—————-
ರೈಲು ಢಿಕ್ಕಿ ಹೊಡೆದು ಯುವಕನ ಸಾವು
Advertisement
ಕಾಸರಗೋಡು: ಕಣ್ಣೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ 32,77,560 ರೂ. ಮೌಲ್ಯದ 572 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕಾಸರಗೋಡು ನಿವಾಸಿ ಶಬಿನ್ ಅಲಿಯಿಲ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈತ ಗೋ-ಫಾಸ್ಟ್ ವಿಮಾನದಲ್ಲಿ ಅಬುಧಾಬಿಯಿಂದ ಬಂದಿಳಿದಿದ್ದನು.————————————————————————————————————–
ಚೆಕ್‌ಲೀಫ್, ಎಟಿಎಂ ಕಸಿದ ಪ್ರಕರಣ : ಇಬ್ಬರ ವಿರುದ್ಧ ಕೇಸು ದಾಖಲು
ಕಾಸರಗೋಡು: ಹೊಟೇಲ್‌ನಲ್ಲಿ ತಂಗಿದ್ದ ಎರ್ನಾಕುಳಂ ನೆಟ್ಟೂರು ಚೆರಿಯಪರಂಬಿಲ್ ನಿವಾಸಿ ಮುಹಮ್ಮದ್ ಶರೀಫ್ (51) ಅವರನ್ನು ಕಾರಿನಲ್ಲಿ ಅಪಹರಿಸಿ ಬೆದರಿಸಿ ಚೆಕ್‌ಲೀಫ್ ಮತ್ತು ಎಟಿಎಂ ಕಾರ್ಡ್ ಮೊದಲಾದವುಗಳನ್ನು ಕಸಿದೆಳೆದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಚೀಫ್ ಜುಡೀಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ ನಿರ್ದೇಶ ಪ್ರಕಾರ ಉಪ್ಪಳ ಬಾಯಾರುಪದವಿನ ಜಾವಾದ್ ಹಾಸಿಫ್ ಸಹಿತ ಇಬ್ಬರ ವಿರುದ್ಧ ಕಾಸರಗೋಡು ಪೊಲೀಸರು ಕೇಸು ದಾಖಲಿಸಿದ್ದಾರೆ. 2022ರ ಡಿ. 31ರಂದು ಕಾರಿನಲ್ಲಿ ಜೋಡುಕಲ್ಲಿಗೆ ಕೊಂಡೊಯ್ದು ಹಲ್ಲೆ ಮಾಡಿ ಬೆದರಿಸಿ ತನ್ನ ಬ್ಯಾಂಕ್ ಚೆಕ್‌ಲೀಫ್‌ಗಳು, ಎಟಿಎಂ ಕಾರ್ಡ್‌ಗಳು, ಮೊಬೈಲ್ ಫೋನ್, ಸ್ಟಾಂಪ್ ಪೇಪರ್‌ಗಳನ್ನು ಕಸಿದುಕೊಂಡು ಅದನ್ನು ಬಳಸಿ ಹಣ ಪಡೆದುಕೊಂಡಿದ್ದಾಗಿ ದೂರು ನೀಡಲಾಗಿತ್ತು.
————————————————————————————————————–
ರಜಾ ಅವಧಿ ಕಡಿತಗೊಳಿಸಿ ಕರ್ತವ್ಯಕ್ಕೆ ಹಾಜರಾದ ಮಾಜಿ ಪ್ರಾಂಶುಪಾಲೆ
ಕಾಸರಗೋಡು: ಕಾಸರಗೋಡು ಸರಕಾರಿ ಕಾಲೇಜಿನ ಈ ಹಿಂದಿನ ಪ್ರಾಂಶುಪಾಲೆ ಡಾ| ಎಂ. ರಮಾ ತಮ್ಮ ದೀರ್ಘ ಕಾಲದ ರಜಾ ಅವಧಿ ಕಡಿತಗೊಳಿಸಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅವರು ಕಾಲೇಜಿಗೆ ಪ್ರವೇಶಿಸುತ್ತಿದ್ದಂತೆಯೇ ಎಸ್‌ಎಫ್‌ಐ ವಿದ್ಯಾರ್ಥಿಗಳು ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಮತ್ತೆ ಪ್ರತಿಭಟಿಸಿದರು.