Advertisement

ಹೊಸ ಧ್ವನಿಯ ಸ್ಪರ್ಶ

04:24 AM May 29, 2020 | Lakshmi GovindaRaj |

ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಹಳೆಯ ಮಧುರ ಗೀತೆಗಳಿಗೆ ಸಾಕಷ್ಟು ಬೇಡಿಕೆ ಇದೆ. ಅಂತಹ ಅದ್ಭುತ ಹಾ ಡುಗಳ ಮೂಲಕ ಗಮನಸೆಳೆದ ಎವರ್‌ಗ್ರೀನ್‌ ನಟ,ನಟಿಯರ ನೆನಪಿಸುವ ಉದ್ದೇಶದಿಂದ ಹಾಗೂ ಇಂದಿನ ಪೀಳಿಗೆಗೂ  ಅಂದಿನ ಸ್ಟಾರ್‌ ನಟ,ನಟಿಯರನ್ನು ಪರಿಚಯಿಸುವ ದೃಷ್ಟಿಯಿಂದ ಕನ್ನಡ ಚಿತ್ರರಂಗದಲ್ಲಿ “ಗಂಧದ ಗುಡಿಯ ಗಂಧರ್ವರು ‘ ಶೀರ್ಷಿಕೆ ಮೂಲಕ ಅವರ ಚಿತ್ರಗಳ ಹಾಡುಗಳನ್ನು ಹಾಡಿ ರಂಜಿಸುವ ಪ್ರಯತ್ನ ಮಾಡಲಾಗಿದೆ.

Advertisement

ಹೌದು,  ಇತ್ತೀಚೆಗೆ “ಗಂಧದ ಗುಡಿಯ ಗಂಧರ್ವರು ‘ ಮೂಲಕ ಕನ್ನಡ ಚಿತ್ರರಂಗದ ದಂತಕತೆಗಳಾದ ಡಾ.ರಾಜಕುಮಾರ್‌, ವಿಷ್ಣುವರ್ಧನ್‌, ಅಂಬರೀಶ್‌, ಶಂಕರ್‌ನಾಗ್‌, ಟೈಗರ್‌ ಪ್ರಭಾಕರ್‌, ಲೋಕೇಶ್‌, ಅನಂತ್‌ನಾಗ್‌, ಬಿ.ಸರೋಜಾದೇವಿ, ಲೀಲಾವತಿ,ಭಾರತಿ, ಜಯಂತಿ ಇವರ ಹಳೆಯ ಚಿತ್ರಗಳ ಮಧುರ ಗೀತೆಗಳನ್ನು ಹಾಡಿ ಸ್ಪೀಡ್‌ ಎಂಬ ಯುಟ್ಯೂಬ್‌ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗಿದೆ. ಮೂರು ಎಪಿಸೋಡ್‌ಗಳಲ್ಲಿ ಪ್ರಸಾರಗೊಂಡ ಈ ಕಾರ್ಯಕ್ರಮದಲ್ಲಿ ಒಟ್ಟು ಈ  ಎಲ್ಲಾ ನಟ,ನಟಿಯರು ನಟಿಸಿರುವ ಚಿತ್ರಗಳ ಜನಪ್ರಿಯ ಹಾಡುಗಳನ್ನು ಹಾಡಲಾಗಿದೆ.

ಈ ಹಾಡುಗಳಿಗೆ ವಿಜಯರಾಘವೇಂದ್ರ, ರವಿಶಂಕರ್‌ಗೌಡ, ನವೀನ್‌ಕೃಷ್ಣ, ಅನಿರುದಟಛಿ, ಸುನೀಲ್‌ ಇತರರು ಹಾಡಿದ್ದಾರೆ. ಇನ್ನು, ಇವರೊಂದಿಗೆ  ಶಮಿತಾ ಮಲಾಡ್‌, ವಾಣಿಹರಿಕೃಷ್ಣ, ಕೀರ್ತಿ, ಸಂಗೀತಾ ಕೂಡ ಹಾಡಿದ್ದಾರೆ. ಅಂದಹಾಗೆ, ಮೂರು ಎಪಿಸೋಡ್‌ನ‌ಲ್ಲಿ ಮೂಡಿಬಂದ ಈ “ಗಂಧದ ಗುಡಿಯ ಗಂಧರ್ವರು ‘ ಹಾಡಿನ ಕಾರ್ಯಕ್ರಮ ಮೊದಲ ಎಪಿಸೋಡ್‌ 25 ನಿಮಿಷ  ಹೊಂದಿದ್ದರೆ, ಎರಡು ಹಾಗು ಮೂರು ಎಪಿಸೋಡ್‌ಗಳು 20 ನಿಮಿಷಗಳ ಕಾಲ ಪ್ರಸಾರಗೊಂಡಿವೆ.

ಇನ್ನು, ಈ ಹಾಡುಗಳು ಹಾಗು ಚಿತ್ರಗಳ ಕುರಿತು ನಟ ಸೃಜನ್‌ ಲೋಕೇಶ್‌ ನಿರೂಪಣೆ ಮಾಡಿದ್ದಾರೆ. ಈ ಕಾರ್ಯಕ್ರಮದ ನಿರ್ದೇಶನವನ್ನು  ರಘುರಾಮ್‌ ಮಾಡಿದ್ದಾರೆ. ಇಲ್ಲಿ ಹದಿನೈದು ಹಾಡುಗಳಿದ್ದರೂ, ಅವೆಲ್ಲವೂ ಪಲ್ಲವಿ ಚರಣದಿಂದ ಕೂಡಿವೆ. ಎಲ್ಲಾ ಹಾಡುಗಳಿಗೂ ಮೂಲ ರಾಗ ಬಳಸಿ ಹಾಡಲಾಗಿದೆ. ಈ ಕಾರ್ಯಕ್ರಮದ ಮೂಲ ಉದ್ದೇಶ ಎಲ್ಲರೂ ಲಾಕ್‌ಡೌನ್‌ ಸಮಯದಲ್ಲಿ ಮನೆಯಲ್ಲಿದ್ದಾರೆ.

ಹಳೆಯ ನಟರ ಚಿತ್ರಗಳ ಹಾಡುಗಳ ಬಗ್ಗೆ  ಹಳಬರಿಗೆ ಗೊತ್ತು. ಆದರೆ, ಇಂದಿನ ಜನರೇಷನ್‌ಗೂ ಗೊತ್ತಾಗಬೇಕು ಎಂಬ ಕಾರಣಕ್ಕೆ ಜನಪ್ರಿಯ ಹಾಡುಗಳನ್ನು “ಗಂಧದ ಗುಡಿಯ ಗಂಧರ್ವರು ‘ ಶೀರ್ಷಿಕೆಯಡಿ ಪ್ರಸಾರ ಮಾಡಲಾಗಿದೆ. ಇನ್ನು ಎಲ್ಲಾ ಗಾಯಕರು ತಮ್ಮ ತಮ್ಮ  ಮನೆಯಲ್ಲೇ ಹಾಡಿ ಕಳುಹಿಸಿದ್ದಾರೆ. ಇದಕ್ಕೆ ಒಳ್ಳೆಯ ಮೆಚ್ಚುಗೆಯೂ ಸಿಕ್ಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next