Advertisement

ನವಜಾತ ಶಿಶುವಿಗೆ ಸಿಗಲಿದೆ ವಿಶಿಷ್ಟ  ಗುರುತಿನ ಚೀಟಿ

11:25 PM Aug 01, 2021 | Team Udayavani |

ಸರಕಾರದ ಯಾವುದೇ ಸೌಲಭ್ಯ ಪಡೆಯಬೇಕಾದರೆ ಜನರು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ನೀಡುವ ಆಧಾರ್‌ ಕಾರ್ಡ್‌ ಹೊಂದಿರುವುದು ಕಡ್ಡಾಯ. ಜನನ ಪ್ರಮಾಣ ಪತ್ರವಿಲ್ಲದೆ ಯುಐಡಿಎಐಯಿಂದ ಆಧಾರ್‌ ಕಾರ್ಡ್‌ ಪಡೆಯುವುದು ಅಸಾಧ್ಯವಾಗಿತ್ತು. ಜನನ ಪ್ರಮಾಣ ಪತ್ರಕ್ಕಾಗಿ ಕನಿಷ್ಠ 1 ತಿಂಗಳು ಕಾಯಲೇಬೇಕಾಗುತ್ತದೆ. ಇದರಿಂದ ಶಿಶುಗಳಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳು ಸಕಾಲದಲ್ಲಿ ಸಿಗುವುದು ಕಷ್ಟವಾಗಿತ್ತು. ಆದರೆ ಇನ್ನು ಈ ಸಮಸ್ಯೆ ಎದುರಾಗದು. ಯಾಕೆಂದರೆ ನವಜಾತ ಶಿಶುಗಳಿಗೆ 12 ಅಂಕೆಗಳ ವಿಶಿಷ್ಟ ಗುರುತಿನ ಚೀಟಿಯನ್ನು ಜನನ ಪ್ರಮಾಣ ಪತ್ರ ಇಲ್ಲದೇ ಇದ್ದರೂ ಪಡೆಯಬಹುದಾಗಿದೆ.

Advertisement

ಬಾಲ್ ಆಧಾರ್ ಕಾರ್ಡ್ : ಯುಐಡಿಎಐ ಪರಿಚಯಿಸಿರುವ ಬಾಲ್‌ ಆಧಾರ್‌ ಕಾರ್ಡ್‌ ಅನ್ನು ನವಜಾತ ಶಿಶುಗಳಿಗೆ ನೀಡಲಾಗುತ್ತದೆ. ಇದನ್ನು ಪಡೆಯುವುದು ಸುಲಭ. ಶಿಶುವಿನ ಹೆತ್ತವರು ಇದಕ್ಕಾಗಿ ಆಸ್ಪತ್ರೆಯಿಂದ ಡಿಸಾcರ್ಜ್‌ ಆದ ಪ್ರಮಾಣ ಪತ್ರ ಮತ್ತು ಅವರ ಆಧಾರ್‌ ಕಾರ್ಡ್‌ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ. ಆದರೆ ಮಗುವಿಗೆ 5 ವರ್ಷ ತುಂಬಿದಾಗ ಬಯೋಮೆಟ್ರಿಕ್‌  ನೀಡಿ ಹೊಸದಾಗಿ ಆಧಾರ್‌ ಕಾರ್ಡ್‌ ಪಡೆಯಬೇಕು. ಒಂದು ವೇಳೆ ಬಯೋಮೆಟ್ರಿಕ್‌ ಅಪ್‌ಡೇಟ್‌ ಮಾಡದೇ ಇದ್ದರೆ ಮಗುವಿನ ಹೆಸರಿನಲ್ಲಿರುವ ಬಾಲ್‌ ಆಧಾರ್‌ ಕಾರ್ಡ್‌ ನಿಷ್ಕ್ರಿಯವಾಗುವುದು. ಆಗ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಿ ಆಧಾರ್‌ ಕಾರ್ಡ್‌ ಪಡೆಯಬೇಕಾಗುತ್ತದೆ.

ಬಯೋಮೆಟ್ರಿಕ್ ಅಪ್ಡೇಟ್ ವಿಧಾನ :

  1. ಯುಐಡಿಎಐ ನೀಡಿರುವ ನೇರ ಲಿಂಕ್‌- appointments.uidai.gov.in/easearchaspx?AspxAutoDetectCookieSupport=1 ಗೆ ಲಾಗಿನ್‌ ಆಗಿ.

2.ಆಯ್ಕೆಗಳಲ್ಲಿ ಒಂದನ್ನು ಆರಿಸಿ- ರಾಜ್ಯ, ಅಂಚೆ (ಪಿನ್‌)ಕೋಡ್‌ ಬಳಸಿ ಸರ್ಚ್‌ ಬಾಕ್ಸ್‌  ಆಯ್ಕೆ ಮಾಡಿ.

3.ನೀಡಿರುವ ಆಯ್ಕೆಗಳಲ್ಲಿ ಒಂದನ್ನು ಭರ್ತಿ ಮಾಡಿ ಕೇಳಿರುವ ಮಾಹಿತಿಯನ್ನು ತುಂಬಿಸಿ ಬಳಿಕ ಲೊಕೇಟ್‌ ಸೆಂಟರ್‌ ಬಟನ್‌ ಕ್ಲಿಕ್‌ ಮಾಡಿದರೆ ಹತ್ತಿರದ ಆಧಾರ್‌ ಕೇಂದ್ರವನ್ನು ತೋರಿಸುತ್ತದೆ. ಅಲ್ಲಿ ಅಪಾಯಿಂಟ್‌ಮೆಂಟ್‌ ಪಡೆದು ದಿನಾಂಕ, ಸಮಯ ನಿಗದಿ ಪಡಿಸಿ ಮಗುವಿನೊಂದಿಗೆ ಆಧಾರ್‌ ಕೇಂದ್ರಕ್ಕೆ ಹೋಗಿ ಬಯೋಮೆಟ್ರಿಕ್‌ ಅಪ್‌ಡೇಟ್‌ ಮಾಡಿ ನಿಮ್ಮ ಮಕ್ಕಳ ಆಧಾರ್‌ ಕಾರ್ಡ್‌ ಅನ್ನು ಪಡೆಯಬಹುದು.

Advertisement

ಬಯೋ ಮೆಟ್ರಿಕ್ ಅಪ್ಡೇಟ್ ಹೇಗೆ?:

ಬಾಲ್‌ ಆಧಾರ್‌ ಕಾರ್ಡ್‌ 5 ವರ್ಷದೊಳಗಿನ ಮಕ್ಕಳಿಗಾಗಿ ಇರುವಂಥದ್ದು. ಮಗುವಿಗೆ ಐದು ವರ್ಷ ಮತ್ತು 15 ವರ್ಷ ತುಂಬಿದ ಬಳಿಕ ಬಯೋಮೆಟ್ರಿಕ್‌ ಅಪ್‌ಡೇಟ್‌ ಮಾಡುವುದು ಕಡ್ಡಾಯ. ಇದಕ್ಕಾಗಿ ಹತ್ತಿರದ ಆಧಾರ್‌ ಕಾರ್ಡ್‌ ಕೇಂದ್ರವನ್ನು ಸಂಪರ್ಕಿಸಬಹುದು. ಇದು ಸಂಪೂರ್ಣ ಉಚಿತವಾಗಿದೆ. ಮಗುವಿಗೆ 5 ಹಾಗೂ 15 ವರ್ಷ ತುಂಬಿದ ಅನಂತರ ಬಯೋಮೆಟ್ರಿಕ್‌ ಅಪ್‌ಡೇಟ್‌ಗಾಗಿ ಹೆತ್ತವರು ಮೊದಲೇ ಆನ್‌ಲೈನ್‌ನಲ್ಲಿ ಯುಐಡಿಎಐಯ ಲಿಂಕ್‌ ಕ್ಲಿಕ್‌ ಮಾಡಿ ಹತ್ತಿರದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು.

 

Advertisement

Udayavani is now on Telegram. Click here to join our channel and stay updated with the latest news.

Next