Advertisement

ಥಿಯೋಡೋರ್‌ ಫಾನ್‌ ಕಾರ್ಮಾನ್‌ರವರ ಅದ್ಭುತ ಪಾಠ 

01:06 PM Jul 21, 2020 | mahesh |

ಥಿಯೋಡೋರ್‌ ಫಾನ್‌ ಕಾರ್ಮಾನ್‌, ಪ್ರಸಿದ್ಧ ಏರೋಸ್ಪೇಸ್‌ ಇಂಜಿನಿಯರ್‌. ಗಣಿತಜ್ಞ. ಹಂಗೆರಿಯಲ್ಲಿ ಹುಟ್ಟಿದ ಕಾರ್ಮಾನ್‌, ಜರ್ಮನಿಯ ಪ್ರಸಿದ್ಧ ಗಾಟಿಂಗೆನ್‌ ವಿವಿಯಲ್ಲಿ ಓದಿ, ನಂತರ ಅಲ್ಲೇ ಕೆಲವರ್ಷ ಪ್ರಾಧ್ಯಾಪಕರೂ ಆಗಿದ್ದರು.

Advertisement

ಒಂದು ಕಾಲದಲ್ಲಿ ಅಮೆರಿಕದ ಕ್ಯಾಲ್ಟೆಕ್‌ (ಕ್ಯಾಲಿ ಫೋರ್ನಿಯಾ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ) ಮತ್ತು ಜರ್ಮನಿಯ ಆಖೆನ್‌ ವಿವಿ – ಇವೆರಡರಲ್ಲೂ ಅವರು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದುದರಿಂದ, ಅಮೆರಿಕ-ಜರ್ಮನಿಗಳ ನಡುವೆ ಮೇಲಿಂದ ಮೇಲೆ ವಿಮಾನಯಾನ ಮಾಡುತ್ತಿದ್ದರು. ವಾರದಲ್ಲಿ ಅಲ್ಲಿ ಎರಡು ದಿನ, ಇಲ್ಲಿ ಎರಡು ದಿನ ತರಗತಿ ಮಾಡುತ್ತಿದ್ದದ್ದೂ ಉಂಟು. ಎರಡೂ ಕಡೆಗಳಲ್ಲಿ ಅವರು ಮಾಡುತ್ತಿದ್ದ ಉಪನ್ಯಾಸಗಳ ವಿಷಯಗಳು ಒಂದೇ ಆಗಿರುತ್ತಿದ್ದವು.

ಒಮ್ಮೆ ಕಾರ್ಮಾನ್‌ ಕ್ಲಾಸಿಗೆ ಬಂದರು. ಎಂದಿನಂತೆ ಪಾಠ ಶುರುಮಾಡಿದರು. ಆದರೆ, ಸ್ವಲ್ಪ ಹೊತ್ತು ಕಳೆವಷ್ಟರಲ್ಲಿ ಅವರಿಗೆ, ವಿದ್ಯಾರ್ಥಿಗಳ ಮುಖಗಳೆಲ್ಲ ಕಳಾಹೀನವಾಗಿವೆ ಅನ್ನಿಸತೊಡಗಿತು. ಯಾರ ಕಡೆಯಿಂದಲೂ ಯಾವ ಪ್ರತಿಕ್ರಿಯೆಯೂ ಇಲ್ಲ. ಎಲ್ಲರೂ ಗೋಣು ಕೆಳಹಾಕಿ ಕೂತಿದ್ದಾರೆ. ಏನಿರಬಹುದು ವಿಷಯ? ಎಂದು, ಉಪನ್ಯಾಸ ಮುಂದುವರಿಸುತ್ತಲೇ ಫಾನ್‌ ಕಾರ್ಮಾನ್‌ ಯೋಚಿಸತೊಡಗಿದರು. ಅಷ್ಟರಲ್ಲಿ ಅವರಿಗೆ ಕಾರಣ ಹೊಳೆಯಿತು. ತಾನೀಗ ಇರುವುದು
ಕ್ಯಾಲ್ಟೆಕ್‌ನಲ್ಲಿ. ಆದರೆ ಆಖೆನ್‌ನಲ್ಲಿ ಮಾಡಿದಂತೆ ಜರ್ಮನ್‌ ಭಾಷೆಯಲ್ಲಿ ಉಪನ್ಯಾಸ ಕೊಡುತ್ತಿದ್ದೇನೆ! ಕೂಡಲೇ ಇಂಗ್ಲೀಷಿನಲ್ಲಿ ಮಾತಿಗಾರಂಭಿಸಿ ವಿದ್ಯಾರ್ಥಿಗಳ ಕ್ಷಮೆ ಕೇಳಿದರು. ನಾನು ಇಷ್ಟು ಹೊತ್ತು ಜರ್ಮನ್‌ನಲ್ಲಿ ಮಾತಾಡುತ್ತಿದ್ದರೂ ಯಾಕೆ ಸಹಿಸಿಕೊಂಡಿರಿ? ಹೇಳಬಹುದಿತ್ತಲ್ಲ? ಎಂದು ಹುಸಿಕೋಪದಿಂದ ವಿದ್ಯಾರ್ಥಿಗಳನ್ನು ಕೇಳಿದರು ಫಾನ್‌ ಕಾರ್ಮಾನ್‌.

ತರಗತಿ ಆಗಲೂ ಮೌನವಾಗಿತ್ತು. ಕೊನೆಗೆ ಒಬ್ಬ ವಿದ್ಯಾರ್ಥಿ ಎದ್ದುನಿಂತು ಹೇಳಿದನಂತೆ: ಪ್ರೊಫೆಸರ್‌, ನೀವು ಜರ್ಮನ್‌ನಲ್ಲಿ ಮಾತಾಡಿದರೂ, ಇಂಗ್ಲೀಷ್‌
ನಲ್ಲಿ ಮಾತಾಡಿದರೂ ನಮಗೇನೂ ವ್ಯತ್ಯಾಸವಿಲ್ಲ. ಎರಡೂ ಒಂದೇ!

ರೋಹಿತ್‌ ಚಕ್ರತೀರ್ಥ

Advertisement
Advertisement

Udayavani is now on Telegram. Click here to join our channel and stay updated with the latest news.

Next