Advertisement
ನಾಪತ್ತೆಯಾದ ಗಿಣಿಯನ್ನು ಹುಡುಕಿಕೊಡಿ ಎಂದು ಈ ಕುಟುಂಬ ಮಂಗಳೂರು ನಗರದ ಹಲವು ಬೀದಿಗಳಲ್ಲಿ “ನಾಪತ್ತೆ’ ಪೋಸ್ಟರ್ ಅಂಟಿಸಿದೆ. ಗಿಣಿಯೊಂದಿಗೆ ಅತ್ಯಂತ ಆತ್ಮೀಯತೆ ಬೆಳೆಸಿಕೊಂಡಿದ್ದ ಮನೆಯ ಸದಸ್ಯರೊಬ್ಬರು ಅಕ್ಷರಶಃ ತಬ್ಬಲಿಯಂತೆ ದುಃಖೀಸುತ್ತಿದ್ದಾರೆ. ಗಿಣಿ ನಾಪತ್ತೆಯಾದ ಬಳಿಕ ಕೆಲಸ ಕಾರ್ಯಗಳಲ್ಲಿ ಉಲ್ಲಾಸ ಕಳೆದುಕೊಂಡು ಸರಿಯಾಗಿ ಅನ್ನಾಹಾರ ಗಳನ್ನೂ ಸೇವಿಸದೆ ಇದ್ದಾರೆ. ನಗುನಗುತ್ತ ಕಾಲ ಕಳೆಯುತ್ತಿದ್ದ ಸುಂದರ ಸಂಸಾರವೊಂದು ಸಾಕುತ್ತಿದ್ದ ಗಿಣಿ ಕಾಣೆಯಾದ ಮಾತ್ರಕ್ಕೆ ಇಷ್ಟೊಂದು ದುಃಖತಪ್ತವಾಗಿದೆ ಅಂದರೆ ಯಾರೂ ನಂಬರು; ಆದರೆ ಇದು ನಂಬಲೇಬೇಕಾದ ಮನುಷ್ಯ-ಪಕ್ಷಿ ವಾತ್ಸಲ್ಯದ ಮನಕಲಕುವ ಸುದ್ದಿ.
ಗಿಣಿಯನ್ನು ಕಳೆದುಕೊಂಡು ಚಿಂತಾಕ್ರಾಂತವಾಗಿರುವ ಕುಟುಂಬ ನಗರದ ಬಂದರು ಸಮೀಪದ ಅಝೀಝುದ್ದೀನ್ ರಸ್ತೆ ಯಲ್ಲಿದೆ. ಇಲ್ಲಿನ ಉದ್ಯಮಿ ಯೊಬ್ಬರ ಪುತ್ರ ಹಾಗೂ ಪಕ್ಷಿಗಳ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಆಲಿ ಅಕºರ್ ಮನೆಯಲ್ಲಿ “ಆಫ್ರಿಕನ್ ಗ್ರೇ ಪ್ಯಾರೆಟ್’ ಪ್ರಭೇದದ ಅಪೂರ್ವ ಗಿಣಿಯನ್ನು ಸಾಕುತ್ತಿದ್ದರು. ಮನೆಯ ಸದಸ್ಯನಂತೆ ಈ ಗಿಣಿ ಇತ್ತು. ಅದಕ್ಕೆ ಪಂಜರ ಇರಲಿಲ್ಲ, ಅದು ಸ್ವತ್ಛಂದ ವಾಗಿ ಮನೆಯ ಒಳಗಡೆ ಹಾರಾಡುತ್ತ ಇತ್ತು. ಮನೆ ಮಂದಿ ಯೊಂದಿಗೆ ತನ್ನದೇ ಭಾಷೆಯಲ್ಲಿ ಮಾತನಾಡುತ್ತಿತ್ತು. ಆಫ್ರಿಕನ್ ಗ್ರೇ ಪ್ಯಾರಟ್ ಗಿಳಿ ಪ್ರಭೇದದ ಈ ಹಕ್ಕಿಗೆ “ಟಿಂಟೂನ್’ ಎಂದು ಹೆಸರಿಟ್ಟಿತ್ತು ಈ ಕುಟುಂಬ. ಮಂಗಳೂರಿನಲ್ಲಿ ಇದು ಬಹು ಅಪರೂಪದ ಜಾತಿಯ ಗಿಣಿ. ಸಾವಿರಾರು ರೂ. ಮೌಲ್ಯದ್ದು. ವಾರದ ಹಿಂದೆ ಕಾಣೆ
ಪ್ರೀತಿಯಿಂದ ಸಾಕುತ್ತಿದ್ದ ಟಿಂಟೂನ್ ವಾರದ ಹಿಂದೆ ಮನೆಯಿಂದ ಕಾಣೆಯಾಗಿದೆ. ಈ ಬಗ್ಗೆ ಆಲಿ ಅಕºರ್ ಅವರು “ಉದಯವಾಣಿ’ ಜತೆಗೆ ಹಂಚಿಕೊಂಡಿದ್ದು ಹೀಗೆ: ನನ್ನ ಕಪಾಟು ನಾನೇ ತೆರೆಯಬೇಕು. ತಾಯಿ ಕೂಡ ನನ್ನ ಕಪಾಟು ಮುಟ್ಟುವ ಹಾಗಿಲ್ಲ. ಒಂದು ವೇಳೆ ನನ್ನ ಕಪಾಟನ್ನು ಬೇರೆಯವರು ಮುಟ್ಟಿದರೆ ಅವರನ್ನು ಗಿಣಿ ಕಚ್ಚುತ್ತಿತ್ತು. ರಾತ್ರಿ ನಾನು ಮಲಗಿದ ಮೇಲೆ ನನ್ನ ಕಾಲಿನ ಬಳಿಗೆ ಬಂದು ಅದರ ಕಾಲಿನಿಂದ ಒತ್ತುತ್ತಿತ್ತು, ಬಳಿಕ ಮುಖದ ಬಳಿ ಬಂದು ಅದರ ಭಾಷೆಯಲ್ಲಿ ಮಾತನಾಡುತ್ತಿತ್ತು. ಅದಕ್ಕೆ ಮಲಗುವುದಕ್ಕೆ ನನ್ನ ಮಂಚದ ಕೆಳಗಡೆಯೇ ವ್ಯವಸ್ಥೆ. ಬೆಳಗ್ಗೆ ನನ್ನನ್ನು ಅದೇ ಎಚ್ಚರಿಸುತ್ತಿತ್ತು.
Related Articles
ಮಾ. 28ರಂದು ಮಧ್ಯಾಹ್ನ 2.30ರಿಂದ ಗಿಣಿ ಕಾಣದಾಗಿದೆ. ಅದು ಎಲ್ಲಿ ಹೋಗಿದೆ ಎಂಬ ಬಗ್ಗೆ ಮಾಹಿತಿಯಿಲ್ಲ. ಹತ್ತಿರ ವೆಲ್ಲ ಹುಡುಕಾಡಿದರೂ ಸಿಕ್ಕಿಲ್ಲ. ಮನೆ ಯವ ರಂತಿದ್ದ ಗಿಣಿಯನ್ನು ಕಳೆದು ಕೊಂಡು ನಾವು ಚಿಂತಾಕ್ರಾಂತರಾಗಿದ್ದೇವೆ. ಏನು ಮಾಡು ವು ದೆಂದೇ ತೋಚುತ್ತಿಲ್ಲ. ರಾತ್ರಿ ನಿದ್ದೆಯೂ ಸರಿ ಯಾಗಿ ಬೀಳುತ್ತಿಲ್ಲ. ಉಂಡದ್ದು ಉಂಡಂತಾಗು ತ್ತಿಲ್ಲ. ಮನೆ ಯಲ್ಲಿ ಎಲ್ಲರಿಗೂ ಬೇಸರ. ಹೀಗಾಗಿ ನಗರದ ಕೆಲವೆಡೆ ಪೋಸ್ಟರ್ ಹಚ್ಚಿ ಗಿಣಿ ಸಿಕ್ಕರೆ ಮಾಹಿತಿ ನೀಡಿ ಎಂಬು ದಾಗಿ ಮನವಿ ಮಾಡ ಲಾಗಿದೆ ಎನ್ನುತ್ತಾರೆ ಆಲಿ ಅಕºರ್.
Advertisement
ಕರೆ ಬರುತ್ತಿದೆ… ಆದರೆ ಹಕ್ಕಿ ಸಿಗುತ್ತಿಲ್ಲ !“ಹಕ್ಕಿ ಹುಡುಕಿ ಕೊಡಿ’ ಎಂದು ಮಂಗಳೂರಿನ ಕೆಲವೆಡೆ ಪೋಸ್ಟರ್ ಹಾಕಿಸಿದ್ದೇವೆ. ಇದನ್ನು ನೋಡಿ ಕೆಲವರು ಕರೆ ಮಾಡುತ್ತಿದ್ದಾರೆ. ಇಂದು ಒಬ್ಬರು ಕರೆ ಮಾಡಿ, ಗಿಳಿಯೊಂದು ಸಿಕ್ಕಿದೆ ಅಂದರು. ತತ್‌ಕ್ಷಣವೇ ತುಂಬ ಖುಷಿಯಾಯಿತು. ವಿಚಾರಿಸಿದಾಗ “ಅದು ನಮ್ಮ ಗಿಣಿ ಅಲ್ಲ’ ಎಂದು ತಿಳಿಯಿತು ಎಂದು ವಿವರಿಸುವಾಗ ಆಲಿ ಅಕºರ್ ಅವರಿಗೆ ದುಃಖ ಉಮ್ಮಳಿಸಿ ಬಂತು. ಇನ್ನು ಕೆಲವರು ನಂಬರ್ ನೋಡಿಕೊಂಡು ಕರೆ ಮಾಡಿ ಇಲ್ಲೊಂದು ಗಿಣಿಯಿದೆ, ನಿಮ್ಮದಾ, ಬನ್ನಿ ಅನ್ನುತ್ತಾರೆ. ಬಹುನಿರೀಕ್ಷೆಯಿಂದ ಅಲ್ಲಿಗೆ ಹೋದರೆ ಕರೆ ಮಾಡಿದ್ದು ತಮಾಷೆಗೆ ಎಂದು ತಿಳಿದು ಬೇಸರವಾಗುತ್ತದೆ ಎನ್ನುತ್ತಾರೆ ಅಲಿ ಅಕºರ್. ದಿನೇಶ್ ಇರಾ