Advertisement

ಪಂದ್ಯದ ವೇಳೆ ಹೃದಯಾಘಾತ ಯುವ ಫ‌ುಟ್ಬಾಲಿಗ ನಿಧನ

12:30 AM Feb 12, 2019 | |

ಕೋಲ್ಕತಾ: ಇಲ್ಲಿ ನಡೆದ ಅಂತರ್‌ ವಿಶ್ವವಿದ್ಯಾಲಯ ಫ‌ುಟ್‌ಬಾಲ್‌ ಪಂದ್ಯದ ವೇಳೆ ಹೃದಯಾಘಾತದಿಂದ ಆಟಗಾರನೊಬ್ಬ ಸಾವಿಗೀಡಾಗಿದ್ದಾನೆ. ದುರಂತ ಅಂತ್ಯ ಕಂಡ ಈ ಎಳೆಯ ಆಟಗಾರನೇ, 23 ವರ್ಷದ ರಿತಿಕ್‌ ದಾಸ್‌.

Advertisement

ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಪೂರ್ವ ಕೇಂದ್ರದಲ್ಲಿ ಪಂದ್ಯವನ್ನು ಆಯೋಜಿಸಲಾಗಿತ್ತು. ಈ ಪಂದ್ಯದ ವೇಳೆ ದುರ್ಘ‌ಟನೆ ಸಂಭವಿಸಿದೆ. ರಿತಿಕ್‌ ದಾಸ್‌ ಒಡಿಶಾದ ಕಟಕ್‌ನ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ. ಪಂದ್ಯ ಸಾಗುತ್ತಿದ್ದ ವೇಳೆಯೇ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದರು.

2017-18ರಲ್ಲಿ ಸಾಯ್‌ ಪೂರ್ವ ಕೇಂದ್ರದಲ್ಲಿ ನಡೆದಿದ್ದ ಬ್ಯಾಡ್ಮಿಂಟನ್‌ ಕೂಟದ ವೇಳೆಯೂ ಇಂಥದೇ ಘಟನೆ ನಡೆದಿತ್ತು. ಅಂದು ನಿಹರೆಂಡು ಮಲಿಕ್‌ ಸಾವಿಗೀಡಾಗಿದ್ದನ್ನು ಸ್ಮರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next