Advertisement

ಬಿಪಿಎಲ್‌ ಮಹಿಳೆಯರಿಗೆ ಉಚಿತ ಎಲ್‌ಪಿಜಿ ಸಂಪರ್ಕ: ಆಧಾರ್‌ ಕಡ್ಡಾಯ

03:39 PM Mar 08, 2017 | udayavani editorial |

ಹೊಸದಿಲ್ಲಿ : ಪ್ರಧಾನ ಮಂತಿ ಉಜ್ವಲ ಯೋಜನೆಯಡಿ ಬಡ ಮಹಿಳೆಯರಿಗೆ ಉಚಿತ ಎಲ್‌ಪಿಜಿ ಸಂಪರ್ಕ ಪಡೆಯುವುದಕ್ಕೆ ಅವಕಾಶವಿದ್ದು ಇದಕ್ಕೆ ಸರಕಾರ ಆಧಾರ್‌ ಕಾರ್ಡ್‌ ಕಡ್ಡಾಯ ಮಾಡಿದೆ.

Advertisement

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸರಕಾರ ಎಲ್‌ಪಿಜಿ ಸಬ್ಸಿಡಿ ಪಡೆಯಲು ಎಲ್ಲರಿಗೂ ಆಧಾರ್‌ ಕಾರ್ಡ್‌ ಕಡ್ಡಾಯ ಮಾಡಿತ್ತು. ಆದೇ ರೀತಿ ಈಗ ಸರಕಾರ ಬಿಪಿಎಲ್‌ ಕುಟುಂಬಗಳ ಮಹಿಳೆಯರಿಗೆ ಉಚಿತ ಗ್ಯಾಸ್‌ ಸಂಪರ್ಕ ಪಡೆಯುವುದಕ್ಕೆ ಕಡ್ಡಾಯ ಮಾಡಿದೆ. 

ಕಳೆದ ವರ್ಷ ಸರಕಾರ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಆರಂಭಿಸಿತ್ತು. ಇದರಡಿ ದೇಶ ಐದು ಕೋಟಿ ಬಡ ಮಹಿಳೆಯರಿಗೆ ಮೂರು ವರ್ಷಗಳ ಒಳಗೆ ಉಚಿತ ಎಲ್‌ಪಿಜಿ ಸಂಪರ್ಕ ನೀಡುವ ಗುರಿಯನ್ನು ಹೊಂದಿತ್ತು. ದೇಶಾದ್ಯಂತ ಶುದ್ಧ ಅಡುಗೆ ಇಂಧನ ಪೂರೈಸುವುದು ಈ ಯೋಜನೆಯಡಿ ಸರಕಾರದ ಮುಖ್ಯ ಉದ್ದೇಶವಾಗಿತ್ತು.

ಉಚಿತ ಗ್ಯಾಸ್‌ ಸಂಪರ್ಕ ಪಡೆಯ ಬಯಸುವ ಬಿಪಿಎಲ್‌ ಕುಟುಂಬದ ಮಹಿಳೆಯರು ಈಗಿನ್ನೂ ಆಧಾರ್‌ ಕಾರ್ಡ್‌ ಹೊಂದಿರದಿದ್ದರೆ ಅದನ್ನು ಮೇ 31ರ ಒಳಗಾಗಿ ಮಾಡಿಸಿಕೊಳ್ಳಬೇಕು ಎಂದು ಪೆಟ್ರೋಲಿಯಂ ಸಚಿವಾಲಯ ಹೊರಡಿಸಿರುವ ಗಜೆಟ್‌ ಅಧಿಸೂಚನೆಯಲ್ಲಿ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next