Advertisement

ದಣಿವರಿಯದ ಗಣಿತ ಗುರು ಬಿರಾದಾರಗೆ ಆತ್ಮೀಯ ಸತ್ಕಾರ

11:18 AM Dec 23, 2021 | Team Udayavani |

ಕಲಬುರಗಿ: ಅಫಜಲಪುರ ತಾಲೂಕಿನ ಭೈರಾಮಡಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತಿ ನಂತರವೂ ಕಳೆದ 18 ವರ್ಷಗಳಿಂದ ಗಣಿತ ವಿಷಯ ಬೋಧಿಸುತ್ತಿರುವ ಯಶ್ವಂತರಾವ ಬಿರಾದಾರ ಅವರನ್ನು ಭೈರಾಮಡಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ವಿಎಸ್‌ಎಸ್‌ಎನ್‌) ವತಿಯಿಂದ ಸನ್ಮಾನಿಸಲಾಯಿತು.

Advertisement

ಸಂಘದ ಅಧ್ಯಕ್ಷ ಹಣಮಂತರಾವ ಹಿರೇಗೌಡ ಭೈರಾಮಡಗಿ ಸನ್ಮಾನಿಸಿ, ನಿವೃತ್ತಿಯಾಗಿ 18 ವರ್ಷವಾದರೂ ಆಸಕ್ತಿಯಿಂದ ಮಕ್ಕಳಿಗೆ ಗಣಿತ ವಿಷಯ ಬೋಧಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದರು.

ಶಾಲೆಯಿಂದ ಒಮ್ಮೆಲೆ ಆರು ಶಿಕ್ಷಕರು ವರ್ಗಾವಣೆ ಆಗಿದ್ದಾರೆ. ಅಲ್ಲದೇ ಈ ಶಾಲೆಯಲ್ಲಿ ಗಣಿತ ಶಿಕ್ಷಕರಿಲ್ಲ. ಇದನ್ನು ಅರಿತು ಬೋಧನೆ ಮಾಡುತ್ತಿದ್ದೇನೆ ಎಂದು ಸತ್ಕಾರ ಸ್ವೀಕರಿಸಿದ ನಿವೃತ್ತ ಶಿಕ್ಷಕ ಯಶ್ವಂತರಾವ ಬಿರಾದಾರ ಹೇಳಿದರು.

ಶಾಲೆಯ ಮುಖ್ಯ ಶಿಕ್ಷಕ ಎಚ್‌.ಎಸ್‌. ಹಿರೇಮಠ, ಸಂಘದ ಕಾರ್ಯನಿರ್ವಹಣಾಧಿಕಾರಿ ಶರಣಗೌಡ ಪಾಟೀಲ, ಸಂಘದ ಉಪಾಧ್ಯಕ್ಷ ಸಿದ್ಧಪ್ಪ ಮಾಪಣ್ಣ, ನಿರ್ದೆಶಕರಾದ ದತ್ತಪ್ಪ ಜೋಗದ, ಲಕ್ಷ್ಮೀಪುತ್ರ ಜವಳಿ, ಈರಣ್ಣ ಬಿರಾದಾರ, ವಿಜಯಕುಮಾರ ಗುತ್ತೇದಾರ, ಮಲ್ಲಿನಾಥ ನಾಗೋಜಿ, ತುಕಾರಾಮ ಯಳಸಂಗಿ, ಸಂಗಮನಾಥ ಬಿರಾದಾರ, ಸಹಾಯಕ ಕಾರ್ಯದರ್ಶಿ ಸಂಜೀವಕುಮಾರ ಬಿರಾದಾರ, ಶಿವುಗೌಡ ಪೊಲೀಸ್‌ ಪಾಟೀಲ, ವಿಶ್ವನಾಥ ಪಾಟೀಲ, ಕಲ್ಯಾಣಪ್ಪ ದಂಡೋತಿ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next