Advertisement

ರಸ್ತೆಯಲ್ಲಿ ಓಡಿದ ಕಾಡುಕೋಣ ಢಿಕ್ಕಿಯಾಗಿ ಪೊಲೀಸ್‌ ಅಧಿಕಾರಿಯಿದ್ದ ಕಾರಿಗೆ ಹಾನಿ

12:18 AM Jun 16, 2024 | Team Udayavani |

ಕಾಸರಗೋಡು: ರಸ್ತೆಗೆ ಅಡ್ಡವಾಗಿ ಓಡಿದ ಕಾಡುಕೋಣ ಢಿಕ್ಕಿ ಹೊಡೆದು ಆದೂರು ಪೊಲೀಸ್‌ ಠಾಣೆಯ ಎಎಸ್‌ಐ ರಾಜನ್‌ ಚಲಾಯಿಸುತ್ತಿದ್ದ ಕಾರು ಹಾನಿಗೀಡಾಗಿದೆ.

Advertisement

ಶುಕ್ರವಾರ ಮುಂಜಾನೆ3 ಗಂಟೆಗೆ ಇರಿಯಣ್ಣಿ-ಬೋವಿಕ್ಕಾನ ರಸ್ತೆಯಲ್ಲಿ ಚಿಪ್ಲಿಕ್ಕಯದಲ್ಲಿ ಕಾಡುಕೋಣ ಢಿಕ್ಕಿ ಹೊಡೆದು ಕಾರು ಹಾನಿಗೀಡಾಯಿತು. ಬೆಂಗಳೂರಿನಲ್ಲಿ ಕಲಿಯುತ್ತಿರುವ ಪುತ್ರಿಯನ್ನು ಕರೆದುಕೊಂಡು ಬರಲು ರಾಜನ್‌ ಕಾರಿನಲ್ಲಿ ಬೋವಿಕ್ಕಾನಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next