Advertisement

ರಾಮಾಯಣ ಸನ್ಮಾರ್ಗದ ಕಡೆಗೆ ನಡೆಸುವ ಗ್ರಂಥ

09:05 PM Oct 14, 2019 | Lakshmi GovindaRaju |

ದೇವನಹಳ್ಳಿ: ಮರ್ಹಷಿ ವಾಲ್ಮೀಕಿ ರಚಿಸಿರುವ ರಾಮಾಯಣ ಮಹಾಕಾವ್ಯ ಮಾನವ ಕುಲವನ್ನು ಸನ್ಮಾರ್ಗದ ಕಡೆಗೆ ನಡೆಸುವಂತಹ ಗ್ರಂಥವಾಗಿದ್ದು, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ರಾಮಾಯಣವನ್ನು ತಿಲಿದುಕೊಳ್ಳಬೇಕು ಎಂದು ಜಿಪಂ ಸದಸ್ಯ ಜಿ.ಲಕ್ಷ್ಮೀ ನಾರಾಯಣ್‌ ತಿಳಿಸಿದರು.

Advertisement

ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ನಲ್ಲೂರು ಗ್ರಾಪಂ ಆವರಣದಲ್ಲಿ ವಾಲ್ಮೀಕಿ ಜಯತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಮಾಯಣ ಗ್ರಂಥ ಆದರ್ಶ ನಾಯಕನಲ್ಲಿ ಇರಬೇಕಾದಂತಹ ಗುಣ, ಕುಟುಂಬದ ಆದರ್ಶಮಯವಾದ ಜೀವನ ತೋರಿಸುವಂತಹ ಕೃತಿಯಾಗಿದೆ. ಮರ್ಹಷಿ ವಾಲ್ಮೀಕಿಯವರು ಕೇವಲ ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ. ಅವರು ಇಡೀ ಮಾನವ ಕುಲಕ್ಕೆ ಒಂದು ವರದಾನವಾಗಿದ್ದಾರೆ. ಇಂತಹ ಮಹನೀಯವರನ್ನು ಪ್ರತಿಯೊಬ್ಬರು ಗೌರವಿಸಬೇಕೆಂದರು.

ಭೂತ, ವರ್ತಮಾನ, ಭವಿಷ್ಯತ್‌ಗಳಿಗೆ, ಅವರ ವಿಚಾರ ಧಾರೆಗಳು ಪಸರಿಸುವಷ್ಟರ ಮಟ್ಟಿಗೆ ಜಗತ್ತು ನಮ್ಮ ದೇಶದ ಸಂಸ್ಕೃತಿ ಕಡೆಗೆ ಚಕಿತರಾಗಿ ಕಾದು ನೋಡುವಂತಾಗುವುದಕ್ಕೆ ಮಹರ್ಷಿ ವಾಲ್ಮೀಕಿರವರು ಕಾರಣಕರ್ತರಾಗಿದ್ದು, ಪ್ರಸ್ತುತ ಅಳವಡಿಸಿಕೊಂಡಿರುವ ವೈಮಾನಿಕ ಆವಿಷ್ಕಾರಗಳಂತಹ ಎಷ್ಟೋ ವೈಜ್ಞಾನಿಕ ಸಂಶೋಧನೆಗಳ ರೂಪದ ಕಲ್ಪನೆಗಳು ಸಾಕಾರಗೊಂಡು ಜಗತ್ತಿಗೆ ಶೈಕ್ಷಣಿಕ ಪಾಠವನ್ನು ನಮ್ಮ ದಾರ್ಶನಿಕ ವಾಲ್ಮೀಕಿ ಮಹರ್ಷಿಗಳು ತಿಳಿಸಿದ್ದಾರೆ ಎಂದರು.

ತಾಪಂ ಸಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸೋಮತ್ತನಹಳ್ಳಿ ಮಂಜುನಾಥ್‌ ಮಾತನಾಡಿ, ಶ್ರೀರಾಮನ ಮಕ್ಕಳಾದ ಲವ ಕುಶರಿಗೆ ವಿದ್ಯಾದಾನ ಮಾಡಿದ ಕೀರ್ತಿ ವಾಲ್ಮೀಕಿ ಮರ್ಹಷಿ ಸಲ್ಲಿಸಬೇಕೆಂದು ಹೇಳಿದರು. ಗ್ರಾಪಂ ಅಧ್ಯಕ್ಷೆ ಸಾವಿತ್ರಮ್ಮ ಕೆಂಪೇಗೌಡ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು, ಜಾತ್ಯಾತೀತವಾಗಿರುವ ರಾಮಾಯಣ ಗ್ರಂಥವನ್ನು ಜಗತ್ತಿಗೆ ಉಣಬಡಿಸಿ ಮಾದರಿಯಾಗಿದ್ದಾರೆ. ರಾಮಾಯಣ ಓದುತ್ತಿದ್ದರೆ, ಎಲ್ಲಾ ಮಾನವಿಕ ಶಾಸ್ತ್ರಗಳ ಪರಿಚಯವಾಗುತ್ತದೆ ಎಂದರು.

ಜಗತ್ತಿಗೆ ದಾರಿ ದೀಪವಾದ ವಾಲ್ಮೀಕಿ ಮಹರ್ಷಿಗಳು ಕೇವಲ ಆಚರಣೆಗೆ ಸೀಮಿತವಾಗದೇ ಅವರು ಸಾರಿದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಅವರನ್ನು ನಾವು ಗೌರವಿಸುವಂತಾಗುತ್ತದೆ ಎಂದು ಹೇಳಿದರು. ಈ ವೇಳೆ ಗ್ರಾಪಂ ಉಪಾಧ್ಯಕ್ಷ ನವೀನ್‌, ಗ್ರಾಪಂ ಸದಸ್ಯರಾದ ಮಹಾಲಕ್ಷ್ಮೀ ಲಲೀತೇಶ್‌, ಮಂಝುಳ ಮಂಜುನಾಥ್‌, ಸೋಮಶೇಖರ್‌, ಆಂಜಿನಮ್ಮ ಕೃಷ್ಣಪ್ಪ, ಕೃಷ್ಣಮೂರ್ತಿ, ಮಮತ ಕೃಷ್ಣಪ್ಪ, ಮಹಾದೇವಿ ವೀರಭದ್ರಪ್ಪ, ಪಿಡಿಒ ಬಾಗ್ಯಮ್ಮ, ಕಾರ್ಯದರ್ಶಿ ರಮೇಶ್‌ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next