Advertisement
ಗಾಳಿಮುಖದ ದಿ. ರಾಜು ಮಾದಿಗ ಎಂಬವರ ಪತ್ನಿ ಆಶಾ (35ವ,) ಎಂಬವರು ಸಂತ್ರಸ್ತೆಯಾಗಿದ್ದು. ಅವರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಾನು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದು ಆ.16ರ ರಾತ್ರಿ ಊಟಕ್ಕೆ ಕೂತ್ತಿದ್ದ ವೇಳೆ ಗಾಳಿಮುಖದ ಖಾದರ್ , ಮಹಮ್ನದ್, ಶಾಬೀರ್, ಶಾಪಿ, ಅಶ್ರಪ್ ಕೊಟ್ಯಾಡಿ ಸೇರಿದಂತೆ ಸುಮಾರು 20 ಮಂದಿಯ ತಂಡವೊಂದು ಅಕ್ರಮವಾಗಿ ನಮ್ಮ ಮನೆಗೆ ನುಗ್ಗಿ ನನ್ನ ಕೈ ಹಿಡಿದು ಎಳೆದಿದ್ದಾರೆ.
Related Articles
Advertisement
ನಾಯಿ ಕಚ್ಚಿದ ವಿಚಾರ:
ಆಶಾ ಅವರ ಮನೆಯ ಸಾಕು ನಾಯಿ ಬೀದಿಯಲ್ಲಿ ಓಡಾಡುತ್ತಿದ್ದವರಿಗೆ ಕಚ್ಚಿದ್ದು ಈ ಕುರಿತು ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಈ ಕುರಿತು ಪೊಲೀಸರು ಕೂಡ ಆಶಾ ಅವರಿಗೆ ಸಾಕು ನಾಯಿಯನ್ನು ಬೀದಿಗೆ ಬಿಡದಂತೆ ಸೂಚಿಸಿದರೆನ್ನಲಾಗಿದೆ. ಆದರೆ ಸಾಕು ನಾಯಿ ಮತ್ತೆ ಬೀದಿಯಲ್ಲಿ ಓಡಾಡುವ ಜನರಿಗೆ ತೊಂದರೆ ಕೊಡುತ್ತಿದೆ ಎಂಬ ಆರೋಪ ವ್ಯಕ್ತವಾಗಿತ್ತು. ಆದರೆ ನಮ್ಮ ಮನೆಯ ಸಾಕು ನಾಯಿಯನ್ನು ನಾವು ಕಟ್ಟಿ ಹಾಕಿ ಸಾಕುತ್ತಿದ್ದೇವೆ. ಆದರೆ ಇತರ ಬೀದಿ ನಾಯಿಗಳನ್ನು ನೋಡಿ ನಮ್ಮ ನಾಯಿ ಎಂದು ತಪ್ಪು ತಿಳುವಳಿಕೆಯಿಂದ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆಂದು ಆಶಾ ಅವರು ತಿಳಿಸಿದ್ದಾರೆ.