Advertisement

ಬಾಲಕನಿಗೆ ಊಟ ಮಾಡಿಸಿದ ಯೋಧ

04:58 AM May 15, 2019 | mahesh |

ಶ್ರೀನಗರ: ಎರಡು ತಿಂಗಳುಗಳ ಹಿಂದೆ ನಡೆದಿದ್ದ ಪುಲ್ವಾಮಾ ದಾಳಿಯಲ್ಲಿ ಬಚಾವಾಗಿದ್ದ ಇಕ್ಬಾಲ್ ಸಿಂಗ್‌ ಎಂಬ ಯೋಧ, ಜಮ್ಮು ಕಾಶ್ಮೀರದಲ್ಲಿ ಮಂಗಳವಾರ, ಒಬ್ಬ ಅಸಹಾಯಕ ಪುಟಾಣಿಗೆ ಊಟ ಮಾಡಿಸುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಶ್ರೀನಗರದ ನವಕಡಲ್ ಎಂಬಲ್ಲಿ ಕರ್ತವ್ಯ ನಿರತರಾಗಿರುವ ಸಿಂಗ್‌, ಮಧ್ಯಾಹ್ನದ ಊಟಕ್ಕೆ ಸಿದ್ಧವಾಗುತ್ತಿದ್ದಾಗ, ಹಸಿವಿನಿಂದ ಬಳಲುತ್ತಿದ್ದ ಪುಟಾಣಿಯೊಬ್ಬನನ್ನು ನೋಡಿ, ಆತನಿಗೆ ಊಟ ನೀಡಲು ಮುಂದಾದರು. ಹತ್ತಿರ ಹೋದಾಗ, ಆ ಬಾಲಕ ಪಾರ್ಶ್ವವಾಯುವಿಗೆ ತುತ್ತಾಗಿದ್ದು, ಕೈಯ್ನಾರೆ ಊಟ ಮಾಡಲಾರ ಎಂಬುದು ತಿಳಿಯಿತು. ತತ್‌ಕ್ಷಣವೇ ತಮ್ಮಲ್ಲಿದ್ದ ಊಟವನ್ನು ಬಾಲಕನಿಗೆ ತಿನ್ನಿಸಿದರು. ಈ ವಿಡಿಯೋವನ್ನು ಸಿಆರ್‌ಪಿಎಫ್ ಟ್ವೀಟ್ ಮಾಡಿದ್ದು, ಯೋಧ ಇಕ್ಬಾಲ್ ಸಿಂಗ್‌ ಅವರ ಈ ಮಾನವೀಯ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next