Advertisement
ವೇದವ್ಯಾಸರ ಜನ್ಮದಿನವನ್ನು ಗುರುಪೂರ್ಣಿಮೆ ಎಂದು ಆಚರಿಸಲಾಗುತ್ತಿದೆ. ಭಾರತೀಯ ಸಂಸ್ಕೃತಿಯಲ್ಲಿ ಗುರುಪರಂಪರೆಗೆ ವಿಶಿಷ್ಟ ಸ್ಥಾನ ಇದೆ. ಒಂದು ಕಾಲದಲ್ಲಿ ಗುರುಕುಲದಲ್ಲಿದ್ದು ವಿದ್ಯೆಅರ್ಜಿಸುತ್ತಿದ್ದರು. ಹಾಗಾಗಿ ಶಿಷ್ಯರಿಗೆ ಗುರುಗಳು ತಂದೆ-ತಾಯಿಗಿಂತಲೂ ಮಿಗಿಲಾಗಿದ್ದರು. ಬದುಕಿನ ಕಾಲು ಭಾಗದಷ್ಟು ಗುರುಕುಲದಲ್ಲಿ ವಿನಿಯೋಗಿಸಿ ಗುರುಸೇವೆಯನ್ನು ಉತ್ತಮ ರೀತಿಯಲ್ಲಿ ಕೈಗೊಂಡ ಶಿಷ್ಯನಿಗೆ ಉತ್ತಮ ಶಿಷ್ಯನಾಗಿಯೂ, ಉತ್ತಮ ಪ್ರಜೆ ಯಾಗಿಯೂ ಸಮಾಜದಲ್ಲಿ ಮುಂದೆ ಬರಲು ಸಾಧ್ಯ ಎಂಬ ನಿಲುವು ನಮ್ಮ ಸಂಸ್ಕೃತಿಯದ್ದು.
Related Articles
Advertisement
ಹಿರಿಯ ಅಧ್ಯಾಪಕ ಗೋವಿಂದ ಭಟ್ ಶುಭಾಶಂಸನೆಗೈದು ಮಾತನಾಡಿ, ಅಧ್ಯಾಪಕರ ದಿನ ಎಂಬುದು ಭಾರತೀಯ ಸನಾತನ ಪರಂಪರೆಯಲ್ಲಿ ಗುರು ಪೂರ್ಣಿಮೆಯಾಗಿದ್ದು, ಇದನ್ನು ಎಲ್ಲ ಶಾಲೆಗಳಲ್ಲಿಯೂ ಆಚರಿಸುವಂತಾಗಬೇಕು. ಸಂಸ್ಕೃತ ಅಧ್ಯಾಪಕ ಶಿವನಾರಾಯಣ ಭಟ್ ಅವರ ಮಾರ್ಗ ದರ್ಶನದಲ್ಲಿ ಶಾಲೆಯಲ್ಲಿ ತಿಂಗಳು ಪೂರ್ತಿ ನಡೆಸಲಿರುವ ಶ್ರೀ ರಾಮರûಾ ಸ್ತೋತ್ರ ಪಠಣಕ್ಕಿರುವ ರಾಮರûಾ ಸ್ತೋತ್ರ ಪುಸ್ತಕವನ್ನು ಈ ಸಂದರ್ಭದಲ್ಲಿ ವಿತರಿಸಿ ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು.
ಶಾರದಾ ಸುರಭಿ ಸ್ವಾಗತಿಸಿ, ಸಂಸ್ಕೃತ ಸಂಘದ ಜತೆ ಕಾರ್ಯದರ್ಶಿ ಅಕ್ಷಯ ಗಣಪತಿ ವಂದಿಸಿದರು. ಸಂಸ್ಕೃತ ಸಂಘದ ಕಾರ್ಯದರ್ಶಿ ವಿಶ್ವಜಿತ್ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಎಲ್ಲ ಅಧ್ಯಾಪಕರು ಕಾರ್ಯಕ್ರಮಕ್ಕೆ ಸಹಕರಿಸಿದರು.