Advertisement

ಸ್ಯಾಮ್ ಸಂಗ್‌ನಿಂದ A54 ಮತ್ತು A 34 ಫೋನ್ ಬಿಡುಗಡೆ

08:45 PM Mar 31, 2023 | Team Udayavani |

ಬೆಂಗಳೂರು: ಭಾರತದ ಪ್ರಮುಖ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಸ್ಯಾಮ್‌ಸಂಗ್ Galaxy A54 5G ಮತ್ತು Galaxy A34 5G ಎರಡು ಹೊಸ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದೆ.

Advertisement

ಕೌಂಟರ್‌ಪಾಯಿಂಟ್ ರೀಸರ್ಚ್ ಇಂಡಿಯಾ ಸ್ಮಾರ್ಟ್ ಫೋನ್ ಮಾಡೆಲ್ ಟ್ರ್ಯಾಕರ್ ಡಿಸೆಂಬರ್ 2022ರ ಪ್ರಕಾರ ಗ್ಯಾಲಕ್ಸಿ ಎ ಸೀರೀಸ್ ಕಳೆದ ವರ್ಷ ಭಾರತದಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಮತ್ತು ವೇಗವಾಗಿ ಬೆಳೆಯುತ್ತಿರುವ (10 ಮಿಲಿಯನ್ ಯೂನಿಟ್‌ ಗೂ ಮೇಲ್ಪಟ್ಟು) ಫೋನ್ ಶ್ರೇಣಿಯಾಗಿವೆ. ಈ ವರದಿಯ ಪ್ರಕಾರ ಸ್ಯಾಮ್‌ಸಂಗ್ ಭಾರತದಲ್ಲಿ 2023ರಲ್ಲಿ(ಪ್ರಮಾಣದ ದೃಷ್ಟಿಯಿಂದ) ನಂಬರ್ ಒನ್ 5Gಸ್ಮಾರ್ಟ್ಫೋನ್ ಉತ್ಪಾದಕನಾಗಿದೆ.

ವಿನ್ಯಾಸ

Galaxy A54 5G ಮತ್ತು Galaxy A34 5G ಫ್ಲೋಟಿಂಗ್ ಕ್ಯಾಮರಾ ಸೆಟಪ್ ಮತ್ತು ಮೆಟಲ್ ಕ್ಯಾಮರಾ ಡೆಕೊ ಹೊಂದಿದ್ದು ಅದು ಡಿವೈಸ್‌ನ ಬಣ್ಣಕ್ಕೆ ಹೊಂದಿಕೊಳ್ಳುತ್ತದೆ. Galaxy A54 5G ಗಾಜಿನ ಹಿಂಬದಿ ಹೊಂದಿದ್ದು ಅದು ಪ್ರೀಮಿಯಂ ಲುಕ್ ಮತ್ತು ಫೀಲ್ ನೀಡುತ್ತದೆ.

ಅದ್ಭುತ ದೀರ್ಘಬಾಳಿಕೆ

Advertisement

Galaxy A54 5G ಮತ್ತು Galaxy A34 5G ಐಪಿ67 ರೇಟಿಂಗ್ ಹೊಂದಿವೆ ಅಂದರೆ 30 ನಿಮಿಷಗಳವರೆಗೆ 1 ಮೀಟರ್‌ನಷ್ಟು ನೀರಿನಲ್ಲಿ ಮುಳುಗಿದರೂ ಕಾರ್ಯ ನಿರ್ವಹಿಸಬಲ್ಲದು. ಅವುಗಳನ್ನು ಧೂಳು ಮತ್ತು ಮಣ್ಣಿನಿಂದ ರಕ್ಷಣೆ ನೀಡುವಂತೆಯೂ ನಿರ್ಮಿಸಲಾಗಿದೆ.

ಎರಡೂ ಡಿವೈಸ್ ಗಳ ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ ಬಂದಿದ್ದು ಅದು ಸುಧಾರಿತ ಸ್ಕಾçಚ್ ಮತ್ತು ಬೀಳುವಿಕೆಯಿಂದ ರಕ್ಷಣೆ ನೀಡುತ್ತದೆ. Galaxy A54 5G ಕೂಡಾ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಬ್ಯಾಕ್ ಪ್ಯಾನಲ್‌ಗೆ ಹೊಂದಿದೆ.

ಕ್ಯಾಮರಾ

Galaxy A54 5G 50ಎಂಪಿ ಒಐಎಸ್ ಪ್ರೈಮರಿ ಲೆನ್ಸ್ ಹೊಂದಿದ್ದು ಅದರೊಂದಿಗೆ 12ಎಂಪಿ ಅಲ್ಟ್ರಾ ವೈಡ್ ಲೆನ್ಸ್ ಹೊಂದಿದೆ, Galaxy A34 5G 48ಎಂಪಿ ಒಐಎಸ್ ಪ್ರೈಮರಿ ಲೆನ್ಸ್ ಮತ್ತು 8ಎಂಪಿ ಅಲ್ಟ್ರಾ -ವೈಡ್ ಲೆನ್ಸ್ ಹೊಂದಿದೆ. ಎರಡೂ ಮಾಡೆಲ್‌ಗಳು 5ಎಂಪಿ ಮ್ಯಾಕ್ರೊ ಲೆನ್ಸ್ ಹೊಂದಿವೆ. ಈ ಡಿವೈಸ್‌ಗಳು ಫ್ಲಾಗ್‌ಶಿಪ್ `ನೈಟೊಗ್ರಫಿ’ ಫೀಚರ್ ಹೊಂದಿದ್ದು ಅವು ಗ್ರಾಹಕರಿಗೆ ಕಡಿಮೆ ಬೆಳಕಿನಲ್ಲಿ ಉತ್ತಮ ಗುಣಮಟ್ಟದ ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ಚಿತ್ರೀಕರಿಸಲು ನೆರವಾಗುತ್ತವೆ. ಈ ಫೋನ್‌ಗಳು ಆಟೊ ನೈಟ್ ಮೋಡ್‌ನೊಂದಿಗೆ ಬಂದಿದ್ದು ಅವು ಕಡಿಮೆ ಬೆಳಕಿನ ಪರಿಸ್ಥಿತಿಗಳಿಗೆ ಸ್ವಯಂಚಾಲಿತವಾಗಿ ಹೊಂದಿಕೊಳ್ಳುತ್ತವೆ, ಇದರಿಂದ ಬಳಕೆದಾರರು ಕ್ಯಾಮರಾ ಮೋಡ್‌ ಗಳನ್ನು ಸ್ವಯಂ ಬದಲಾಯಿಸಬೇಕಿಲ್ಲ.

Galaxy A54 5G ಮತ್ತು Galaxy A34 5G ಸೂಪರ್ ಅಮೋಲ್ಡ್ ತಂತ್ರಜ್ಞಾನದಿಂದ ಬಂದಿವೆ ಮತ್ತು ಕನಿಷ್ಠ ಬೆಝೆಲ್‌ಗಳನ್ನು ಹೊಂದಿವೆ. ಎರಡೂ ಡಿವೈಸ್‌ಗಳಲ್ಲಿನ 120ಹರ್ಟ್ಸ್ ರಿಫ್ರೆಶ್ ರೇಟ್ ಹೊಂದಿವೆ. ಇದರೊಂದಿಗೆ ಅಡಾಪ್ಟಿವ್ ರಿಫ್ರೆಶ್ ರೇಟ್ ಬ್ಯಾಟರಿಯ ದಕ್ಷತೆ ಹೆಚ್ಚಿಸುತ್ತದೆ, ವಿಷನ್ ಬೂಸ್ಟರ್ ಬಿರು ಬಿಸಿಲಿನಲ್ಲೂ ವೀಕ್ಷಣೆ ಮಾಡಬಹುದಾಗಿದೆ. ಐ ಕಂಫರ್ಟ್ ಶೀಲ್ಡ್ ಅನ್ನು ಕೂಡಾ ಕ್ವಿಕ್ ಪ್ಯಾನೆಲ್ ಮೂಲಕ ಪಡೆಯಬಹುದಾಗಿದ್ದು ಇದು ಬಳಕೆದಾರರ ಕಣ್ಣುಗಳಿಗೆ ರಕ್ಷಣೆ ನೀಡುತ್ತದೆ.

5000ಎಂಎಎಚ್ ಬ್ಯಾಟರಿಯೊಂದಿಗೆ Galaxy A54 5G ಮತ್ತು Galaxy A34 5G ಒಂದು ಚಾರ್ಜ್ನಲ್ಲಿ 2 ದಿನಗಳಿಗೂ ಹೆಚ್ಚು ಬಳಸಬಹುದು.

ಅದ್ಭುತ ಭದ್ರತೆ ಮತ್ತು ಭವಿಷ್ಯ ಸನ್ನದ್ಧ

Galaxy A54 5G ಮತ್ತು Galaxy A34 5G ಸ್ಯಾಮ್‌ಸಂಗ್‌ನ ರಕ್ಷಣಾನ ಗುಣಮಟ್ಟದ ಭದ್ರತಾ ಪ್ಲಾಟ್‌ಫಾರಂ ನಾಕ್ಸ್ ನೊಂದಿಗೆ ಅತ್ಯುತ್ತಮ ಭದ್ರತೆ ನೀಡುತ್ತದೆ ಅದು ನಿಮ್ಮ ವೈಯಕ್ತಿಕ ದತ್ತಾಂಶವನ್ನು ರಿಯಲ್ ಟೈಮ್‌ನಲ್ಲಿ ರಕ್ಷಿಸುತ್ತದೆ. Galaxy A54 5G ಮತ್ತು Galaxy A34 5G ನಾಲ್ಕು ಒಎಸ್ ಅಪ್‌ ಡೇಟ್‌ಗಳು ಮತ್ತು 5 ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್‌ಗಳನ್ನು ನೀಡುವ ಮೂಲಕ ಡಿವೈಸ್‌ಗಳು ಅಪ್-ಟು-ಡೇಟ್ ಮತ್ತು ಸುರಕ್ಷಿತವಾಗಿರುವುದನ್ನು ದೃಢೀಕರಿಸುತ್ತದೆ.

ಹೊಸ ಸ್ಯಾಮ್‌ಸಂಗ್ ವ್ಯಾಲೆಟ್ ತನ್ನ ಗ್ರಾಹಕರಿಗೆ ತಡೆರಹಿತ ಕಾರ್ಡ್ ಗಳ ಟ್ಯಾಪ್ ಅಂಡ್ ಪೇ ಮತ್ತು ಯುಪಿಐ ಪಾವತಿಗಳ ಅನುಭವ ನೀಡುತ್ತದೆ. ಬಳಕೆದಾರರು ಅವರ ಡಿಜಿಟಲ್ ಐಡಿಗಳಾದ ಪಾನ್, ಡ್ರೈವಿಂಗ್ ಲೈಸೆನ್ಸ್, ವ್ಯಾಕ್ಸಿನ್ ಸರ್ಟಿಫಿಕೇಟ್‌ಗಳು ಮತ್ತಿತರವುಗಳನ್ನು ಸುರಕ್ಷಿತವಾಗಿ ಪಡೆಯಬಹುದು. ಸ್ಯಾಮ್‌ಸಂಗ್ ವ್ಯಾಲೆಟ್ ಸ್ಯಾಮ್‌ಸಂಗ್ ನಾಕ್ಸ್ ರಕ್ಷಣಾ ಮಟ್ಟದ ಭದ್ರತೆಯಿಂದ ರಕ್ಷಿಸಲ್ಪಟ್ಟಿದೆ.

ಸ್ಯಾಮ್‌ಸಂಗ್ ವ್ಯಾಲೆಟ್ ಸ್ಯಾಮ್‌ಸಂಗ್ ಪಾಸ್‌ನ ಕಾರ್ಯ ನಿರ್ವಹಣೆಯನ್ನು ಹೊಂದಿದ್ದು ಅದು ಸುರಕ್ಷಿತವಾಗಿ ಪಾಸ್‌ ವರ್ಡ್ ಗಳನ್ನು ಸಂಗ್ರಹಿಸಿಕೊಳ್ಳುತ್ತದೆ ಮತ್ತು ಬಳಕೆದಾರರಿಗೆ ಆ್ಯಪ್‌ಗಳು ಮತ್ತು ಸೇವೆಗಳಿಗೆ ಸುಲಭವಾಗಿ ಲಾಗಿನ್ ಆಗಲು ನೆರವಾಗುತ್ತದೆ. Galaxy A54 5G ಮತ್ತು Galaxy A34 5G ಅತ್ಯಾಧುನಿಕ ಒನ್ ಯುಐ 5.1 ಹೊಂದಿದ್ದು ಅದು ಸ್ಟಿಕರ್‌ಗಳು, ಎಮೊಜಿಗಳು ಮತ್ತು ಜಿಐಎಫ್ ಮೀಮ್‌ ಗಳ ಉನ್ನತೀಕರಿಸಿದ ಕಸ್ಟಮೈಸೇಷನ್ ನೀಡುತ್ತದೆ.

ಎರಡೂ ಮಾದರಿಯ ಫೋನ್ ಗಳು ಆನ್ ಲೈನ್ ಮತ್ತು ಆಫ್ ಲೈನ್ ಸ್ಟೋರ್ ಗಳಲ್ಲಿ ಲಭ್ಯ.

ಗ್ಯಾಲಕ್ಸಿ ಎ54 8ಜಿಬಿ+128 ಜಿಬಿ ಆವೃತ್ತಿಗೆ 38,999 ರೂ. ಹಾಗೂ 8ಜಿಬಿ+256 ಜಿಬಿ ಆವೃತ್ತಿಗೆ 40,999 ರೂ.

ಗ್ಯಾಲಕ್ಸಿ ಎ34 8+128 30,999 ರೂ. 8+256 32,999 ರೂ.

Advertisement

Udayavani is now on Telegram. Click here to join our channel and stay updated with the latest news.

Next