ಮಂಡ್ಯ: ರೈತರಿಗೆ ನೀರು ನಿರ್ವಹಣೆ ಮಹತ್ವ ಅರಿತು ಸುಧಾರಿತ ಬೆಳೆ ಬೆಳೆಯಲು ಅನುಕೂಲವಾಗುವ ನಿಟ್ಟಿನಲ್ಲಿ ನೀರು ಬಳಕೆದಾರರಸಹಕಾರ ಸಂಘಗಳ ಸದಸ್ಯರಿಗೆ ಅಧ್ಯಯನ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರಿನಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಲಿಂಗಯ್ಯ ತಿಳಿಸಿದರು.
ನಗರದ ಕಾವೇರಿ ನೀರಾವರಿ ನಿಗಮದ ಆವರಣದಿಂದ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯನೀರು ಬಳಕೆದಾರರ ಸಹಕಾರ ಸಂಘಗಳ ಬಳಕೆದಾರರಿಗೆ ಒಂದು ದಿನದ ಅಧ್ಯಯನ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿ, ರೈತರು ಕೃಷಿಯಲ್ಲಿ ತಂತ್ರಜ್ಞಾನ ಮನೋಭಾವ ಬೆಳೆಸಿಕೊಳ್ಳಬೇಕಾಗಿದೆ. ವಿಜ್ಞಾನಿಗಳು ಅಥವಾ ಅಧ್ಯಯನಶೀಲರು ಬರಹದ ಮೂಲಕ ಎಷ್ಟೇ ಅರಿವು ಹೊಂದಿದ್ದರೂ, ರೈತರ ಅನು ಭವದ ಆಧಾರದ ಮೇಲೆ ಬಂದ ಬೆಳೆ ನಿರ್ವಹಣೆ, ಸಂಶೋಧನೆ ಹಾಗೂ ಇಳುವರಿಯ ಮಹತ್ವ ಅತಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳಲಿದೆ ಎಂದರು.
ಪ್ರಾತ್ಯಕ್ಷಿತೆ ಮೂಲಕ ಅಧ್ಯಯನ: ರೈತರು ತಾವು ಬೆಳೆದ ಬೆಳೆಗಳನ್ನು ವಿನಿಮಯ ಮಾಡಿಕೊಳ್ಳಲುಕಾಲಕ್ಕನುಗುಣವಾಗಿ ಪ್ರಾತ್ಯಕ್ಷಿತೆ ಮೂಲಕಅಧ್ಯಯನ ಮಾಡುವುದು ಅವಶ್ಯ. ಈ ನಿಟ್ಟಿನಲ್ಲಿಕಾಡಾ ಹಲವು ಕಾರ್ಯ ಸುಧಾರಣಾ ಯೋಜನೆಗಳನ್ನುಹಮ್ಮಿಕೊಳ್ಳಲಾಗಿದೆ ಎಂದರು.
ಕಾಲಕ್ಕನುಗುಣವಾಗಿ ಬೆಳೆ ಬೆಳಿಯಿರಿ: ಕೃಷ್ಣರಾಜಸಾಗರ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಸಹಕಾರ ಮಹಾ ಮಂಡಲದ ಉಪಾಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಕೃಷಿಕರು ಸ್ವಾವಲಂಬನೆಯಾಗಲು ಹಲವು ಕಾರ್ಯಯೋಜನೆಗಳನ್ನು ರೂಪಿಸಿದೆ. ಪ್ರಸ್ತುತ ದಿನ ಗಳಲ್ಲಿ ಋತುಮಾನ ಆಧಾರಿತ ಬೆಳೆಗಳ ಮೂಲಕ ಕೃಷಿಯಲ್ಲಿ ಕಾಲಕ್ಕನುಗುಣವಾಗಿ ಆದಾಯೋತ್ಪನ್ನ ಚಟುವಟಿಕೆಗಳನ್ನು ಬಹು ವಿಧ ಬೆಳೆಗಳ ಮೂಲಕ ಅಳವಡಿಸಿಕೊಂಡಿದ್ದಾರೆ ಎಂದರು.
ಕಾಯ್ದೆ ಸಮರ್ಪಕವಾಗಿ ಬಳಸಿಕೊಳ್ಳಿ: ನೀರು ಬಳಕೆದಾರರ ಸಹಕಾರ ಸಂಘಗಳು ನೀರಾವರಿ ಕಾಯ್ದೆಗೆ ಅನು ಗುಣವಾಗಿ ಕರ್ತವ್ಯ ನಿರ್ವಹಿಸು ತ್ತಿದ್ದು, ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜಯಲ್ಲಿನೀರು ನಿರ್ವಹಣೆಗೆ ರೈತರ ಸಹಭಾಗಿತ್ವ ಅಗತ್ಯ ಎಂದು ಮನಗಂಡು 2000ನೇ ಇಸವಿಯಲ್ಲಿ ರಾಜ್ಯ ಸರ್ಕಾರ ಇಡೀ ರಾಜ್ಯಕ್ಕೆ ಮಾದರಿ ಯಾದ ಕಾಯ್ದೆಯನ್ನು ರೂಪಿಸಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ ಎಂದರು.
ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ವಿಜಯ ಕುಮಾರ್,ಕಾಡಾದ ಸಹಾಯಕ ಕೃಷಿ ಅಧಿಕಾರಿ ಗಳಾದ ಜೆ. ಕುಮಾರ್, ಕೆ.ರಂಗಸ್ವಾಮಿ, ಕೃಷಿಕ ಲಯನ್ಸ್ ಸಂಸ್ಥೆಯ ಪೋಷಕ ಕೆ.ಟಿ.ಹನುಮಂತು ಹಾಜರಿದ್ದರು.