Advertisement

ಆಕ್ಸ್‌ಫ‌ರ್ಡ್‌ ಡಿಕ್ಷನರಿಯಲ್ಲಿ ‘ಆಧಾರ್‌’ಪದ ಸೇರ್ಪಡೆ

09:50 AM Jan 26, 2020 | Hari Prasad |

ಹೊಸದಿಲ್ಲಿ : ಪ್ರತಿಷ್ಠಿತ ಆಕ್ಸ್‌ಫ‌ರ್ಡ್‌ ಡಿಕ್ಷನರಿಯ ನೂತನ ಆವೃತ್ತಿಯಲ್ಲಿ ಭಾರತೀಯ ಹೊಸ ಪದಗಳನ್ನು ಸೇರಿಸಲಾಗಿದೆ. ಶುಕ್ರವಾರ 10ನೇ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಆಧಾರ್‌, ಡಬ್ಟಾ, ಹರತಾಳ, ಶಾದಿ ಸೇರಿದಂತೆ ಭಾರತದ 23 ಹೊಸ ಪದಗಳು, 22 ಚಿತ್ರಗಳನ್ನು ಸೇರ್ಪಡೆ ಮಾಡಲಾಗಿದೆ.

Advertisement

ಆಕ್ಸ್‌ ಫ‌ರ್ಡ್‌ ಅಡ್ವಾಡ್ ಲರ್ನರ್ ಡಿಕ್ಷನರಿಯಲ್ಲಿ ಡಿಜಿಟಲ್‌ ವ್ಯವಸ್ಥೆಯನ್ನು ಉನ್ನತೀಕರಿಸಲಾಗಿದ್ದು, ಇದರಲ್ಲಿ ಐ-ಸ್ಪೀಕರ್‌, ಐ-ರೈಟರ್‌ ಟೂಲ್‌ಗ‌ಳನ್ನು ಅಳವಡಿಸಲಾಗಿದೆ. ವಿವಿಧ ಪರೀಕ್ಷೆಗಳಿಗೆ ಹಾಗೂ ಪ್ರಾತ್ಯಕ್ಷಿಕೆಗಳನ್ನು ಕೊಡಲು ಅನುಕೂಲವಾಗುವಂತೆ ಸಿದ್ಧಪಡಿಸಲಾಗಿದೆ.

77 ವರ್ಷಗಳ ಇತಿಹಾಸವಿರುವ ಈ ಡಿಕ್ಷನರಿಯಲ್ಲಿ 86 ಸಾವಿರ ಪದಗಳು, 95 ಸಾವಿರ ವಾಕ್ಯಗಳು, 1.12 ಲಕ್ಷ ಶಬ್ದಾರ್ಥಗಳು ಹಾಗೂ 2.37 ಲಕ್ಷ ಉದಾಹರಣೆಗಳು ಇವೆ.

Advertisement

Udayavani is now on Telegram. Click here to join our channel and stay updated with the latest news.

Next