Advertisement

Bengaluru: ಪ್ರೇಮ ವೈಫ‌ಲ್ಯ; ರೈಲಿಗೆ ತಲೆ ಕೊಟ್ಟು ಯುವತಿ ಆತ್ಮಹತ್ಯೆ

10:54 AM Aug 14, 2024 | Team Udayavani |

ಬೆಂಗಳೂರು: ಪ್ರೇಮ ವೈಫ‌ಲ್ಯಕ್ಕೆ ಮನನೊಂದು ಯುವತಿಯೊಬ್ಬಳು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಲದೇವನಹಳ್ಳಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

Advertisement

ಪಶ್ಚಿಮ ಬಂಗಾಳ ಮೂಲದ ಲಿಖೀತಾ ಗಾಜ್ಮಿàರ್‌ (25) ಮೃತ ಯುವತಿ ಎಂದು ಗುರುತಿಸಲಾಗಿದೆ. 10 ದಿನಗಳ ಹಿಂದಷ್ಟೇ ತನ್ನ ಸಹೋದರಿ ಮನೆಗೆ ಬಂದಿದ್ದ ಯುವತಿ ಮಂಗಳವಾರ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದರು.

ಬಿಎ ಪದವೀಧರಳಾಗಿರುವ ಲಿಖಿತಾ ಡಾರ್ಜಿ ಲಿಂಗ್‌ನಲ್ಲಿ ಬಿಹಾರ ಮೂಲದ ಯುವಕನನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದಳು. ಇಬ್ಬರ ಪ್ರೇಮ ಚೆನ್ನಾಗಿಯೇ ಇತ್ತು. ಆದರೆ ಇತ್ತೀಚೆಗೆ ಕ್ಷುಲ್ಲಕ ಕಾರಣಗಳಿಗಾಗಿ ಲವ್‌ ಬ್ರೇಕ್‌ ಅಪ್‌ ಆಗಿತ್ತು. ಅದರಿಂದ ಲಿಖೀತಾ ಮನನೊಂದಿದ್ದಳು. ಸಾಯುವ ಮಾತಗಳನ್ನಾಡುತ್ತಿದ್ದಳು. ಆದರಿಂದ ಬೆಂಗಳೂರಿನ ಸೋಲ ದೇವನಹಳ್ಳಿಯಲ್ಲಿದ್ದ ಸಹೋದರಿ, ಆ.3ರಂದು ತನ್ನ ಮನೆಗೆ ಕರೆದುಕೊಂಡು ಬಂದಿದ್ದರು.

ಆದರೆ, ಮಂಗಳವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಮನೆಯಿಂದ ಹೊರಗಡೆ ಬಂದ ಲಿಖೀತಾ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದರು. ಯಶವಂತಪುರ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next