Advertisement
ಮಂಗಳೂರಿನಲ್ಲಿ ವೈದ್ಯ ಶಿಕ್ಷಣ ಪಡೆಯುವುದಕ್ಕಾಗಿ “ಸ್ಟಡಿ ವೀಸಾ’ದಲ್ಲಿ ಬಂದಿರುವ ಮಲೇಷ್ಯಾದ ಹೋಹ್ ಜಿಯಾನ್ ಮೆಂಗ್ (25) ಆಧಾರ್ ಕಾರ್ಡ್ ಪಡೆದು ಕೊಂಡಿದ್ದಾನೆ. ಅಷ್ಟೇ ಅಲ್ಲ, ಈ ಮೂಲಕ ಅಕ್ರಮವಾಗಿ ಭಾರತೀಯ ಪ್ರಜೆ ಎಂದು ಈತ ಗುರುತಿಸಿಕೊಂಡಿರುವುದು ಅತ್ಯಂತ ಗಂಭೀರ ವಿಚಾರ. ಅತ್ಯಂತ ಸುಶಿಕ್ಷಿತರಿರುವ ಜಿಲ್ಲೆ ಎಂದು ಕರೆಸಿಕೊಂಡಿರುವ ದಕ್ಷಿಣ ಕನ್ನಡದಲ್ಲಿ ಇಂತಹ ದೇಶದ್ರೋಹ ಕೃತ್ಯ ನಡೆದಿರುವುದು ನಿಜಕ್ಕೂ ತಲೆತಗ್ಗಿಸಬೇಕಾದ ವಿಷಯ.
ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಿದ್ದಾನೆ.
Related Articles
Advertisement
ಸ್ಥಳೀಯರ ಆರೋಪವೇನು?: ಸ್ಥಳೀಯ ನಿವಾಸಿಗಳು ಹೇಳುವ ಪ್ರಕಾರ, ನಾಲ್ಕೈದು ತಿಂಗಳ ಹಿಂದೆ ಈ ಫ್ಲಾ éಟ್‌ಗೆ ಮಹಿಳೆಯೊಬ್ಬರು ಆಧಾರ್ ಕಾರ್ಡ್ ಮಾಡಿಸಿಕೊಡುವುದಾಗಿ ಹೇಳಿಕೊಂಡು ಬಂದಿದ್ದರು. ಆದರೆ ಅಲ್ಲಿನ ಭದ್ರತಾ ಸಿಬಂದಿ ಆಕೆಯನ್ನು ಫ್ಲಾ éಟ್‌ನಲ್ಲಿರುವ ಮನೆಗಳಿಗೆ ತೆರಳಲು ಅನುಮತಿ ನಿರಾಕರಿಸಿದ್ದರು. ಈ ಸಂದರ್ಭ ಸ್ಥಳೀಯ ಶಾಸಕರದ್ದು ಎನ್ನಲಾದ ದೂರವಾಣಿ ಕರೆ ಭದ್ರತಾ ಸಿಬಂದಿಗೆ ಬಂದಿದ್ದು, “ಪಕ್ಷದ ಕಡೆಯಿಂದ ಮಹಿಳೆಗೆ ಗುರುತಿನ ಚೀಟಿ ಮಾಡಿಸುವುದಕ್ಕೆ ಅವಕಾಶ ನೀಡಬೇಕು’ ಎಂದು ಸೂಚಿಸಿದ್ದರು. ಅನಂತರ ಭದ್ರತಾ ಸಿಬಂದಿ ಆ ಮಹಿಳೆಗೆ ಒಳತೆರಳಲು ಅವಕಾಶ ನೀಡಿದ್ದರು. ಆದರೆ ಈಗ ವಿದೇಶಿ ಪ್ರಜೆಗೆ ಅಕ್ರಮವಾಗಿ ಭಾರತೀಯ ಪೌರತ್ವ ಒದಗಿಸುವ ಇಂಥದೊಂದು ಪ್ರಕರಣ ಬೆಳಕಿಗೆ ಬಂದಿರುವುದರಿಂದ ಅಂದು ಫ್ಲಾ éಟ್‌ಗೆ ಆಧಾರ್ ಮಾಡಿಸಿಕೊಡುವುದಕ್ಕೆ ಬಂದಿದ್ದ ಮಹಿಳೆ ಯಾರು ಮತ್ತು ಅವರು ಯಾವ ಪಕ್ಷಕ್ಕೆ ಸೇರಿದವರು ಹಾಗೂ ಕರೆ ಮಾಡಿದವರು ಯಾರು ಎಂಬುದು ಪೊಲೀಸರ ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.
ಆಧಾರ್ ಕೊಟ್ಟಿರುವುದು ಮಂಗಳೂರು ಒನ್: ಜಿಯಾನ್‌ಗೆ ಮಂಗಳೂರಿನ “ಮಂಗಳೂರು ಒನ್’ ಕೇಂದ್ರದಲ್ಲಿ ಆಧಾರ್ ಕಾರ್ಡ್ ನೋಂದಣಿ ಪ್ರಕ್ರಿಯೆ ನಡೆದಿದೆ.
ಬಂಧನ ಸಾಧ್ಯತೆಸುಳ್ಳು ಮಾಹಿತಿ ನೀಡಿ ಆಧಾರ್ ಕಾರ್ಡ್ ಮಾಡಿಸಿಕೊಂಡು ಇಲ್ಲಿ ಅಕ್ರಮವಾಗಿ ನೆಲೆಸುವುದಕ್ಕೆ ಯತ್ನಿಸಿರುವ ಆರೋಪದ ಮೇಲೆ ಜಿಯಾನ್ ಮೆಂಗ್‌ನನ್ನು ಪೊಲೀಸರು ತತ್‌ಕ್ಷಣ ಬಂಧಿಸುವ ಸಾಧ್ಯತೆಯಿದೆ. ಈತ ಯಾವ ಕಾರಣಕ್ಕೆ ಈ ರೀತಿ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದಾನೆ ಎಂಬ ಬಗ್ಗೆಯೂ ಆಳವಾದ ತನಿಖೆಯಾಗಬೇಕಿದೆ. ವಿದೇಶೀಯರಿಗೆ ಮನೆಬಾಗಿಲಿಗೆ ಆಧಾರ್
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಿ ಕೊಡುವ ಉದ್ದೇಶದಿಂದ ಸ್ಥಳೀಯ ಅಧಿಕಾರಿಗಳ ನೆರವಿನೊಂದಿಗೆ ಈ ರೀತಿ ವಿದೇಶಿಗರಿಗೂ ಆಧಾರ್ ಗುರುತಿನ ಚೀಟಿ ಮಾಡಿಸಿಕೊಡಲಾಗುತ್ತಿದೆ. ಎಷ್ಟೋ ಮಂದಿ ಭಾರತೀಯರು ಆಧಾರ್ ನೋಂದಣಿ ಕೇಂದ್ರಗಳ ಮುಂದೆ ದಿನಗಟ್ಟಲೆ ಸರತಿಯಲ್ಲಿ ನಿಂತು ಆಧಾರ್ ಕಾರ್ಡ್ ಮಾಡಿಸಿಕೊಂಡದ್ದಿದೆ. ಹಲವರಿಗೆ ಇನ್ನೂ ಸಿಕ್ಕಿಲ್ಲ. ಆದರೆ ಮಂಗಳೂರಿನಲ್ಲಿ ನೆಲೆಸಿರುವ ವಿದೇಶೀಯರ ಮನೆ ಬಾಗಿಲಿಗೆ ಆಧಾರ್ ಕಾರ್ಡ್ ಬಂದು ಬೀಳುತ್ತಿದೆ ! ಕೆಲವು ವಾರಗಳ ಹಿಂದೆಯಷ್ಟೇ ಮಂಗಳೂರಿನಲ್ಲಿ ಕೇರಳ ಸಹಿತ ಇತರ ರಾಜ್ಯಗಳ 3,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಮತದಾನ ಗುರುತಿನ ಚೀಟಿ ಮಾಡಿಸುವುದಕ್ಕೆ ಅರ್ಜಿ ಸ್ವೀಕರಿಸಿರುವುದನ್ನು ಬಿಜೆಪಿ ಮುಖಂಡರು ಪತ್ತೆ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. - ಸುರೇಶ್ ಪುದುವೆಟ್ಟು