Advertisement

Breeding Centre: ಇನ್ನೂ ಪ್ರಾರಂಭವಾಗದ ರಣಹದ್ದುಗಳ ಬ್ರೀಡಿಂಗ್‌ ಸೆಂಟರ್‌

01:54 PM Sep 04, 2023 | Team Udayavani |

ರಾಮನಗರ: ಕ್ಷೀಣಿಸುತ್ತಿರುವ ರಣಹದ್ದುಗಳ ಸಂತತಿಯನ್ನು ಹೆಚ್ಚಿಸುವ ಉದ್ದೇಶದಿಂದ 2019ರಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿದ ರಣಹದ್ದುಗಳ ಬ್ರೀಡಿಂಗ್‌ ಬ್ರಿಂಟರ್‌ ಕೇವಲ ಘೋಷ ಣೆಯಾಗೇ ಉಳಿದಿದೆ. ಬನ್ನೇರು ಘಟ್ಟ, ರಾಮ ದೇವರ ಬೆಟ್ಟ ಎಂದು ಬ್ರೀಡಿಂಗ್‌ ಸೆಂಟರ್‌ ಸ್ಥಾಪನೆಗೆ ಮೀನ ಮೇಷ ಎಣಿಸುತ್ತಿರುವ ಅರಣ್ಯ ಇಲಾ ಖೆಯ ಕಾರ್ಯವೈಖರಿ ಪಕ್ಷಿಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ.

Advertisement

ಏನಿದು ಬ್ರೀಡಿಂಗ್‌ ಸೆಂಟರ್‌: ಕ್ಷೀಣಿ ಸುತ್ತಿರುವ ಅಪರೂಪದ ಉದ್ದಕೊಕ್ಕಿನ ರಣಹದ್ದು ಸಂತತಿಯನ್ನು ರಕ್ಷಣೆ ಮಾಡು ವುದು ಹಾಗೂ ಮತ್ತೆ ರಣ ಹದ್ದುಗಳ ಸಂಖ್ಯೆ ಹೆಚ್ಚಾಗುವಂತೆ ಅವುಗಳ ತಳಿ ಯನ್ನು ವರ್ಧನೆ ಮಾಡುವ ಉದ್ದೇಶದಿಂದ ಕರ್ನಾಟಕ ಅರಣ್ಯ ಇಲಾಖೆ ಮತ್ತು ಬಾಂಬೆ ನ್ಯಾಚು ರಲ್‌ ಹಿಸ್ಟರಿ ಸೊಸೈಟಿ ಸಹಯೋಗದೊಂದಿಗೆ ರಣ ಹದ್ದುಗಳ ಬ್ರೀಡಿಂಗ್‌ ಸೆಂಟರ್‌ ಪ್ರಾರಂಭಿಸಲು ಯಡಿಯೂರಪ್ಪ ನೇತೃತ್ವದ ಸರ್ಕಾರ 2019ರ ಬಜೆಟ್‌ನಲ್ಲಿ 2 ಕೋಟಿ ರೂ. ಅನುದಾನ ಘೋಷಣೆ ಮಾಡಿತ್ತು. ಇನ್ನು ರಾಮದೇವರ ಬೆಟ್ಟಕ್ಕೆ ಸಮೀಪದಲ್ಲಿರುವ ಚಿಕ್ಕಮಣ್ಣುಗುಡ್ಡೆ ಪ್ರದೇಶದಲ್ಲಿ ಬ್ರೀಡಿಂಗ್‌ ಸೆಂಟರ್‌ ಪ್ರಾರಂಭಿಸಲು ಅರಣ್ಯ ಇಲಾಖೆ ಉದ್ದೇಶಿಸಿತ್ತು. ಬ್ರೀಡಿಂಗ್‌ ಸೆಂಟರ್‌ನಲ್ಲಿ ಹರಿಯಾಣದಿಂದ ಉದ್ದಕೊಕ್ಕಿನ ರಣಹದ್ದುಗಳನ್ನು ತಂದು, ಅವುಗಳ ಮೂಲಕ ಮರಿ ಮಾಡಿಸಿ, ಒಂದು ಹಂತದವರೆಗೆ ರಣಹದ್ದುಗಳನ್ನು ಬ್ರೀಡಿಂಗ್‌ ಕೇಂದ್ರ ದಲ್ಲಿ ಪಾಲನೆ ಮಾಡಿ, ಅವುಗಳು ಸ್ವಸಾಮರ್ಥ್ಯದಿಂದ ಪರಿಸರದಲ್ಲಿ ಜೀವನ ರೂಪಿಸಿಕೊಳ್ಳುತ್ತವೆ ಎನ್ನುವ ಹಂತದ ವರೆಗೆ ಬೆಳವಣಿಗೆ ಹೊಂದಿದಾಗ ಅವು ಗಳನ್ನು ರಾಮದೇವರ ರಣಹದ್ದುಧಾಮಕ್ಕೆ ಬಿಡುವ ಮೂಲಕ ರಣಹದ್ದುಗಳ ಸಂತತಿ ಹೆಚ್ಚಳ ಗೊಳಿಸು ವುದುಬ್ರೀಡಿಂಗ್‌ ಸೆಂಟರ್‌ನ ಉದ್ದೇಶವಾಗಿತ್ತು. ಪ್ರಸ್ತುತ ದೇಶದಲ್ಲಿ 8 ಕಡೆ ಈ ರೀತಿಯ ಬ್ರೀಡಿಂಗ್‌ ಸೆಂಟರ್‌ಗಳು ಕಾರ್ಯ ನಿರ್ವಹಿಸುತ್ತಿವೆ.

ಅಲ್ಲಿ, ಇಲ್ಲಿ, ಎಲ್ಲಿ..?: ಬ್ರೀಡಿಂಗ್‌ ಸೆಂಟರ್‌ ಅನ್ನು ರಾಮನಗರದಲ್ಲೇ ಆರಂಭಿಸಬೇಕು. ರಣಹದ್ದುಗಳ ಧಾಮಕ್ಕೆ ಹೊಂದಿಕೊಂಡಂತೆ ಬ್ರೀಡಿಂಗ್‌ ಸೆಂಟರ್‌ ಇದ್ದರೆ ಸೂಕ್ತ ಎಂಬುದು ಪರಿಸರ ಪ್ರೇಮಿಗಳು, ರಣಹದ್ದುಗಳ ರಕ್ಷಣೆಗಾಗಿ ಹೋರಾಟ ಮಾಡುತ್ತಿರುವ ಸಂಘಟನೆಗಳ ಆಗ್ರಹ. ಆರಂಭ ದಲ್ಲಿ ರಣಹದ್ದು ಧಾಮಕ್ಕೆ ಹೊಂದಿಕೊಂಡಂತೆ ಇರುವ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ ಬ್ರೀಡಿಂಗ್‌ ಸೆಂಟರ್‌ ಮಾಡಲು ಅರಣ್ಯ ಇಲಾಖೆ ಉದ್ದೇಶಿಸಿತ್ತು. ಆದರೆ ಇಲ್ಲಿ ಬ್ರೀಡಿಂಗ್‌ ಸೆಂಟರ್‌ ಮಾಡಿದರೆ, ತಜ್ಞವೈದ್ಯರು, ಪಶುವೈದ್ಯರು, ವನ್ಯಜೀವಿ ಲ್ಯಾಬ್‌ ಸೇರಿದಂತೆ ಹಲವು ಸೌಕರ್ಯ ಗಳ ಕೊರತೆಯಾಗುತ್ತದೆ ಎಂಬ ಕಾರಣಕ್ಕೆ ಬನ್ನೇರು ಘಟ್ಟ ಅರಣ್ಯ ಪ್ರದೇಶದಲ್ಲಿ ರಣಹದ್ದುಗಳ ಲ್ಯಾಬ್‌ ನಿರ್ಮಾಣ ಮಾಡಲು ಅರಣ್ಯ ಇಲಾಖೆ ಮುಂದಾಯಿತು. ರಾಮನಗರವಾ, ಬನ್ನೇರುಘಟ್ಟವ ಎಂಬ ಜಿಜ್ಞಾಸೆಯಲ್ಲೇ ಹಲವು ವರ್ಷಗಳು ಕಳೆದಿವೆ ಯಾದರೂ ಇನ್ನೂ ರಣಹದ್ದುಗಳ ಬ್ರೀಡಿಂಗ್‌ ಸೆಂಟರ್‌ ಆರಂಭವಾಗೇ ಇಲ್ಲ. ಇನ್ನು ಬನ್ನೇರುಘಟ್ಟದಲ್ಲಿ ಬ್ರೀಡಿಂಗ್‌ ಸೆಂಟರ್‌ ತೆರೆದು ಅಲ್ಲಿ ರಣಹದ್ದುಗಳ ಮರಿ ಮಾಡಿಸಿ, ಬೆಳೆಸುವ ಜೊತೆ ರಾಮನಗರದಲ್ಲಿ ರಿಲೀಸಿಂಗ್‌ ಸೆಂಟರ್‌ ತೆರೆಯಲು ಉದ್ದೇಶಿಸಲಾಗಿತ್ತು. ಆದರೆ ಇದುವರೆಗೆ ಬ್ರೀಡಿಂಗ್‌ಸೆಂಟರ್‌ ಅನ್ನು ಪ್ರಾರಂಭಿಸಿಲ್ಲ, ರಿಲೀಸಿಂಗ್‌ ಸೆಂಟರ್‌ ಅನ್ನು ಪ್ರಾರಂಭಿಸಿಲ್ಲ.

ಅರಣ್ಯ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಬನ್ನೇರುಘಟ್ಟದಲ್ಲಿ ರಣಹದ್ದುಗಳ ಬ್ರಿàಡಿಂಗ್‌ ಸೆಂಟರ್‌ಗೆ ಕಟ್ಟಡ ವೊಂದನ್ನು ಕಟ್ಟಿರುವುದನ್ನು ಹೊರತು ಪಡಿಸಿದರೆ ಇನ್ಯಾವುದೇ ಕೆಲಸ ನಡೆದಿಲ್ಲ. ಬ್ರೀಡಿಂಗ್‌ ಸೆಂಟರ್‌ ಆರಂಭಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಯಾವುದೇ ಉತ್ಸಾಹವಿಲ್ಲ ಎಂಬುದು ಪರಿಸರ ಪ್ರೇಮಿಗಳ ಆಕ್ಷೇಪವಾಗಿದೆ. ಶೀಘ್ರ ಪ್ರಾರಂಭವಾಗಲಿ: ವರ್ಷದಿಂದ ವರ್ಷಕ್ಕೆ ರಣಹದ್ದುಗಳ ಸಂತತಿ ಕ್ಷೀಣಿಸುತ್ತಾ ಬರುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಎರಡು ಬಾರಿ ರಣಹದ್ದುಗಳು ಮರಿಮಾಡಿರುವುದು ಸಂತಸದ ಸಂಗತಿ ಎನಿಸಿದರೂ. ಕಳೆದ 12 ವರ್ಷಗಳ ರಣಹದ್ದುಗಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡಾಗ ಶೇ.99 ರಷ್ಟು ರಣಹದ್ದುಗಳು ರಾಮ ದೇವರ ಬೆಟ್ಟದಲ್ಲಿ ನಶಿಸಿರುವುದು ಮನದಟ್ಟಾಗುತ್ತದೆ. ಅಪರೂಪದ ಜಾತಿಯ ರಣಹದ್ದು ಎಂದು ಗುರುತಿಸಿ ರುವ ಉದ್ದಕೊಕ್ಕಿನ ಜಾತಿಯ ರಣಹದ್ದುಗಳ ಸಂತತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮುಂದಾಗಬೇಕಿದೆ. ಇದಕ್ಕಾಗಿ ರಣಹದ್ದುಗಳ ಸಂತತಿಯನ್ನು ಹೆಚ್ಚಿಸಲು ತಕ್ಷಣ ಬ್ರೀಡಿಂಗ್‌ ಸೆಂಟರ್‌ ಅನ್ನು ಆರಂಭಿಸಬೇಕಿದೆ.

ರಣಹದ್ದುಗಳ ಸಂತತಿ ಹೆಚ್ಚಳ ಮಾಡುವ ಉದ್ದೇಶದಿಂದ ಶೀಘ್ರ ವಾಗಿ ಬ್ರೀಡಿಂಗ್‌ ಸೆಂಟರ್‌ ಪ್ರಾರಂಭಿಸ ಲಾಗುವುದು. ಈ ಬಗ್ಗೆ ಅರಣ್ಯ ಇಲಾಖೆ ಬ್ರೀಡಿಂಗ್‌ ಸೆಂಟರ್‌ ಆರಂಭಿಸಲು ಬದ್ಧವಾಗಿದೆ. -ಲಿಂಗರಾಜು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಇಲಾಖೆ

Advertisement

ರಾಮನಗರದ ರಾಮದೇವರ ಬೆಟ್ಟ ಉದ್ದಕೊಕ್ಕಿನ ರಣಹದ್ದುಗಳ ವಾಸ ಸ್ಥಾನ. ಇಲ್ಲೇ ರಣಹದ್ದು ಬ್ರೀಡಿಂಗ್‌ ಸೆಂಟರ್‌ ಆರಂಭಿಸಿದರೆ ಸೂಕ್ತ. ಅರಣ್ಯ ಇಲಾಖೆ ಬ್ರೀಡಿಂಗ್‌ ಸೆಂಟರ್‌ ಆರಂಭಿ ಸಲು ಉದಾಸೀನ ಮಾಡುತ್ತಿರುವುದು ಸರಿಯಲ್ಲ. ತಕ್ಷಣ ಬ್ರೀಡಿಂಗ್‌ ಸೆಂಟರ್‌ ಆರಂಭಿಸಬೇಕು. -ಶಶಿಕುಮಾರ್‌, ಕಾರ್ಯದರ್ಶಿ ಕರ್ನಾಟಕ ರಣಹದ್ದು ಸಂರಕ್ಷಣಾ ಸಂಸ್ಥೆ

– ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next