Advertisement

Train: ಲೈಂಗಿಕ ಕಿರುಕುಳ ವಿರೋಧಿಸಿದ ಯುವತಿಯನ್ನು ಚಲಿಸುತ್ತಿರುವ ರೈಲಿನಿಂದ ತಳ್ಳಿದ ದುರುಳ!

09:00 PM Oct 11, 2023 | Team Udayavani |

ಬರೇಲಿ: ಲೈಂಗಿಕ ಕಿರುಕುಳ ವಿರೋಧಿಸಿದ 17 ವರ್ಷದ ಯುವತಿಯನ್ನು ದುರುಳನೊಬ್ಬ ಚಲಿಸುತ್ತಿರುವ ರೈಲಿನಿಂದ ಕೆಳಕ್ಕೆ ತಳ್ಳಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ಮಂಗಳವಾರ ನಡೆದಿದೆ. ಘಟನೆಯಲ್ಲಿ ಯುವತಿ ತನ್ನೆರಡು ಕಾಲುಗಳು ಹಾಗೂ ಒಂದು ಕೈಯನ್ನು ಕಳೆದುಕೊಂಡಿದ್ದಾಳೆ. ಸಿ.ಬಿ.ಗಂಜ್‌ ಪ್ರದೇಶದ ಕೋಚಿಂಗ್‌ ಸೆಂಟರ್‌ನಿಂದ ಮಂಗಳವಾರ ಸಂಜೆ ಯುವತಿ ರೈಲಿನಲ್ಲಿ ಮನೆಗೆ ಮರಳುತ್ತಿದ್ದಳು.
ರೈಲಿನಲ್ಲಿ ಅದೇ ಗ್ರಾಮದ ಯುವಕ ವಿಜಯ್‌ ಮೌರ್ಯ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದಾನೆ. ಇದನ್ನು ಆಕೆ ವಿರೋಧಿಸಿದಕ್ಕಾಗಿ, ಆಕೆಯನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಿದ್ದಾನೆ. ಇದರಿಂದ ಯುವತಿ ಹಲವು ಮೂಳೆಗಳ ಮುರಿತಕ್ಕೆ ಒಳಗಾಗಿದ್ದಾಳೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ, ನಿರ್ಲಕ್ಷ್ಯದ ಆರೋಪದಲ್ಲಿ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next