Advertisement

97 ಬೀದಿ ನಾಯಿಗಳಿಗೆ ಆಶ್ರಯ ನೀಡಿದ ಮಹಿಳೆ

09:23 AM Sep 12, 2019 | Team Udayavani |

ಮಣಿಪಾಲ: ಅಂಟ್ಲಾಟಿಕ್ ಮಹಾ ಸಾಗರದ ಮಧ್ಯೆ ಇರುವ ಪುಟ್ಟ ದ್ವೀಪ ಬಹಾಮಾಸ್ ಇತ್ತೀಚೆಗೆ ಡೋರಿಯೆನ್ ಚಂಡಮಾರುತಕ್ಕೆ (ಹುರಿಕೇನ್ 5) ಗೆ ತತ್ತರಿಸಿತ್ತು. ಈ ವೇಳೆ ಜನ ಸಮಾನ್ಯರು ಇದರ ತೀವ್ರತೆಗೆ ಬಲಿಯಾಗಿದ್ದರು. ಸಂತ್ರಸ್ಥ ಜನರಿಗೆ ಸರಕಾರಗಳು ಆಶ್ರಯ ನೀಡಿದ್ದರೆ ಅತ್ತ ಯುವತಿಯೊಬ್ಬಳು ಬೀದಿ ನಾಯಿಗಳನ್ನು ರಕ್ಷಿಸಿದ್ದಾಳೆ.

Advertisement

ಹೌದು ಡೋರಿಯೆನ್ ಹುರಿಕೇನ್ ಒಂದೆಡೆ ತನ್ನ ರೌಧ್ರ ನರ್ತನವನ್ನು ತೋರ್ಪಡಿಸುತ್ತಿದ್ದರೆ ಇತ್ತ ಚೆಲ್ಲಾ ಫಿಲಿಪ್ಸ್ ಎಂಬ ಯುವತಿ ತನ್ನ ಮಾನವೀಯತೆಯನ್ನು ಪ್ರದರ್ಶಿಸಿದ್ದಾಳೆ. ಒಟ್ಟು 97 ಬೀದಿ ನಾಯಿಗಳನ್ನು ತಂದು ತನ್ನ ಮನೆಯಲ್ಲಿ ಪೋಷಿಸುತ್ತಿರುವ ಈ ಯುವತಿಯ ಕಾರ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗುತ್ತಿದೆ.

ಪ್ರಶಂಸೆಗಳ ಸುರಿಮಳೆ
97 ನಾಯಿಗಳ ಪೈಕಿ 79 ನಾಯಿಗಳಿಗೆ ತನ್ನ ಮಾಸ್ಟರ್ ಬೆಡ್ರೂಂನಲ್ಲೇ ಆಶ್ರಯ ನೀಡಲಾಗಿದ್ದು ಅವುಗಳಿಗೆ ಆಹಾರವನ್ನೂ ನೀಡಲಾಗಿದೆ. ಈ ಕುರಿತಂತೆ ತಮ್ಮ ಈ ಕಾರ್ಯದ ಚಿತ್ರವನ್ನು ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದು ಜಗತ್ತಿನ ಎಲ್ಲೆಡೆಯಿಂದ ಪ್ರಶಂಸೆಗಳ ಸುರಿಮಳೆ ಬರುತ್ತಿದೆ.

Advertisement

ಹರಟೆಯಾಗಲ್ಲ ಎಂದ ಯುವತಿ
ತನ್ನ ಕೊಠಡಿಯಲ್ಲಿ ಕೂಡಿ ಹಾಕಲಾದ ನಾಯಿಗಳು ಒಂದೇ ಸಮನೆ ಕೂಗುತ್ತಿದ್ದರೂ ಅವುಗಳು ನನಗೆ ಹರಟೆಯಾಗಿ ಅನ್ನಿಸಲೇ ಇಲ್ಲ ಎಂದು ಯುವತಿ ಹೇಳಿದ್ದಾಳೆ. ಸಹಜವಾಗಿ ರಸ್ತೆಯಲ್ಲಿ ಓಡಾಡಿಕೊಳ್ಳುತ್ತಿದ್ದ ನಾಯಿಗಳನ್ನು ತಂದು ಕೂಡಿ ಹಾಕಿದಾಗ ಅವುಗಳ ಮನೆಯ ವಾತಾವರಣಕ್ಕೆ ಅಥವ ಬಂಧನದ ವಾತಾವರಣಕ್ಕೆ ಒಗ್ಗಿಕೊಳ್ಳುವುದಿಲ್ಲ.

ನಾನು ಮಲಗುವ ಬೆಡ್ಮೇಲೆ ಅವುಗಳು ಯಾವತ್ತೂ ಬಂದೇ ಇಲ್ಲ ಅವರು ಹೇಳಿದ್ದು, ಮನೆಯಲ್ಲಿ ಜೋರಾಗಿ ಸಂಗೀತವನ್ನು ಹಾಕಲಾಗಿದ್ದು ಅವುಗಳು ಆಲಿಸುತ್ತಿದ್ದು, ಬೊಬ್ಬೆಹಾಕುತ್ತಿಲ್ಲ ಎಂದು ಹೇಳಿದ್ದಾರೆ. ಕೂಡಿ ಹಾಕಲಾದ ಶ್ವಾನಗಳ ಪೈಕಿ ನಾಯಿ ಮರಿಗಳೂ ಸೇರಿವೆ. ಈ 97 ನಾಯಿಗಳ ಪೈಕಿ ಹಲವು ಒಳ್ಳೆಯ ಜಾತಿ ನಾಯಿಗಳೂ ಸೇರಿವೆ.

ಈ ಭೀಕರ ಚಂಡಮಾರುತಕ್ಕೆ 45 ಜನರು ಪ್ರಾಣ ಕಳೆದುಕೊಂಡಿದ್ದರು. ಅವರ ಪುನರ್ವಸತಿಗಾಗಿ ಸರಕಾರ ಶ್ರಮಿಸುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next