Advertisement

2ನೇ ವರ್ಷದತ್ತ ತ್ಯಾಜ್ಯ ಮುಕ್ತ ಮಾದರಿ ಗ್ರಾಮ ವಂಡ್ಸೆ

09:44 PM Jul 12, 2019 | Team Udayavani |

ವಿಶೇಷ ವರದಿ- ಕೊಲ್ಲೂರು: ಸ್ವಚ್ಛ ಗ್ರಾಮ ಪರಿಕಲ್ಪನೆಯಲ್ಲಿ ವಂಡ್ಸೆ ಗ್ರಾ.ಪಂ. ಸ್ಥಾಪಿಸಿರುವ ಘನ, ದ್ರವ ತ್ಯಾಜ್ಯ ವಿಲೇವಾರಿ ಘಟಕ ಯಶಸ್ವಿ 2ನೇ ವರ್ಷಕ್ಕೆ ಪಾದಾರ್ಪಣೆಗೈದಿದ್ದು, ರಾಜ್ಯಕ್ಕೆ ಮಾದರಿಯಾಗಿದೆ.

Advertisement

ತಿಂಗಳಿಗೆ 20 ಸಾ. ರೂ. ಲಾಭ
ಮುಂದಿನ ಸೆಪ್ಟಂಬರ್‌ಗೆ 2 ವರ್ಷ ತುಂಬುತ್ತಿರುವ ಘಟಕದಲ್ಲಿ ಹಸಿ ಹಾಗೂ ಒಣ ಕಸಗಳನ್ನು ಪ್ರತ್ಯೇಕವಾಗಿ ವಿಲೇವಾರಿಗೊಳಿಸಿ, ಅವುಗಳನ್ನು ನಾನಾ ರೀತಿಯಲ್ಲಿ ಬಳಸಲಾಗುತ್ತಿದೆ. ಇದರಿಂದ 20 ಸಾವಿರ ರೂ. ಲಾಭವೂ ಸಾಧ್ಯವಾಗಿದೆ.

ಮಾದರಿ ಕಾರ್ಯ
ಎಸ್‌.ಎಲ್‌.ಆರ್‌.ಎಂ. ಸಂಘ ವಂಡ್ಸೆ ಹೆಸರಿನಲ್ಲಿ ಸಂಘ ನೋಂದಣಿಯಾಗಿ 1 ವರ್ಷ ಪೂರೈಸಿದೆ. ಇದರಲ್ಲಿ ಮೇಲ್ವಿಚಾರಕಿ, ವಾಹನ ಚಾಲಕ, ಕಾರ್ಮಿಕರು ಸಹಿತ 8 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಮಾಸಿಕ ಸಂಬಳ ಸಹಿತ ರೂ. 95000 ಸಾವಿರ ಖರ್ಚು ವೆಚ್ಚವಿದೆ. ಇವೆಲ್ಲವನ್ನೂ ನಿಭಾಯಿಸಿ 2019ರ ಜನವರಿಯಿಂದ ಈವರೆಗೆ ಪ್ರತೀ ತಿಂಗಳು ರೂ. 15000 ದಿಂದ 20000 ದಷ್ಟು ಲಾಭ ಪಡೆದಿದೆ. ಲಾಭಾಂಶವನ್ನು ಸಂಘದ ಬ್ಯಾಂಕ್‌ ಖಾತೆಯಲ್ಲಿ ಠೇವಣಿ ಇಡಲಾಗಿದೆ.

ವ್ಯವಸ್ಥಿತ ಪ್ರಯತ್ನ
ಹರವರಿ, ಕಳಿ, ಅಡಿಕೆಕೊಡ್ಲು, ನೂಜಾಡಿ, ಅಬ್ಬಿ, ಮಾವಿನಕಟ್ಟೆ, ಉದ್ದಿನಬೆಟ್ಟು, ಶಾರ್ಕೆ ಸಹಿತ ಸಮೀಪದ ಚಿತ್ತೂರು ಗ್ರಾಮದ ಮಾರಣಕಟ್ಟೆ, ಕಂಚಿನಕೊಡ್ಲು, ಹಾರ್ಮಣ್ಣು ಗ್ರಾಮಗಳನ್ನು ಆಯ್ಕೆ ಮಾಡಿ ಕಸ ಸಂಗ್ರಹಿಸಲಾಗುತ್ತಿದೆ.

ಪ್ರತಿ ಮನೆಗಳಿಂದ ರೂ. 30 ರೂ., ಸಣ್ಣ ಅಂಗಡಿಗಳಿಗೆ 150 ರೂ., ದೊಡ್ಡ ಅಂಗಡಿಗಳಿಗೆ 200 ರೂ. ರಿಂದ 300 ರೂ. ವರೆಗೆ ತ್ಯಾಜ್ಯ ಸಂಗ್ರಹದ ಶುಲ್ಕ ವಿಧಿಸಲಾಗುತ್ತದೆ. ರೆಸ್ಟೋರೆಂಟ್‌ ಹಾಗೂ ಬಾರ್‌ಗಳಿಗೆ 1 ಸಾವಿರ ರೂ., ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ 500 ರೂ. ವಿಧಿಸಲಾಗುತ್ತದೆ.

Advertisement

ವಂಡ್ಸೆ ಗ್ರಾಮದ 700 ಮನೆ, 150 ಅಂಗಡಿಗಳಿಗೆ 850 ಹಸಿರು ಹಾಗೂ ಕೆಂಪು ಬಕೆಟ್‌ ವ್ಯವಸ್ಥೆಗೊಳಿಸಲಾಗಿದೆ. ಚಿತ್ತೂರು ಗ್ರಾ.ಪಂ ವ್ಯಾಪ್ತಿಯಲ್ಲಿ 262 ಪ್ರತ್ಯೇಕ ಬಕೆಟ್‌ ನೀಡಲಾಗಿದೆ.

ವಿವಿಧ ರಾಜ್ಯಗಳ ತಂಡ ವೀಕ್ಷಣೆ
ಉತ್ತರ ಭಾರತ ಸಹಿತ ದಕ್ಷಿಣ ಭಾರತದ ನಾನಾ ಕಡೆಗಳಿಂದ ವಂಡ್ಸೆ ಎಸ್‌.ಎಲ್‌.ಆರ್‌.ಎಂ. ವೀಕ್ಷಣೆಗೆ ತಂಡಗಳು ಬಂದಿವೆ. ಇಲ್ಲಿನ ಕೆಲಸ ಅವರ ಮುಕ್ತ ಶ್ಲಾಘನೆಗೆ ಪಾತ್ರವಾಗಿದೆ.

ಪ್ಲಸ್‌ ಪಾಯಿಂಟ್‌
ಗ್ರಾಮಸ್ಥರ ಸಂಪೂರ್ಣ ಸಹಕಾರದೊಡನೆ ಸ್ವಚ್ಛ ಗ್ರಾ.ಪಂ ಎಂಬ ಹೆಗ್ಗಳಿಕೆಗೆ ವಂಡ್ಸೆ ಸಾಕ್ಷಿಯಾಗಿದೆ. ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಸಂಘವು ವ್ಯವಸ್ಥಿತವಾಗಿ ನಿರ್ವಹಿಸುತ್ತಿರುವುದು ಪ್ಲಸ್‌ ಪಾಯಿಂಟ್‌.
-ಉದಯ ಕುಮಾರ್‌ ಶೆಟ್ಟಿ,
ಅಧ್ಯಕ್ಷರು, ವಂಡ್ಸೆ ಗ್ರಾ.ಪಂ

ಕ್ರಮಬದ್ಧ ಕಾರ್ಯ
ಕಳೆದ ಜನವರಿಯಿಂದ ಲಾಭದಿಂದ ಸಾಗುತ್ತಿರುವ ಎಸ್‌.ಎಲ್‌.ಆರ್‌.ಎಂ. ಘಟಕವು ಕ್ರಮಬದ್ಧವಾಗಿ ಕಾರ್ಯವನ್ನು ನಡೆಸಿಕೊಂಡು ಹೋಗುತ್ತಿದೆ.
-ವಿಜಯಲಕ್ಷ್ಮೀ, ಮೇಲ್ವಿಚಾರಕಿ,
ಎಸ್‌.ಎಲ್‌.ಆರ್‌.ಎಂ. ಘಟಕ ವಂಡ್ಸೆ

Advertisement

Udayavani is now on Telegram. Click here to join our channel and stay updated with the latest news.

Next