Advertisement

‌Arrested: ವಿಧಾನಸೌಧ ಮೇಲೆ ಡ್ರೋನ್‌ ಹಾರಿಸಿದ ಯುವಕ ಸೆರೆ

12:11 PM Oct 27, 2024 | Team Udayavani |

ಬೆಂಗಳೂರು: ಅನುಮತಿ ಇಲ್ಲದೆ ವಿಧಾನಸೌಧ ಕಟ್ಟಡದ ಮೇಲೆ ಡ್ರೋನ್‌ ಕ್ಯಾಮೆರಾ ಹಾರಿಸಿದ್ದ ವ್ಯಕ್ತಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ತುಮಕೂರು ಜಿಲ್ಲೆ ಉಪ್ಪಾರಹಳ್ಳಿ ನಿವಾಸಿ ವಿನಯ್‌(33) ಬಂಧಿತ ಆರೋಪಿ. ಈತನಿಂದ ಡ್ರೋನ್‌ ಕ್ಯಾಮೆರಾ ಹಾಗೂ ರಿಮೋಟ್‌ ಜಪ್ತಿ ಮಾಡಲಾಗಿದೆ. ವಿಧಾನಸೌಧ ಪೊಲೀಸ್‌ ಠಾಣೆ ಹೆಡ್‌ಕಾನ್‌ಸ್ಟೆàಬಲ್‌ ಎಚ್‌.ಎನ್‌.ಶಿವಕುಮಾರ್‌ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಹೆಡ್‌ಕಾನ್‌ಸ್ಟೇಬಲ್‌ ಶಿವಕುಮಾರ್‌ ಶುಕ್ರವಾರ ಬೆಳಗ್ಗೆ ಸುಮಾರು 7.30ಕ್ಕೆ ಗಸ್ತು ಕರ್ತವ್ಯದಲ್ಲಿದ್ದರು. ವಿಧಾನಸೌಧದ ಪೂರ್ವ ದ್ವಾರದ ಬಳಿ ಬರುವಾಗ, ಕಟ್ಟಡದ ಮೇಲಿಂದ ಶಬ್ದ ಕೇಳಿ ಬಂದಿದೆ. ತಕ್ಷಣ ಮುಂದೆ ಹೋಗಿ ನೋಡಿದಾಗ ವಿಧಾನಸೌಧ ಕಟ್ಟಡದ ಮೇಲೆ ಚಿಕ್ಕ ಡ್ರೋನ್‌ ಹಾರಾಡುತ್ತಿರುವುದು ಕಂಡು ಬಂದಿದೆ.

ಕೊಂಚ ಮುಂದೆ ತೆರಳಿ ಸುತ್ತಮುತ್ತ ಪರಿಶೀಲಿಸಿದಾಗ ಅಂಬೇಡ್ಕರ್‌ ವೀದಿಯ ಹೈಕೋರ್ಟ್‌ ಕಡೆ ಇರುವ ಮೆಟ್ರೋ ನಿಲ್ದಾಣದ ಪಕ್ಕದಲ್ಲಿ ಅಪರಿಚಿತ ವ್ಯಕ್ತಿ ಕೈಯಲ್ಲಿ ರಿಮೋಟ್‌ ಹಿಡಿದುಕೊಂಡು ಡ್ರೋನ್‌ ಹಾರಾಟ ನಡೆಸುತ್ತಿರುವುದು ಕಂಡು ಬಂದಿದೆ. ಬಳಿಕ ಆತನನ್ನು ವಶಕ್ಕೆ ಪಡೆದು ಡ್ರೋನ್‌ ಕೆಳಗೆ ಇಳಿಸಿ, ಡ್ರೋನ್‌ ಹಾಗೂ ರಿಮೋಟ್‌ ಜಪ್ತಿ ಮಾಡಿದ್ದಾರೆ. ಬಳಿಕ ಆರೋಪಿಯನ್ನು ಹೊಯ್ಸಳ ಗಸ್ತು ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‌ಐ ಸುಭಾಷ್‌ ಚಂದ್ರ ಅವರ ವಶಕ್ಕೆ ಒಪ್ಪಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ವಿನಯ್, ಪ್ರೀವೆಡ್ಡಿಂಗ್‌ ಪ್ರಯುಕ್ತ ತುಮಕೂರಿನಿಂದ ಬೆಂಗಳೂರಿಗೆ ಬಂದು ಡ್ರೋನ್‌ ಕ್ಯಾಮರಾದಲ್ಲಿ ವಿಧಾನಸೌಧ ಕಟ್ಟಡದ ವಿಡಿಯೋ ಸೆರೆ ಹಿಡಿಯುತ್ತಿದ್ದಾಗಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಈ ಸಂಬಂಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next