ಮಲ್ಪೆ: ಮಲ್ಪೆ ಬೀಚ್‌ನಲ್ಲಿ ಆಟವಾಡುತ್ತಿದ್ದ ವೇಳೆ ನೀರಿಗೆ ಬಿದ್ದು ಯುವಕನೋರ್ವ ಮೃತ ಪಟ್ಟ ಘಟನೆ ಮಂಗಳವಾರ(ಎ.5) ನಡೆದಿದೆ.
ಬೆಂಗಳೂರು ಮೂಲದ ಸಾಮ್ರಾಟ್ ಮೃತಪಟ್ಟವರು. ಅವರು ಬೆಂಗಳೂರಿನಲ್ಲಿ ಸಿಟಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಒಟ್ಟು 9 ಮಂದಿ ಮದುವೆಯ ಕಾರ್ಯಕ್ರಮಕ್ಕೆ ನಿನ್ನೆ ಉಡುಪಿಗೆ ಬಂದಿದ್ದರು. ಮಲ್ಪೆ ಬೀಚ್‌ನಲ್ಲಿ ಆಟವಾಡುತ್ತಿದ್ದ ವೇಳೆ ನೀರಿಗೆ ಬಿದ್ದರು. ಘಟನೆ ಬೀಚ್‌ನ ಉತ್ತರ ಭಾಗದಲ್ಲಿ ನಡೆದಿದ್ದು ಬೀಚ್‌ನ ಲೈಪ್‌ಗಾರ್ಡ್ ಮತ್ತು ಸ್ಥಳೀಯರು ತತ್‌ಕ್ಷಣ ಅವರನ್ನು ನೀರಿನಿಂದ ಮೇಲೆ ತಂದು ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋದರೂ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಶಿರಸಿಗೆ 644 ಸ್ಲಂ ಬೋರ್ಡ್ ಮನೆ ಮಂಜೂರು : ಕಾಗೇರಿ
ಮೃತ ದೇಹವನ್ನು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಇಡಲಾಗಿದ್ದು ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.