Advertisement

ಎ4 ಸೂಪರ್‌ ಸ್ಟಾರ್

03:18 PM Jan 08, 2018 | |

ದಶಕದ ಹಿಂದಷ್ಟೇ ಭಾರತೀಯ ಆಟೋಮೊಬೈಲ್‌ ಮಾರುಕಟ್ಟೆ ಪ್ರವೇಶಿಸಿದ್ದ ಜನಪ್ರಿಯ ಲಕ್ಷುರಿ ಕಾರುಗಳಲ್ಲಿ ಒಂದಾದ ಆಡಿ ಎ4 ಈಗಲೂ ಸೂಪರ್‌ ಹಿಟ್‌!  ಜರ್ಮನಿ ಮೂಲದ ವೋಲ್ಸ್‌ವ್ಯಾಗನ್‌ ಗ್ರೂಪ್‌ನ ಸದಸ್ಯ ಕಂಪನಿಯಾಗಿರುವ ಆಡಿ ಲಕ್ಷುರಿ ಕಾರುಗಳ ತಯಾರಿಕೆಯಲ್ಲಿ ವಿಶ್ವದಲ್ಲೇ ಅಗ್ರ ನಾಲ್ಕೈದು ಕಂಪನಿಗಳಲ್ಲಿ ಒಂದಾಗಿದೆ. ಇದೀಗ ತನ್ನ ಮೋಸ್ಟ್‌ ಪಾಪ್ಯುಲರ್‌ ಸೆಡಾನ್‌ ಸೆಗೆ¾ಂಟ್‌ನ ಎ4 ಕಾರಿನ 9ನೇ ತಲೆಮಾರಿನ
ಅರ್ಥಾತ್‌ ಜನರೇಷನ್‌ ಕಾರನ್ನು ಈಗಾಗಲೇ ಮಾರುಕಟ್ಟೆಗೆ ಪರಿಚಯಿಸಿರುವ ಆಡಿ ಕಂಪನಿ ಈ ಮೂಲಕ ಮಾರುಕಟ್ಟೆಯನ್ನೂ ವಿಸ್ತರಿಸಿಕೊಳ್ಳುತ್ತಿದೆ.

Advertisement

ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಎ4, ಮಂಗಳೂರು, ಬೆಂಗಳೂರು ಸೇರಿದಂತೆ ಭಾರತದ ಕೆಲವು ಪ್ರಮುಖ ನಗರ ಪ್ರದೇಶಗಳಲ್ಲಿ ಅಚ್ಚರಿ ಮೂಡಿಸುವಷ್ಟು ಗ್ರಾಹಕರನ್ನು ಸೃಷ್ಟಿಸಿಕೊಂಡಿದೆ. ಮರ್ಸಿಡೀಸ್‌ ಬೆಂಜ್‌ ಸಿ ಕ್ಲಾಸ್‌ ಹಾಗೂ ಬಿಎಂಡಬ್ಲ್ಯು 3ಸಿರೀಸ್‌ ಕಾರುಗಳಿಗೆ ಪ್ರಬಲ ಪೈಪೋಟಿ ನೀಡಬಲ್ಲ ಕಾರು ಇದಾಗಿದ್ದು, ಇವುಗಳ ಜನಪ್ರಿಯತೆ ನಡುವೆಯೂ ಭಾರಿ ಮಾರುಕಟ್ಟೆ ಕಂಡುಕೊಂಡಿದೆ. ಕಾರಣ ಈ ಹಿಂದಿನ ಜನರೇಷನ್‌ಗಳಿಗಿಂತ ಉತ್ಕೃಷ್ಟ ಗುಣಮಟ್ಟ ಕಾಪಾಡಿಕೊಳ್ಳಲಾಗಿದೆ. ವಿನ್ಯಾಸ ಹಾಗೂ ತಂತ್ರಜಾnನ ಅಳವಡಿಕೆಯಲ್ಲಿ ಇತರೆ ಯಾವುದೇ ಕಾರಿಗೆ ಸವಾಲೊಡ್ಡುವಂತೆ ವಿನ್ಯಾಸಗೊಳಿಸಲಾಗಿದೆ. ಹೆಡ್‌ ಮತ್ತು ಟೈಲ್‌ ಲ್ಯಾಂಪ್‌ಗ್ಳ ವಿನ್ಯಾಸ ತತ್‌ಕ್ಷಣದಲ್ಲಿ ಬ್ರಾಂಡ್‌ ಆಡಿ ನೆನಪಿಸಿಬಿಡುತ್ತದೆ.

ಹೈಟೆಕ್‌ ವಿನ್ಯಾಸ
ಈ ಮೊದಲ ವೇರಿಯಂಟ್‌ಗಳಿಗಿಂತಲೂ ಅಂದಾಜು 120 ಕೆಜಿ ಭಾರ ಕಡಿಮೆ ಹೊಂದಿದ್ದರೂ ರೋಡ್‌ ಗ್ರಿಪ್‌ ಹೊಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇಂಧನ ಕ್ಷಮತೆ ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗಿದೆ. ನೂತನ ಎ4 ಡ್ಯಾಶ್‌ಬೋರ್ಡ್‌ನ ವಿನ್ಯಾಸ ಚಾಲಕ ಸ್ನೇಹಿಯಾಗಿದೆ. ಏರ್‌ವೆಂಟ್ಸ್‌ನ ವಿನ್ಯಾಸ ಡ್ಯಾಶ್‌ಬೋರ್ಡ್‌ನ ಔಟ್‌ಲುಕ್‌ ಹೆಚ್ಚಿಸುವಂತಿದೆ. ವಚೂವಲ್‌ ಕಾಕ್‌ಪಿಟ್‌ ಇನ್‌ ಸ್ಟ್ರೆಮೆಂಟ್‌ ಕ್ಲಸ್ಟರ್‌, ಕನ್ಸಾಲ್‌ ಸ್ಟಾಕ್‌, 8.3 ಇಂಚಿನ ಎಂಎಂಐ ಡ್ಯಾಶ್‌ ಟಾಪ್‌ ಸ್ಕ್ರೀನ್‌, ಟಚ್‌ ಪ್ಯಾಡ್‌ ಎಂಎಂಐ ಕಂಟ್ರೋಲರ್‌ ಅತ್ಯಾಧುನಿಕ ತಂತ್ರಜಾnನಗಳಿಂದ ಕೂಡಿವೆ.

ಸುರಕ್ಷತೆಗೆ ಒತ್ತು
ಆಡಿ ಎಂದಿಗೂ ಸುರಕ್ಷತೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಅತ್ಯಂತ ಗುಣಮಟ್ಟದ ಸುರಕ್ಷತಾ ವ್ಯವಸ್ಥೆಯನ್ನೇ 
ನೀಡುವುದರಿಂದಲೇ ಹೆಚ್ಚಿನ ಗ್ರಾಹಕರು ಒಮ್ಮೆ ಆಡಿ ಕಾರುಗಳಿಗೆ ಅಂಟಿಕೊಂಡರೆ ಮತ್ತೆ ತಿರುಗಿ ಬೇರೆ ಕಾರಿನತ್ತ ನೋಡುವುದಿಲ್ಲ.
ಎ4 ಕಾರಿನಲ್ಲಿ 8 ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ. ಉಳಿದಂತೆ ಲೇನ್‌ ಕೀಪಿಂಗ್‌ ಅಸಿಸ್ಟ್‌, ಬ್ಲೆ„ಂಡ್‌ ಸ್ಪಾಟ್‌ ಮಾನಿಟರಿಂಗ್‌, ರೇರ್‌
ಕ್ರಾಸ್‌ ಮೆಸ್‌ ಅಲರ್ಟ್‌, ಆಕ್ರೀವ್‌ ಕ್ರೂಸ್‌ ಕಂಟ್ರೋಲ್‌ಗ‌ಳನ್ನೂ ಅಳವಡಿಸಲಾಗಿದೆ.

ಗುಣಮಟ್ಟದ ಎಂಜಿನ್‌
1.4ಲೀಟರ್‌ ಟಿಎಫ್ಎಸ್‌ಐ ಪೆಟ್ರೋಲ್‌ ಎಂಜಿನ್‌ ಹೊಂದಿರುವ ಎ 4 ಸಾಮರ್ಥ್ಯ ಅಸಾಮಾನ್ಯ. 150 ಅಶ್ವಶಕ್ತಿ ಸಾಮರ್ಥ್ಯ ಹೊಂದಿರುವ ಎ 4, 8.5 ಸೆಕೆಂಡ್‌ಗಳಲ್ಲಿ 0-100 ಕಿ.ಮೀ. ವೇಗ ಕಂಡುಕೊಳ್ಳಲಿದೆ. 210 ಕಿ.ಮೀ. ಗರಿಷ್ಠ ವೇಗ ಇದರದ್ದಾಗಿದ್ದು, ಪ್ರತಿ ಲೀಟರ್‌ ಪೆಟ್ರೋಲ್‌ಗೆ 17 ಕಿ.ಮೀ. ಮೈಲೇಜ್‌ ಹೊಂದಿದೆ. 

Advertisement

17 ಕಿ.ಮೀ. ಪ್ರತಿ ಲೀಟರ್‌ಗೆ ಮೈಲೇಜ್‌
54 ಲೀಟರ್‌ ಇಂಧನ ಶೇಖರಣೆ ಗರಿಷ್ಠ ಮಿತಿ 

ಶೋ ರೂಂ ಬೆಲೆ: 39-45 ಲಕ್ಷ ರೂ.

ಉದ್ದ 4701 ಮಿ.ಮೀ./ ಅಗಲ 1826 ಮಿ.ಮೀ
 165 ಮಿ.ಮೀ. ಗ್ರೌಂಡ್‌ ಕ್ಲಿಯರೆನ್ಸ್‌
 ಬೂಟ್‌ ಸ್ಪೇಸ್‌ 480 ಲೀಟರ್‌
ಕಾರಿನ ಭಾರ 1595 ಕಿಲೋ ಗ್ರಾಂ.

ಅಗ್ನಿಹೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next