜೋಡಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಅದು ಕಡ್ಡಾಯವಲ್ಲ. ಮತದಾರರು ತಮಗೆ ಇಷ್ಟವಿದ್ದರೆ ಮಾತ್ರ ಆಧಾರ್‌ ಸಂಖ್ಯೆಯನ್ನು ನೀಡಿ ಜೋಡಣೆ ಮಾಡಿಕೊಳ್ಳಬಹುದು.
– ಮನೋಜ್‌ಕುಮಾರ್‌ ಮೀನಾ, ರಾಜ್ಯ ಮುಖ್ಯ ಚುನಾವಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next