Advertisement

ರೈತರ ಸಮಸ್ಯೆ ಪರಿಹರಿಸಲು ವಾರಕ್ಕೊಂದು ಸಭೆ  

06:24 PM Apr 29, 2021 | Team Udayavani |

ಬೆಂಗಳೂರು : ರೈತರ ಸಮಸ್ಯೆ ಪರಿಹರಿಸಲು ವಾರಕ್ಕೊಂದು ಸಭೆ ನಡೆಸುವಂತೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಜಿಲ್ಲಾ ಹಾಗೂ  ತಾಲ್ಲೂಕು ಮಟ್ಟದಲ್ಲಿ ವಾರದಲ್ಲಿ ಕನಿಷ್ಠ ಒಂದು ದಿನ ಸಭೆ ನಡೆಸುವಂತೆ ಕೃಷಿ ಇಲಾಖೆ ನಿರ್ದೇಶಕ ಶ್ರೀನಿವಾಸ್ ಸೂಚಿಸಿ ಆದೇಶಿಸಿದ್ದಾರೆ.

Advertisement

ಕೋವಿಡ್ -19ರ ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹದಿನಾಲ್ಕು ದಿನಗಳ ಕಾಲ ಲಾಕ್ ಡೌನ್ ಹೇರಿದ್ದು, ಈ ಸಂದರ್ಭದಲ್ಲಿ ರಾಜ್ಯದ ರೈತರ ಸಮಸ್ಯೆಗಳಿಗೆ ಸ್ಪಂದಿಸಲು  ಅಗ್ರಿವಾರ್ ರೂಮ್ ಅನ್ನು ಸೇತುವಂತೆ ಕಾರ್ಯನಿರ್ವಹಿಸಲು ಆರಂಭಿಸಲಾಗಿದೆ. ಸರ್ಕಾರದ ಲಾಕ್ಡೌನ್  ಮಾರ್ಗಸೂಚಿಯಲ್ಲಿ ಕೃಷಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ( outside Containment Zone ) ವಿನಾಯಿತಿ ನೀಡಲಾಗಿದೆ . ಕೃಷಿ ಹಾಗೂ ಕೃಷಿ ಸಂಬಂಧಿತ ಕ್ಷೇತ್ರಗಳ ಚಟುವಟಿಕೆಗಳು , ಸಂಬಂಧಿತ ಮಳಿಗೆಗಳು ಮತ್ತು ಗೋದಾಮುಗಳು ಸೇರಿದಂತೆ ಬಾಡಿಗೆ ಆದರಿತ ಸೇವಾ ಕೇಂದ್ರಗಳು , ಯಂತ್ರೋಪಕರಣಗಳಿಗೆ ವಿನಾಯಿತಿ ನೀಡಲಾಗಿದೆ . ಕೃಷಿ ಸಂಬಂಧಿತ ಚಟುವಟಿಕೆಗಳು , ಮೀನುಗಾರಿಕೆ , ಕುಕ್ಕುಟ , ಜಾನುವಾರು ಹಾಗೂ ಹೈನುಗಾರಿಕೆ ಇತ್ಯಾದಿಗಳಿಗೆ ವಿನಾಯಿತಿ ನೀಡಲಾಗಿದೆ .

ಕೃಷಿ ಹಾಗೂ ಕೃಷಿ ಸಂಬಂಧಿತ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ , ಜಿಲ್ಲೆಗಳಲ್ಲಿ ರೈತರು ಈ ಸಂಕಷ್ಟದ ಸಮಯದಲ್ಲಿ ಎದುರಿಸಬಹುದಾದ ಗೊಂದಲ  ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಲಹೆ  ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರುಗಳು ಹಾಗೂ ತಾಲ್ಲೂಕು ಮಟ್ಟದಲ್ಲಿ ವಾರದಲ್ಲಿ ಒಂದು ದಿನ ಸಭೆ ಆಯೋಜಿಸಿ , ರೈತರು ಕೋವಿಡ್ -19 ನಿಂದ ಕೃಷಿ ಚಟುವಟಿಕೆಗಳ ಮೇಲೆ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಕೇಳಬಹುದಾದ ಪ್ರಶ್ನೆಗಳಿಗೆ ಸೂಕ್ತ ಸಲಹೆ, ಪರಿಹಾರ ಮಾರ್ಗದರ್ಶನ ನೀಡಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಯಾವುದಾದರು ಪ್ರಶ್ನೆಗಳಿಗೆ ಮಾಹಿತಿ ನೀಡಲು ಸಾಧ್ಯವಾಗದಿದ್ದಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿಗಳು,ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಸೂಪರಿಟೆಂಡೆಂಟ್ ಆಫ್ ಪೊಲೀಸ್‌ರವರ ಗಮನಕ್ಕೆ ತಂದು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.ಅಲ್ಲದೇ  ಸಭೆ ಆಯೋಜಿಸುವಾಗ ಅಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೋವಿಡ್ -19 ರ ಪ್ರಸರಣವನ್ನು ನಿಯಂತ್ರಿಸಲು ನಿಗಧಿಪಡಿಸಿರುವ ಮಾರ್ಗಸೂಚಿಯನ್ವಯ ಸಾಮಾಜಿಕ ಅಂತರ ಹಾಗೂ ಇನ್ನಿತರೆ ಕೋವಿಡ್ -19 ರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಕೃಷಿ ನಿರ್ದೇಶಕರು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next