Advertisement

ಬಿಸಿಲ ಬೇಗೆಗೆ ಬಗೆ ಬಗೆಯ ಪಾನಕ

07:19 PM May 14, 2019 | mahesh |

ಬೇಸಿಗೆಯ ಈ ಕಾಲದಲ್ಲಿ, ಧಗೆಯಿಂದಾಗಿ ಬಾಯಾರಿಕೆ ಹೆಚ್ಚಾಗುತ್ತದೆ. ಎಷ್ಟು ನೀರು ಕುಡಿದರೂ ಸಾಲದು ಅನ್ನೋ ಪರಿಸ್ಥಿತಿ. ನೀರು ಕುಡಿಯದಿದ್ದರೆ, ಆರೋಗ್ಯ ಹದಗೆಡುತ್ತದೆ. ಇಂಥ ಸಮಯದಲ್ಲಿ ರುಚಿರುಚಿಯಾದ ಪಾನಕ, ಜ್ಯೂಸ್‌ಗಳ ಮೊರೆ ಹೋದರೆ ಬಾಯಿಗೆ ರುಚಿ, ದೇಹಕ್ಕೆ ತಂಪು! ಮಿಗಿಲಾಗಿ ಅತ್ಯುತ್ತಮ ಆರೋಗ್ಯವನ್ನೂ ಹೊಂದಬಹುದು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಇಷ್ಟಪಡುವ ಕೆಲವು ಪಾನೀಯಗಳು, ಅವನ್ನು ತಯಾರಿಸುವ ವಿಧಾನದ ಪರಿಚಯ ಇಲ್ಲಿದೆ.

Advertisement

1) ಕೋಕಂ (ಪುನರ್ಪುಳಿ) ಪಾನಕ
ಬೇಕಾಗುವ ಸಾಮಗ್ರಿ: ಪುನರ್ಪುಳಿ- 1 ಕಪ್‌, ಸಕ್ಕರೆ- 2 ಕಪ್‌, ಶುಂಠಿ- 3 ಇಂಚು.

ಮಾಡುವ ವಿಧಾನ: ಪುನರ್ಪುಳಿ ಹಣ್ಣನ್ನು (ಒಣಗಿಸಿದ ಹಣ್ಣೂ ಆಗುತ್ತದೆ) ತೊಳೆದು, ಸ್ವಲ್ಪ ನೀರು ಹಾಕಿ ಕುದಿಸಿ. ನಂತರ ಅದಕ್ಕೆ, ಶುಂಠಿ ರಸ ಹಾಗೂ ಸಕ್ಕರೆ ಸೇರಿಸಿ ಮತ್ತೆ ಕುದಿಸಿ. ಈ ಪೇಯವನ್ನು ಫ್ರಿಡ್ಜ್ನಲ್ಲಿ ಶೇಖರಿಸಿಟ್ಟು, ಬೇಕಾದಾಗ ನೀರು ಬೆರೆಸಿ ಕುಡಿಯಬಹುದು.
ಕೋಕಂ ಪಾನಕ ಕುಡಿಯುವುದರಿಂದ ಪಿತ್ತ ಶಮನವಾಗುತ್ತದೆ.

2) ಬೆಲ್ಲದ ಪಾನಕ
ಬೇಕಾಗುವ ಸಾಮಗ್ರಿ: ಉಂಡೆ ಬೆಲ್ಲ- 1, ಹಸಿ ಶುಂಠಿ- 3 ಇಂಚು, ಕರಿಮೆಣಸು- 10, ನೀರು- 5 ಕಪ್‌, ಲಿಂಬೆ ಹಣ್ಣು- 1.

ಮಾಡುವ ವಿಧಾನ: ಪುಡಿ ಮಾಡಿದ ಬೆಲ್ಲ, ಕುಟ್ಟಿದ ಕರಿಮೆಣಸು ಮತ್ತು ಶುಂಠಿಯನ್ನು ನೀರಿನಲ್ಲಿ ಹಾಕಿ ಕುದಿಸಿ. ನೀರು ತಣ್ಣಗಾದ ಮೇಲೆ ಅದಕ್ಕೆ ಲಿಂಬೆ ಹಣ್ಣಿನ ರಸ ಹಾಕಿ ಕುಡಿಯಿರಿ.
ಬೆಲ್ಲದ ಪಾನಕದಿಂದ ದೇಹದ ಉಷ್ಣ ಕಡಿಮೆ ಆಗುತ್ತದೆ.

Advertisement

3) ಜಲ್‌ಜೀರಾ
ಬೇಕಾಗುವ ಸಾಮಗ್ರಿ: 1 ಕಪ್‌ ಪುದೀನಾ ಸೊಪ್ಪು, 1 ಕಪ್‌ ಕೊತ್ತಂಬರಿ ಸೊಪ್ಪು, 1 ಇಂಚು ಶುಂಠಿ, 2 ಹಸಿಮೆಣಸು, ಸೈಂಧವ ಲವಣ- 1 ಚಮಚ,
ಹುಣಸೆ ಹಣ್ಣು ಸ್ವಲ್ಪ, ಹುರಿದು ಪುಡಿ ಮಾಡಿದ ಜೀರಿಗೆ 1 ಚಮಚ.

ಮಾಡುವ ವಿಧಾನ: ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ರುಬ್ಬಿ, ಸೋಸಿಕೊಳ್ಳಿ. ಬೇಕಾದಷ್ಟು ನೀರು ಹಾಕಿ ಅದಕ್ಕೆ ಅರ್ಧ ಲಿಂಬೆಹಣ್ಣಿನ ರಸ ಹಾಕಿ ಮಿಶ್ರಣ ಮಾಡಿ.
ಈ ಪಾನೀಯ ಜೀರ್ಣ ಕ್ರಿಯೆಗೆ ಒಳ್ಳೆಯದು.

5) ಸೋರೆಕಾಯಿ ಜ್ಯೂಸ್‌
ಬೇಕಾಗುವ ಸಾಮಗ್ರಿ: ಸೋರೆ ಕಾಯಿ- 6 ಹೋಳು, ಸೌತೆಕಾಯಿ- 6 ಹೋಳು, 4 ಎಸಳು ಪುದೀನಾ ಸೊಪ್ಪು, ಕರಿಮೆಣಸು ಪುಡಿ ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ: ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿ. ನಂತರ ಅದನ್ನು ಸೋಸಿ ತಣ್ಣಗೆ ಕುಡಿಯಿರಿ.
ಈ ಪಾನೀಯ ದೇಹದ ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ.

ಸಹನಾ ಭಟ್‌, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next