Advertisement

ಹುಟ್ಟುಹಬ್ಬಕ್ಕೊಂದು ಬೆಚ್ಚಗಿನ ಪ್ರೇಮಪತ್ರ…

03:45 AM May 09, 2017 | |

ಪ್ರೀತಿ ಅಂದ್ರೆ ಬರೀ ಮಾತು ಮಾತ್ರ ಅಲ್ಲ. ಮೌನ ಕೂಡ. ಅರ್ಥ ಮಾಡ್ಕೊಳ್ಳೋದು. ನಗೋದು ಮಾತ್ರ ಅಲ್ಲ, ಅಳುವಿನ ಹಿಂದಿರೋ ಕಾರಣಾನ ತಿಳಿದು ಸಮಾಧಾನ ಮಾಡೋದು. ಬರೀ ನಾವಿಬ್ರೇ ಅನ್ನೋ ಕಾಲ್ಪನಿಕ ಜಗತ್ತಲ್ಲಿ ಮುಳುಗೋದಲ್ಲ, ನಮ್ಮ ಮೇಲೆ ನಂಬಿಕೆ ಪ್ರೀತಿ ಇಟ್ಟ ಎಲ್ಲರನ್ನೂ ವಿಶ್ವಾಸಕ್ಕೆ ತಗೊಂಡು ಅವರಿಂದ ಆಶೀರ್ವಾದ ಪಡೆಯೋದು ಅಂತ ಅಂದೊRಂಡವನು ನಾನು

Advertisement

ಶೋನಾ, ಆ ಹೆಸರು ನಿಮ್ಮ ಸೋನು ಅನ್ನೋ ಹೆಸರಿಗೆ ಮ್ಯಾಚ್‌ ಆಗುತ್ತೆ ಅಂತ ಮಾತ್ರ ಇಟ್ಟೆ ಅಂದೊRಂಡ್ರಾ? ಯಾವುದೋ ಕಾದಂಬರೀಲಿ ಶೋನಾ ಅನ್ನೋದು ಪ್ರಿಯತಮೆಗೆ ಇಡೋ ಹೆಸರು ಅಂತ ಕೇಳಿದ್ದೆ. ಅಲ್ಲಿಯವರೆಗೂ ಬಾಯಿಮಾತಿಗೆ ಇಟ್ಟ ಹೆಸರು ಹೃದಯದಿಂದ ಹೊಮ್ಮೊದಕ್ಕೆ ಶುರುವಾದುÌ. ಇನ್ಮುಂದೆ ಕೊನೆಯುಸಿರು ಇರೋವರೆಗೂ ನೀವು ನಂಗೆ ಶೋನಾನೇ. ನೀವೇನೋ ಮನಸಲ್ಲಿದ್ದಿದ್ದನ್ನ ಸೀದಾ ಹೇಳಿºಟ್ರಿ. ಆದ್ರೆ ನಾನು ಮಾತ್ರ ಇದೇ ಆಲೋಚನೇಲಿ ಅದೆಷ್ಟೋ ರಾತ್ರಿಗಳನ್ನ ಕಳೆದೆ. ಶೋನಾ, ಪ್ರೀತಿ ಅಂದ್ರೆ ಬರೀ ಮಾತು ಮಾತ್ರ ಅಲ್ಲ. ಮೌನ ಕೂಡ. ಅರ್ಥ ಮಾಡ್ಕೊಳ್ಳೋದು. ನಗೋದು ಮಾತ್ರ ಅಲ್ಲ, ಅಳುವಿನ ಹಿಂದಿರೋ ಕಾರಣಾನ ತಿಳಿದು ಸಮಾಧಾನ ಮಾಡೋದು. ಬರೀ ನಾವಿಬ್ರೇ ಅನ್ನೋ ಕಾಲ್ಪನಿಕ ಜಗತ್ತಲ್ಲಿ ಮುಳುಗೋದಲ್ಲ, ನಮ್ಮ ಮೇಲೆ ನಂಬಿಕೆ ಪ್ರೀತಿ ಇಟ್ಟ ಎಲ್ಲರನ್ನೂ ವಿಶ್ವಾಸಕ್ಕೆ ತಗೊಂಡು ಅವರಿಂದ ಆಶೀರ್ವಾದ ಪಡೆಯೋದು ಅಂತ ಅಂದೊRಂಡವನು ನಾನು. ಅಂದ್ರೆ ನನ್ನ ಅರ್ಥದಲ್ಲಿ ಪ್ರೀತೀಲಿ ವಿಶ್ವಾಸ, ಕಾಳಜಿ, ಸುಖ- ದುಃಖ, ನೋವು- ನಲಿವು, ಹೊಂದಾಣಿಕೆ, ಮಮತೆ, ಕಾಳಜಿ ಜೊತೆಗೆ ಜವಾಬ್ದಾರಿ ಅನ್ನೋ ಪದ ಇದೆ. ಆ ಜವಾಬ್ದಾರೀನ ಒಪ್ಕೊಂಡ ಮೇಲೆ ನಿಭಾಯಿಸೋದು ತುಂಬಾನೇ ಮುಖ್ಯ ಅಲ್ವಾ? ಅದ್ಕೆà ನಿಮ್ಮನ್ನ ಪ್ರೀತಿಸ್ತೀನಿ ಅನ್ನೋದಕ್ಕೆ ಸ್ವಲ್ಪ ಯೋಚೆ° ಮಾಡ್ಬೇಕಾಯ್ತು. ಕಾಯ್ಸಿದ್ದಕ್ಕೆ ಸಾರಿ. ಆಯ್ತಾ…

ನೀವು ನನ್ನನ್ನು ನಂಬೊRಂಡು ನನ್‌ ಜೊತೆ ಬಂದಿದ್ದೀರಲ್ವಾ? ಕೈ ಮೇಲೆ ಕೈಯಿಟ್ಟು ಭಾಷೆ ಮಾಡಿ ಹೇಳ್ತಿದ್ದೇನೆ: ನಿಮ್ಮನ್ನ ನಡು ದಾರೀಲಿ ಬಿಟ್ಟು ಹೋಗಲ್ಲ. ನಿಮ್ಗೆ ಯಾವ್‌ ರೀತೀನೂ ನೋವಾಗದ ಹಾಗೆ ನೋಡ್ಕೊàತೀನಿ. ಹಾnಂ, ನಿಮೂY ರಾತ್ರಿ ಕಿಟಕಿ ಪಕ್ಕ ಕೂತು ಹೊರಗೆ ನೋಡ್ತಾ ಪ್ರಯಾಣ ಮಾಡೋದು ಅಂದ್ರೆ ಇಷ್ಟ ಅಲ್ವಾ, ನಂಗೂ ತುಂಬ ಇಷ್ಟ. ಕಿಟಕಿ ಪಕ್ಕದ ಸೀಟು ನಿಮ್ಗೆà ಬಿಡಿ. ಅಕಸ್ಮಾತ್‌ ಕಿಟಕಿ ಪಕ್ಕದ ಸೀಟು ಬಿಡಲಿಲ್ಲ ಅಂದ್ರೆ ಸುಮ್ನೆ ಬಿಡ್ತೀರಾ ಮತ್ತೆ ನನ್ನ?

ಇವೆಲ್ಲದರ ಜೊತೆ ಒಂದಿಷ್ಟು ನಿವೇದನೆಗಳಿವೆ. ನನ್ನನ್ನ ಹೀರೋ ಅಂತ ಕರೀಬೇಡಿ. ಅಚ್ಚು ಅಂದ್ರೆ ಸಾಕು, ನಾನೇನೇ ಕೊಡ್ಲಿ ಅದನ್ನ ಗಿಲ್ಟ್ ಇಲೆ ತಗೋಬೇಕು. ಯಾಕಂದ್ರೆ ಅದ್ರಲ್ಲಿ ಬೆಲೇನೇ ಕಟ್ಟಕ್ಕಾಗದೇ ಇರೋವಷ್ಟು ಪ್ರೀತಿ ಇದೆ. ತುಂಬಾ ಚಂದ ಕಾಣಿಸ್ಬಾರ್ದು. (ನಂಗೆ ಭಯ!) ಯಾವುದೇ ಸಹಾಯ ಬೇಕಾದ್ರೂ ಮೊದು ನನ್ನ ನೆನೆಯಬೇಕು. ವಿರಹಗೀತೆಗಳನ್ನೆಲ್ಲ ಕೇಳ್ಳೋದು ನಿಲ್ಲಿಸ್ಬೇಕು. ಅಮ್ಮನ ಜೊತೆ ಸಣ್ಣ ಸಣ್ಣ ವಿಷ್ಯಕ್ಕೂ ಜಗಳ ಆಡಾºರ್ದು. ನಿಮ್ಮ ಸಣ್‌ ಮಗು ಥರದ ತರೆಲ ಮುಂದುವರೀಬೇಕು. ನನ್ನನ್ನು ಹೀಗೇ ಕಾಡಿಸ್ತಾ ಇರ್ಬೇಕು. ಆ ನಿಮ್ಮ ಡ್ರಾಯಿಂಗ್‌ ಹವ್ಯಾಸ ಮುಂದುವರಿಸ್ಬೇಕು…

    ಶೋನಾ, ಇದೇ ಜನ್ಮದಲ್ಲಿ ನಾವಿಬ್ರೂ ಒಂದಾಗ್ಬೇಕು. ಒಂದಾಗ್ತಿàವಿ. ಮತ್ತೆ ಹೇಳ್ತೀನಿ… ನಾನಿದ್ದೀನಿ!

Advertisement

ಇತ್ತೀಚಿಗಷ್ಟೆ ಜನ್ಮದಿನ ಆಚರಿಸಿಕೊಂಡೆಯಲ್ಲ. ನನ್ನ ಉಡುಗೊರೆ ಸಿಕ್ಕಿರುತ್ತದೆ. ಅದು ನನ್ನ ನೆನಪಿಗೆ ನಿಮ್ಗೆ. ನಿಮ್ಮ ಅಪ್ಪ ಅಮ್ಮಂಗೂ… 

ತರಲೆ ಮಾಡುತ್ತಲೇ ಬೆವರಿಳಿಯುವಷ್ಟು ಕಾಡಿಬಿಟ್ಟ ಮುದ್ದು ಮುಖದ ಮಗುಮನದ ಕನಸುಕಂಗಳ ಅಭಿಸಾರಿಕೆಗೆ ಹುಟ್ಟುಹಬ್ಬದ ಶುಭಾಷಯಗಳು… 
ಲವ್‌ ಯೂ…
ಇಂತಿ ಪ್ರೀತಿಯ ಅಚ್ಚು…

ಅರ್ಜುನ್‌ ಶೆಣೈ

Advertisement

Udayavani is now on Telegram. Click here to join our channel and stay updated with the latest news.

Next