Advertisement
ಅವರ ಮದುವೆಗೆ ಮನೆಯವರಿಂದ ವಿರೋಧ ವ್ಯಕ್ತವಾಗಿತ್ತು. ಅದಾದ ಬಳಿಕ ಲಾಕ್ ಡೌನ್ ಜಾರಿಯಾಗಿದ್ದು, ಇಬ್ಬರ ಓಡಾಟಕ್ಕೂ ಬ್ರೇಕ್ ಬಿದ್ದಿತ್ತು. ಭಯ ಬಿದ್ದ ಯುವತಿ ಪ್ರಿಯಕರನ ಮನೆಗೆ ನಡೆದುಕೊಂಡೇ ಹೋಗಿ ಆತನ ಕೈಹಿಡಿಯುವಲ್ಲಿ ಯಶಸ್ವಿಯಾಗಿದ್ದಾಳೆ
ಲಾಕ್ ಡೌನ್ ಹೊರತಾಗಿಯೂ ಮುಂಬಯಿನ 28 ವರ್ಷ ವಯಸ್ಸಿನ ವ್ಯಕ್ತಿ ಮೊದಲೇ ನಿಶ್ಚಯವಾದ ದಿನದಂದೇ ಮದುವೆಯಾಗಬೇಕು ಎಂದು ಗುರುವಾರ ಮದುವೆಯಾಗಿದ್ದಾರೆ. ಅವರ ಮದುವೆಗೆ ಬಂಧುಗಳು, ಸ್ನೇಹಿತರ ಅನು ಪಸ್ಥಿತಿಯಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ರಾಮ್‌ಕಿಶನ್ ಚವಾಣ್ ಮತ್ತು ರೀಮಾ ಸಿಂಗ್ 5 ವರ್ಷಗಳಿಂದ ಪ್ರೀತಿಸುತ್ತಿದ್ದರು. ಲಾಕ್‌ಡೌನ್ ಇರುವುದರಿಂದ ಮದುವೆಯನ್ನು ಮುಂದೂಡಲಿಲ್ಲ. ಸ್ಥಳೀಯ ಆಡಳಿತದ ಅನುಮತಿ ತೆಗೆದುಕೊಂಡು ದೇವಸ್ಥಾನದಲ್ಲಿ ಮದುವೆಯಾದೆವು ಎಂದು ರಾಮ್ ಕಿಶನ್ ಹೇಳಿದ್ದಾರೆ.