ಮುಂಬಯಿ: ಭಾಂಡುಪ್‌ನ ಆದರ್ಶ ವಿದ್ಯಾಲಯದಲ್ಲಿ 1979ರಿಂದ 2017ರ ನಡುವೆ ಕಲಿತಿರುವ ಹಳೆ ವಿದ್ಯಾರ್ಥಿಗಳ ಮಹಾಸಂಗಮ ಮತ್ತು ಗುರುವಂದನಾ ಕಾರ್ಯಕ್ರಮ ಇತ್ತೀಚೆಗೆ ಭಾಂಡುಪ್‌ನ ಟ್ಯಾಂಕ್ ರೋಡ್‌ನಲ್ಲಿರುವ :ಆರ್ಮನಿ ಬ್ಯಾಂಕ್ವೆಟ್ಸ್ ಹಾಲ್‌ನಲ್ಲಿ ಜರಗಿದೆ.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳು ತಮಗೆ ಕಲಿಸಿದ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬಂದಿಗಳನ್ನು ಸಮ್ಮಾನಿಸಿ ಗುರುವಂದನೆ ಸಲ್ಲಿಸಿದರು. ಮನೋರಂಜನೆಯಂಗವಾಗಿ ಹಳೆ ವಿದ್ಯಾರ್ಥಿಗಳು ವಿವಿಧ ನೃತ್ಯ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.
ವೆಲ್ಫೆàರ್ ಅಸೋಸಿಯೇಶನ್ ರಚಿಸಿ ಇದರ ಮೂಲಕ ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ನೆರವು ನೀಡಲು ಮಹಾಸಂಗಮದಲ್ಲಿ ತೀರ್ಮಾನಿಸಲಾಯಿತು. ಶಾಲೆಯ ಅಭ್ಯುದಯಕ್ಕಾಗಿ ಹಳೆ ವಿದ್ಯಾರ್ಥಿಗಳು ನಡೆಸುವ ಕಾರ್ಯಕ್ರಮಗಳನ್ನು ಬೆಂಬಲಿಸುತ್ತೇವೆ ಎಂದು ಶಿಕ್ಷಕರು ಹೇಳಿದರು.
ಮಹಾದೇವಯ್ಯ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯಿನಿ ಗುಲಾಬಿ ಟೀಚರ್, ಅನುರಾಧ, ಲಕ್ಷ್ಮೀ ಟàಚರ್ ಮತ್ತಿತರ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿಗಳಾದ ಶರತ್ ಕೋಟ್ಯಾನ್, ಮಮತಾ ಶೇಖರ್, ಪ್ರಮೋದಾ ಕೋಟ್ಯಾನ್, ಲತಾ ಅಮೀನ್, ದಿತೇಶ್, ಗುರು, ನಿರಂಜನ್, ಪ್ರಭಾತ್, ಮುಕೇಶ್ ಮತ್ತಿತರರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.