Advertisement

ತ್ರಿಪುರ ಮೂಲದ ಯುವಕ, ಬಾಲಕಿ ಪೊಲೀಸರ ವಶಕ್ಕೆ

11:43 AM Jul 28, 2018 | Team Udayavani |

ಕೆ.ಆರ್‌.ಪುರ: ತ್ರಿಪುರದ ಹಿಂದೂ ಅಪ್ರಾಪೆ¤ಯ ಮನಸ್ಸು ಪರಿವರ್ತನೆ ಮಾಡಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ ಆರೋಪದ ಮೇಲೆ ಸೋರಬ್‌ ಹುಸೇನ್‌ ಎಂಬಾತನನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ. ಇದು ಲವ್‌ ಜಿಹಾದ್‌ ಎಂಬ ಶಂಕೆಯಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Advertisement

ಇತ್ತೀಚೆಗಷ್ಟೇ ಕಲಬುರಗಿಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಯ ಪತ್ನಿ ಲವ್‌ ಜಿಹಾದ್‌ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪ ಕೇಳಿಬಂದಿತ್ತು. ಬೆಂಗಳೂರಿನಲ್ಲಿದ್ದ ಅವರ ನಿವಾಸದ ಮೇಲೂ ಎನ್‌ಐಎ ದಾಳಿ ನಡೆಸಿತ್ತು.

ಹಿಂದೂ ಧರ್ಮಕ್ಕೆ ಸೇರಿರುವ ಅಪ್ರಾಪೆ¤ಯನ್ನು ಫೇಸ್‌ಬುಕ್‌ ಮೂಲಕ ಸೋರಬ್‌ ಹುಸೇನ್‌ ಪರಿಚಯ ಮಾಡಿಕೊಂಡಿದ್ದ. ನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಮೂರು ತಿಂಗಳ ಹಿಂದೆ ಇಬ್ಬರೂ ಮನೆ ಬಿಟ್ಟು ಬಂದಿದ್ದರು.

ತ್ರಿಪುರದಿಂದ ಆಗರ್ತಲಾ, ಕೊಲ್ಕತ್ತಾ, ಚೆನ್ನೈ, ಊಟಿ ಸೇರಿ ಹಲವೆಡೆ ಸುತ್ತಾಡಿದ್ದರು. ವಾರದ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದ ಜೋಡಿ, ಮಹದೇವಪುರ ಪೋಲಿಸ್‌ ಠಾಣೆ ವ್ಯಾಪ್ತಿಯ ಬಿ.ನಾರಾಯಣಪುರದ ಶೆಡ್‌ ಒಂದರಲ್ಲಿ ವಾಸವಾಗಿದ್ದರು.

ಈ ಮಧ್ಯೆ, ಮೂರು ತಿಂಗಳ ಹಿಂದೆ ಯುವತಿ ಕಾಣೆಯಾಗಿರುವ ಬಗ್ಗೆ ಆಕೆಯ ಸಹೋದರ ತ್ರಿಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ತ್ರಿಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಯುವತಿಯ ಫೋನ್‌ ಕರೆಗಳನ್ನು ಟ್ರ್ಯಾಪ್‌ ಮಾಡಲಾಗಿತ್ತು.

Advertisement

ಯುವತಿ ಕಾಣೆಯಾಗಿರುವ ಬಗ್ಗೆ ಅಲ್ಲಿನ ಭಾರತ್‌ ರಕ್ಷಾ ಮಂಚ್‌ ಸಂಘಟನೆ ಸಹ ಹುಡುಕಾಟ ನಡೆಸಿತ್ತು. ಜತೆಗೆ ಆ ಸಂಘಟನೆಯ ಬೆಂಗಳೂರಿನ ಶಾಖೆಗೂ ಮಾಹಿತಿ ನೀಡಿತ್ತು. ನಗರದಲ್ಲಿದ್ದ ಸಂಘಟನೆಯ ಸದಸ್ಯರು ಸೋರಬ್‌ ಹುಸೇನ್‌ ಹಾಗೂ ಯುವತಿ ಇರುವ ವಿಳಾಸ ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವಿಚಾರಣೆ ವೇಳೆ ಇಬ್ಬರೂ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ಇದೊಂದು ಲವ್‌ ಜಿಹಾದ್‌ ಪ್ರಕರಣ ಇರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈಗಾಗಲೇ ತ್ರಿಪುರ ಪೊಲೀಸರಿಗೆ ಮಾಹಿತಿ ನೀಡಿದ್ದು, ಯುವತಿಯನ್ನು ಕರೆದೊಯ್ಯಲು ಆಗಮಿಸುತ್ತಿದ್ದಾರೆ ಎಂದು ಮಹದೇವಪುರ ಪೊಲೀಸರು ತಿಳಿಸಿದ್ದಾರೆ.

ಮೂರು ದಿನಗಳ ಹಿಂದೆ ನಮ್ಮ ಸಂಘಟನೆಯ ತ್ರಿಪುರ ರಾಜ್ಯಾಧ್ಯಕ್ಷರಿಂದ ಕರೆ ಬಂದಿತ್ತು. ಅವರು ಈ ಘಟನೆ ಬಗ್ಗೆ ಹೇಳಿದಾಗ ನಾವು ಹುಡುಕಾಟ ನಡೆಸಿದೆವು. ಒಂದು ವಾರದಿಂದ ಬಿ.ನಾರಾಯಣಪುರದ ಶೆಡ್‌ನ‌ಲ್ಲಿ  ವಾಸವಾಗಿದ್ದ ಯುವಕ ಗಾರೆ ಕೆಲಸ ಮಾಡುತ್ತಿದ್ದ.

ಇವರಿಬ್ಬರೂ ಮತ್ತೆ ಚೆನ್ನೈಗೆ ಹೋಗಲು ಸಿದ್ಧರಾಗಿದ್ದರು. ಬಾಲಕಿಯ ವಯಸ್ಸು ಕೇವಲ 16 ವರ್ಷ ಆಗಿರುವ ಕಾರಣ ಇದು ಲವ್‌ ಜಿಹಾದ್‌ ಪ್ರಕರಣ ಇರಬಹುದು ಎಂಬ ಶಂಕೆ ಇದೆ ಎಂದು ಭಾರತ್‌ ರûಾ ಮಂಚ್‌ನ ಕರ್ನಾಟಕ ಮುಖ್ಯಸ್ಥ ಶಶಾಂಕ್‌ ಭಟ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next