Advertisement

ಜಾರುವಂತಹ ಬಂಡೆ ಹತ್ತಿ ಇಳಿದು ಪ್ರವಾಸಿಗರ ಹುಚ್ಚಾಟ; ಪೊಲೀಸರಿಂದ ನಾಲ್ವರಿಗೆ ದಂಡ, ಎಚ್ಚರಿಕೆ

09:30 AM Jul 24, 2024 | Team Udayavani |

ಚಿಕ್ಕಮಗಳೂರು: ರೀಲ್ಸ್, ಫೋಟೋ, ಸೆಲ್ಫಿ ಕ್ರೇಜ್‌ ನಿಂದಾಗಿ ಪ್ರವಾಸಿಗರ ಹುಚ್ಚಾಟ ಇನ್ನೂ ಕೊನೆಯಾಗಿಲ್ಲ.

Advertisement

ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರು ಬಂಡೆ ಅಲ್ಲ, ಗುಡ್ಡವನ್ನೇ ಹತ್ತಿ ಹುಚ್ಚಾಟ ಪ್ರದರ್ಶಿಸುತ್ತಿದ್ದಾರೆ.

ಪ್ರವಾಸಿಗರು ಇಷ್ಟು ದಿನ ಬಂಡೆ-ಜಲಪಾತಗಳ ಬಳಿ ರೀಲ್ಸ್, ಫೋಟೋ ಎಂದು ಜೀವ ಭಯವಿಲ್ಲದೇ ವಿಡಿಯೋ ಮಾಡಿ ಇದೀಗ ಬಂಡೆ ಮೇಲಿನ ಗುಡ್ಡದ ಮೇಲೆ ಹತ್ತಿ ಹುಚ್ಚಾಟ ಮೆರೆಯುತ್ತಿದ್ದಾರೆ.

ಪ್ರವಾಸಕ್ಕೆಂದು ಬಂದವರು ಈ ಮಳೆಯಲ್ಲೂ ಪಿರಮಿಡ್ ಆಕಾರದ ಗುಡ್ಡ ಹತ್ತಿ ಮಳೆಯಿಂದಾಗಿ ಜಾರುವಂತಿರುವ ಬಂಡೆ ಮೇಲಿಂದ ಕೆಳಗಿಳಿಯುವಂತಹ ಸಾಹಸ ಪ್ರದರ್ಶಿಸುತ್ತಿದ್ದಾರೆ. ಇವರು ಸ್ವಲ್ಪ ಯಾಮಾರಿ ಜಾರಿ ಕೆಳಗಡೆ ಬಿದ್ದರೆ 206 ಮೂಳೆ 412 ಆಗಲೂಬಹುದು.

Advertisement

ಸ್ಥಳೀಯ ಪೊಲೀಸರು ಎಷ್ಟೇ ಎಚ್ಚರಿಕೆ ಕೊಟ್ಟರೂ ಪ್ರವಾಸಿಗರು ಕ್ಯಾರೇ ಎನ್ನದೇ ಇಂತಹ ಪ್ರದರ್ಶನ ಮಾಡುತ್ತಿರುತ್ತಾರೆ. ಇವ್ರಿಗೆ ಹುಚ್ಚು ಅಂತ ಹೇಳ್ದೆ ಇನ್ನೇನು ಅಂತ ಹೇಳಬೇಕು ಎಂಬುದು ಸ್ಥಳೀಯರ ಅಭಿಪ್ರಾಯ.

ಈ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ನಡೆದಿದ್ದು, ನಾಲ್ವರು ಪ್ರವಾಸಿಗರಿಗೆ ತಲಾ 500 ದಂಡ ವಿಧಿಸಿ ಎಚ್ಚರಿಕೆ ಕೊಟ್ಟು ವಾಪಸ್ ಕಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next