Advertisement

ಆಧಾರ್‌ ಕಾರ್ಡ್‌ ವ್ಯವಸ್ಥೆ ಸರಿಪಡಿಸಲು ಆಗ್ರಹ

11:48 AM Jul 21, 2019 | Team Udayavani |

ಲಕ್ಷ್ಮೇಶ್ವರ: ತಾಲೂಕಿನಲ್ಲಿ ಹೊಸ ಆಧಾರ್‌ ಕಾರ್ಡ್‌ ಪಡೆಯುವುದು ಮತ್ತು ತಿದ್ದುಪಡಿ ಗೊಂದಲದ ಗೂಡಾಗಿದ್ದು, ಪಟ್ಟಣ ಸೇರಿ ಗ್ರಾಮೀಣ ಜನರು ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಸರಿಪಡಿಸುವಂತೆ ಆಗ್ರಹಿಸಿ ಶನಿವಾರ ಜಯ ಕರ್ನಾಟಕ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

Advertisement

ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಪಡೆಯಲು ಆಧಾರ್‌ ಕಾರ್ಡ್‌ ಕಡ್ಡಾಯವಾಗಿದೆ. ಆದರೆ ಆಧಾರ್‌ ಕಾರ್ಡ್‌ ನವೀಕರಣ, ತಿದ್ದುಪಡಿ ಮತ್ತು ಹೊಸ ಕಾರ್ಡ್‌ ಪಡೆಯಲು ಜನರು ನಿಗದಿತ ಕಚೇರಿಗಳಿಗೆ ಸಾಲು ನಿಲ್ಲುತ್ತಿದ್ದಾರೆ.

ತಾಲೂಕಿನಾಧ್ಯಂತ ಜನರಿಗೆ ಪಟ್ಟಣದಲ್ಲಿನ ನೆಮ್ಮದಿ ಕೇಂದ್ರ, ಕೆವಿಜಿ ಬ್ಯಾಂಕ್‌ ಮತ್ತು ಅಂಚೆ ಕಚೇರಿಗೆ ಆಧಾರ್‌ ಕಾರ್ಡ್‌ ಕೊಡುವ ಅಧಿಕಾರ ನೀಡಿದೆ. ಆದರೆ ನೆಮ್ಮದಿ ಕೇಂದ್ರದಲ್ಲಿ ನಿತ್ಯ ಕೇವಲ 30 ಜನರಿಗೆ ಮಾತ್ರ ಅವಕಾಶವಿದ್ದು, ಈಗಾಗಲೇ ಸೆಪ್ಟೆಂಬರ್‌ ವರೆಗೂ ಪಾಳಿ ಚೀಟಿ ಕೊಟ್ಟಿದ್ದಾರೆ. ಇನ್ನು ಕೆವಿಜಿ ಬ್ಯಾಂಕ್‌ ಮತ್ತು ಅಂಚೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಕಾರಣ ನೀಡಿ ಆಗೊಮ್ಮೆ ಈಗೊಮ್ಮೆ ನಾಲ್ಕಾರು ಕಾರ್ಡ್‌ ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ.

ಚುನಾವಣಾ ಪೂರ್ವದಲ್ಲಿ ಎಲ್ಲ ಗ್ರಾಪಂಗಳಲ್ಲಿ ಮತ್ತು ಖಾಸಗಿ ಕಂಪ್ಯೂಟರ್‌ ಕೇಂದ್ರಗಳಿಗೆ ಆಧಾರ್‌ ವ್ಯವಸ್ಥೆ ಸರಿಪಡಿಸುವ ವ್ಯವಸ್ಥೆ ನೀಡಲಾಗಿತ್ತು. ಆದರೆ ನೀತಿ ಸಂಹಿತೆ ಕಾರಣದಿಂದ ಸರ್ಕಾರ ಎಲ್ಲವನ್ನೂ ಸ್ಥಗಿತಗೊಳಿಸಿದ್ದರಿಂದ ಸಮಸ್ಯೆ ದ್ವಿಗುಣಗೊಂಡಿದೆ. ಆದ್ದರಿಂದ ಆಧಾರ್‌ ವ್ಯವಸ್ಥೆ ಸರಿಪಡಿಸುವ ಕೇಂದ್ರಗಳನ್ನು ಇನ್ನಷ್ಟು ಆರಂಭಿಸಿ ಜನರಿಗೆ ಅನಕೂಲ ಮಾಡಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಇಸ್ಮಾಯಿಲ್ ಆಡೂರ, ಮೋಹನ ನಂದೆಣ್ಣವರ, ಸದಾಶಿವ ಮುಡಿಯಮ್ಮನವರ, ಪರಮೇಶ ಲಮಾಣಿ, ಸರೋಜಾ ನಾವಿ, ಸರಸ್ವತಿ ಪಾಟೀಲ, ಜರೀನಾ ಮುಲ್ಲಾ, ರಾಜೇಶ್ವರಿ ಮುಂದಿನಮನಿ ಮತ್ತಿತರರಿದ್ದರು. ತಹಶೀಲ್ದಾರ್‌ ಪರವಾಗಿ ಸಿಬ್ಬಂದಿ ಕಗ್ಗಲಗೌಡರ ಮನವಿ ಸ್ವೀಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next